ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಣ್ಣಗಾಗುತ್ತಾಳೆ ಒಲೆಯಿಂದ ಹೊರಬಿದ್ದ ಅಡುಗೆಯ ಹಾಗೆ..

ಅಡುಗೆ ಮನೆಯ ಹುಡುಗಿ

ಸೌಮ್ಯ ಕೆ ಆರ್

ಕಣ್ಣಲ್ಲಿ ಕಂಬನಿ ಭೋರ್ಗರೆತ
ಜಿಟಿ ಜಿಟಿ ಸುರಿವ ಮಳೆ
ಇಳೆಗೆ ಬಿದ್ದ ಆರ್ಭಟಕ್ಕೆ
ಅದು ಬಂದಿರುವುದು ಗೊತ್ತಾಗಲಿಲ್ಲ
ಹೇಗೋ ಮರೆಮಾಚಿದ್ದೆ

ಕಣ್ಣಂಚಿನಲ್ಲಿ ಹರಿದ ನೀರು
ಮಳೆಯ ಜೊತೆಗೆ ಇಳೆ ಸೇರಿತ್ತು
ಎದುರು ಬಂದ ಅವನಿಗೆ ತಿಳಿಯಲಿಲ್ಲ
ಎಷ್ಟೊ ಮನಸುಗಳು ದಿನವೂ ಹೀಗೆ ಅಳುತ್ತಿವೆ
ಯಾರ ಅರಿವಿಗೂ ಬಾರದೆ…

ನೆಪ ಮಾತ್ರಕ್ಕೆ ನಿನ್ನ ಜೊತೆ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟಿದ್ದೆ
ನನ್ನಂತ ಅದೆಷ್ಟೋ ಕರುಳುಗಳು
ನಿತ್ಯ ರೋಧಿಸುತ್ತಿವೆ
ಜೊತೆಗಿರುವ ಆಣೆ, ಪ್ರಮಾಣಗಳೀಗೂ ಕಾಣದ ಹಾಗೆ

ಆಗಾಗ ಕುಕ್ಕರ್ ಶಬ್ದದಂತೆ
ಹೆಣ್ದನಿಗಳು ಒಟಗುಟ್ಟುತ್ತವೆ
ತನ್ನೆಲ್ಲಾ ನೋವುಗಳನ್ನ ಅಡುಗೆ ಮನೆಯ
ಸಾಸಿವೆ ಡಬ್ಬಿಗಳಲ್ಲಿ ಬಿಗಿದಿಟ್ಟು
ಆಗಾಗ ಮಾತ್ರ ಸಿಟ್ಟು ಸಿಡಿಯುತ್ತದೆ ಒಗರಣೆಯಂತೆ

ಕೊರಳಿಗೆ ತಾಳಿ ಬಿದ್ದ ಕ್ಷಣವೇ
ಸಹನೆ ಮೈಗೂಡಿಸಿಕೊಂಡಿದ್ದಾಳೆ
ಎಣ್ಣೆಯಂತೆ ಮೆಲುವಾಗಿ ಬದುಕುತ್ತಾಳೆ
ಮನ ಕುದಿಯುತ್ತಿದ್ದಿರೂ ನೋಡಲು ಸೌಮ್ಯ
ನೀರು ಬಿದ್ದು ಕೆಣಕಿದಾಗಲೇ ಭಾವನೆ ಬುಗಿಲೇಳುತ್ತವೆ

ಅಡುಗೆ ಮನೆ ಸೇರಿದ ಹುಡುಗಿ
ಹೆಂಗಸಾಗಿ ಮಮತೆ ಬಡಿಸಿ ಬದುಕುತ್ತಾಳೆ
ಆಗಾಗ ಕ್ರೌರ್ಯ, ದೌರ್ಜನ್ಯಗಳನ್ನುಂಡು
ಬಿಸಿಯಾದಾಗ ಮಾತ್ರ ಅವಳು ಬೆಂಕಿ
ತಣ್ಣಗಾಗುತ್ತಾಳೆ ಒಲೆಯಿಂದ ಹೊರಬಿದ್ದ ಅಡುಗೆಯ ಹಾಗೆ

‍ಲೇಖಕರು Admin

29 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading