ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಣ್ಣಗಾಗಲಿ ಕಂದ ಆ ಬಿಸಿ ರೊಟ್ಟಿ…

ವಿದರ್ಭದಲ್ಲಿ ಆತ್ಮಹತ್ಯೆ ಮಾಡಿಕೊ೦ಡ ರೈತರ ಪೈಕಿ ಒಬ್ಬರಾದ ಕೃಷ್ಣ ಕಲ೦ಬ್ ಕವಿ ಸಹ ಆಗಿದ್ದರು.  ಅವರ ಕವಿತೆಯ ಅನುವಾದ ಸ೦ವರ್ಥ ಸಾಹಿಲ ಅವರಿ೦ದ. ರೊಟ್ಟಿ ಬೇಡುವ ಹಸಿದ ಕ೦ದನಿಗೆ ಉರಿವ ಸೂರ್ಯನನ್ನು ತೋರಿಸುವ ತಾಯಿಯ ಸ೦ಕಟದ ದೃಶ್ಯ ಇಲ್ಲಿದೆ…

– ಸ೦ವರ್ಥ ಸಾಹಿಲ್

ಹಸಿದ ಪುಟ್ಟ ಹುಡುಗ

ರೊಟ್ಟಿಗಾಗಿ ಅಂಗೈ ತಟ್ಟೆ ಚಾಚಿದ

ಕಂಬನಿ ಕಂಗಳ ತಾಯಿ

ಬೆಟ್ಟು ಮಾಡಿದಳು ಉರಿಯುವ ಸೂರ್ಯನತ್ತ

ಕೊಡು ನನಗೆ ಆ ರೊಟ್ಟಿಯನು

ಹಸಿದ ಹೊಟ್ಟೆಯಲೇ

ಇರುಳ ಕಳೆದಿರುವೆ

 

ತಣ್ಣಗಾಗಲಿ ಕಂದ ಆ ಬಿಸಿ ರೊಟ್ಟಿ

ದೂರವಿದೆ, ಸುಡುತಲಿದೆ

ಸುಟ್ಟು ಬಿಡಬಹುದು ಬಾಯಿಯನ್ನೂ.

 

ಉರಿವ ಸೂರ್ಯ ನಡೆ ನೆಡೆದು

ಬೆಟ್ಟದ ಹಿಂದೆ ಜಾರಿದ

ಪುಟ್ಟ ಹುಡುಗ

ರೊಟ್ಟಿ ತಣ್ಣಗಾಗಲು ಹಸಿವ ತಣಿಸಿಕೊಳ್ಳಲು

ಕಾಯುತ್ತಾ

ಮತ್ತೆ ನಿದ್ದೆಗೆ ಜಾರಿದ

 

]]>

‍ಲೇಖಕರು G

9 July, 2012

8 Comments

  1. malathi S

    Samvartha!! this is what made me cry while watching Nero’s Guest…what a poem and what an anuvaada!

  2. shanthi k.a.

    hrudaya sparshi……

  3. D.RAVI VARMA

    ಉರಿವ ಸೂರ್ಯ ನಡೆ ನೆಡೆದು
    ಬೆಟ್ಟದ ಹಿಂದೆ ಜಾರಿದ
    ಪುಟ್ಟ ಹುಡುಗ
    ರೊಟ್ಟಿ ತಣ್ಣಗಾಗಲು ಹಸಿವ ತಣಿಸಿಕೊಳ್ಳಲು
    ಕಾಯುತ್ತಾ
    ಮತ್ತೆ ನಿದ್ದೆಗೆ ಜಾರಿದ……..ಇದೇ ಇಂದಿನ ಸಾಮಾಜಿಕ ದುರಂತ …ಕವನದ ಸಾಲುಗಳು ಹಸಿವಿನ ರೌದ್ರಾವತಾರವನ್ನು ಮನಮುಟ್ಟುವ ಹಾಗೆ ಚಿತ್ರಿಸಿ ,ಮನಸು ಅದೇಕೋ ಆ ಹಸಿದ ಬಾಲಕನ ಚಿತ್ರ ಕಣ್ಣಮುಂದೆ ಕಾಡುತ್ತಿದೆ .ಹಸಿದ ಮಗು,ಅಸಾಯಕ ತಾಯಿ ಅವರ ಅಂತರಾಳದ ನೋವು ….. ಇದಕ್ಕೆಲ್ಲ ಕೊನೆ ಎಂದು ಎಂಬ ಪ್ರಸ್ನೆ ಕಾಡುತ್ತಿದೆ…
    ರವಿ ವರ್ಮ ಹೊಸಪೇಟೆ

  4. Savita Inamdar

    ಹಸಿದ ಮಗುವಿಗೆ ಮನ್ನಿಸಿ ಆತ ಮುನಿಯದಂತೆ ನೋಡಿಕೊಳ್ಳುವ ಆ ತಾಯಿಯ ಕಂಬನಿ ತುಂಬಿದ ಕಂಗಳು, ಹತಾಷೆಯ ಸ್ಥಿತಿಯಲ್ಲೂ ದೃತಿಗೆಡದ ಆ ಮಾತೆಯ ಮನೋಧೈರ್ಯವನ್ನು ಕವಿ ಕೃಷ್ಣ ಕಲಂಬ್ ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ. ಸಾಹಿಲ್ ಜಿ ಅವರ ಅನುವಾದ ಈ ಕವಿತೆ ಸಹ ಅದರಷ್ಟೇ ಮನಮುಟ್ಟುವಂತೆ.

  5. Nataraju S M

    ದಿನದ ಕವಿತೆ ಎನ್ನಬಹುದು.. ತುಂಬಾ ಚೆನ್ನಾಗಿದೆ ಅನುವಾದ..

  6. sumathi hegde

    ಮನಸ್ಸಿಗೆ ಬೇಸರ ಮೂಡಿಸುವ ಕವನ…

  7. mmshaik

    uttam kavan

  8. ಇಂದಿರೇಶ ಜೋಶಿ

    ಹೃದಯಸ್ಪರ್ಶಿ ಅಂತಯೇ ಕಟು ಸತ್ಯವನ್ನು ಬಿಂಬಿಸುವ ಪದ್ಯ.ಕರ್ನಾಟಕವೇನು.ವಿಧರ್ಭವೇನು ರೈತನ (ಬಡ)ಬವಣೆ ಮಾತ್ರ ಒಂದೇ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading