ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಂತಿಯ ಮೇಲಿನ ನಡಿಗೆ ಕೊಂಚವೇ ಕದಲಿದರೂ..

ಬದುಕು ಮತ್ತು ಭೂಮಿ

rajahamsa

 ರಾಜಹಂಸ

butterflies in a drawerಭೂಮಿಯ ಪ್ರತಿರೂಪವೇ ಬದುಕು
ತಂತಿಯ ಮೇಲಿನ ನಡಿಗೆ
ಕೊಂಚವೇ ಕೊಂಚ ಕದಲಿದರೂ
ಕ್ಷಣವೊಂದರ ಶೂನ್ಯದಲಿ
ಎಲ್ಲವೂ ಸ್ತಬ್ಧ ಸ್ಮಶಾನ ಮೌನ

ಕಾರ್ಗತ್ತಲು ಹೊಂಬೆಳಕಿನೊಳಗೆ
ಆ ಭೂಮಿ ಸುತ್ತುವ ಹಾಗೆ
ಕಷ್ಟ ಕಾರ್ಪಣ್ಯ ಸುಖದ ಸುಪ್ಪತ್ತಿಗೆ
ನಡುವೆ ಸುತ್ತುವ ನನ್ನ ಬದುಕಿಗೆ
ನೋವು-ನಲಿವು ಬಿಟ್ಟು ಆಚೆ
ತೆರಳುವ ಅಧಮ್ಯ ಹಂಬಲ

ಭೂಮಿ ತಿರುಗುವ ಶಬ್ದ
ಆಲಿಸಿಯೇ ಕಂಗಳಲಿ ಕನಸುಗಳು
ಜನ್ಮ ತಾಳುತ್ತಿವೆಯಂತೆ
ಅದಕ್ಕೆ ಬದುಕು ಉಸಿರಾಡಲೆಂದೇ
ಭೂಮಿಯೂ ಹಸಿರಾಗಿರುವುದು
ನಂಬಿಕೆಯ ಅಲೆಯಲಿ ತೇಲುವ
ಭೂಮಿಗೂ ಬದುಕಿಗೂ
ಏನೇನೂ ವ್ಯತ್ಯಾಸವಿಲ್ಲ

ಚಕ್ರದಂತೆ ಉರುಳುವ ಭೂಮಿಗೆ
ಭೂಭಾಗ ತುಂಬ ಕಡಿಮೆ
ಸಮುದ್ರ ಭಾಗವೇ ಜಾಸ್ತಿ
ನನ್ನ ಬದುಕಿಗೂ ಅಷ್ಟೇ..!
ಭೂ ಭಾಗದಷ್ಟೇ ಸುಖ
ಕಡಲು ಭಾಗದಷ್ಟು ದುಃಖ

 

‍ಲೇಖಕರು admin

4 December, 2015

4 Comments

  1. Anonymous

    bhoomi tiruguva shabdada aalisiye kangalalli kanasugallu, olle sallugalannu thank you

  2. sangeetha raviraj

    ಕವಿತೆ ಚೆನ್ನಾಗಿದೆ
    ಸಂಗೀತ ರವಿರಾಜ್

  3. Anonymous

    super poem

  4. ರಾಜಹಂಸ

    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading