ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಮೂರು ಮಕ್ಕಳ ನಾಟಕಗಳು

ಮೂರು ಮಕ್ಕಳ ನಾಟಕಗಳು

ಕೃಷ್ಣಮೂರ್ತಿ ಬಿಳಿಗೆರೆ

ಬರಗಾಲದ ನೆಲದಲ್ಲಿ ಎಲ್ಲರೂ ಮಳೆ ಹುಚ್ಚರೆ. ಮಳೆ ಪ್ರೀತಿ ಇಲ್ಲಿ ಯಾರನ್ನೂ ಬಿಟ್ಟದ್ದಲ್ಲ. ಇಂಥ ಒಬ್ಬ ಮಳೆ ಹುಚ್ಚನ ಸುತ್ತ ಸುತ್ತುವ ನಾಟಕ ‘ಮಳೆಹುಚ್ಚ’. ಮೋಡ ಕಂಡಾಗ ಹಾಡು ಹೇಳಿಕೊಂಡು, ಕಾಡು ಕಂಡಾಗ ಕತೆ ಹೇಳಿಕೊಂಡು ಮಕ್ಕಳ ಜೊತೆ ಸೇರಿ ಈ ಹಳೆಹುಚ್ಚ ಅರಸುವುದು ಕೇವಲ ಮಳೆಯನ್ನಷ್ಟೇ ಅಲ್ಲ-ಸಹಜ ಬದುಕು ಮತ್ತು ನಂಇಬಿಕೆಗಳನ್ನು ಎಂಬುದು ಈ ನಾಟಕದ ಆಶಯ.

ಇನ್ನೊಂದು ನಾಟಕ ‘ನವಿಲೂರಿನ ಕತೆ’. ಆಸೆ ಭರವಸೆ, ಮೌಢ್ಯ, ಹೊಣೆಗೇಡಿತನ, ಭಮನಿರಸನ, ಕೈಚೆಲ್ಲುವಿಕೆ ಮುಂತಾದ ಭಾವಗಳಲ್ಲಿ ಅದ್ದಿ ತೆಗೆದ ಊರು ಈ ನವಿಲೂರು. ಇಂಥ ನವಿಲೂರಿಗೆ ನವಿಲ ಪ್ರಾಣಗಳನ್ನು ಅರಸಿ ಬರುವ ಮುಖವಾಡದ ವ್ಯಕ್ತಿಯನ್ನು ನಂಬಿ ನವಿಲುಗಳನ್ನು ಕೊಂದು ಬಿನ್ನಕ್ಕಾಗಿ ಹಾತೊರೆಯುವ ಜನರ ನಡುವೆಯೇ ಬೆಟ್ಟಪ್ಪ ಮತ್ತು ಅವನ ಸಹವಾಸಿ ಮಕ್ಕಳು ಸಹಜ ನವಿಲೂರಿನ ಉಳಿವಿಗಾಗಿ ಕನಸುವ ಕತೆಯಿದು.

‘ಅಗಲ ಕಿವಿಯ ಅರಿವುಗಾರ’ ಮತ್ತೊಂದು ನಾಟಕ. ಇವನು ನಿಮ್ಮ-ನಮ್ಮೊಳಗಿನ ನಂಬಿಕೆ ಪ್ರೀತಿಗಳಿಂದಾದ ಜೀವ. ಇವನ ಕಿವಿ ಮೊದಲು ಎಲ್ಲರಂತೆಯೇ ಇದ್ದಂತವು, ಜನರ ದುರಾಸೆ ಮತ್ತು ಅವನ ಅರಿವಿನ ಮಿಶ್ರ ಫಲವಾಗಿ ಅಗಲವಾಗುತ್ತಾ ಹೋಗಿ, ಲೋಕದ ಎಲ್ಲ ಧ್ವನಿಗಳನ್ನು ಕೇಳುವ ಶಕ್ತಿ ಮಡೆಯುತ್ತವೆ. ಅರಿವು ಗೇಡಿಯಾಗಿದ್ದವನು ಅರಿವುಗಾರನಾಗಿ, ಹಾಡುಗಾರನಾಗಿ ಬದಲಾಗುತ್ತಾನೆ. ಮಕ್ಕಳು ಇಂಥ ಅರಿವುಗಾರನ ಹಿಂದೆ ಬೀಳುತ್ತಾರೆ. ನೀವು ನಿಮ್ಮೊಳಗೇ ಇರುವ ಇಂಥ ಅರಿವುಗಾರನ ಹುಡುಕಾಟಕ್ಕೆ ತೊಡಗಿ. ನಿಮ್ಮ ಅರಿವಿಗೆ ನಮಸ್ಕಾರ.


 

‍ಲೇಖಕರು avadhi

18 March, 2013

2 Comments

  1. Siddalingamurthy BG

    ನಮ್ಮೂರ ಲೇಖಕರು. ನನಗೆ ನವಿಲುಗರಿಯನ್ನು ಕೃಷ್ಣಮೂರ್ತಿಯವರಿಂದ ಪದ್ಯ ರೂಪದಲ್ಲಿ (ಸಾಸಲು ಸಾಹಿತ್ಯ ಸಮ್ಮೇಳನದಲ್ಲಿ) ಕೇಳಿದ ನೆನಪಿದೆ.

  2. c v sheshadri holavanahalli

    ಕ್ಱಷ್ಣಮೂರ್ತಿ ಯವ್ರೆ ಶುಭಾಶಯಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading