ಪಂಡಿತ ತಾರಾನಾಥರ ಸಮಗ್ರ ಸಾಹಿತ್ಯ ಸಂಪುಟ – ೨
ಸಂಪಾದಕರು:
ಎಂ. ಧ್ರುವನಾರಾಯಣ
ಕಿ. ರಂ. ನಾಗರಾಜ

ಇಂದು ವೈದ್ಯಕೀಯ ರಂಗದಲ್ಲಿ Intergrated medicine ಎಂದೇ ಕರೆಯಲಾಗುವ ಪದ್ಧತಿಯನ್ನುತಾರಾನಾಥರು ಸುಮಾರು ನೂರು ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದರು. ಎಲ್ಲರಿಗೂ ತಿಳಿದಂತೆ ಅವರು ಓದಿದ್ದು ಹೈದರಾಬಾದಿನ ವೈದ್ಯಕೀಯ ಶಾಲೆಯಲ್ಲಿ. ಆದರೆ ಅವರು ಹೆಸರು ಗಳಿಸಿದ್ದು ಆಯುರ್ವೇದದಲ್ಲಿ. ಅಂದಿನ ತಲೆಮಾರಿನ ಜನ ಅವರನ್ನು ‘ಕರ್ನಾಟಕದ ಧನ್ವಂತರಿ’ಎಂದು ಕರೆಯುತ್ತಿದ್ದರು. ಇದು ಅವರಿಗೆ ಆಯುರ್ವೇದದಲ್ಲಿ ಇದ್ದ ಪ್ರೌಢಿಮೆಯನ್ನು ಸೂಚಿಸುತ್ತದೆ. ತಾರಾನಾಥರು ಹೇಳುವಂತೆ ಅವರು ಆಯುರ್ವೇದ ವಿದ್ಯೆಯನ್ನು ಹೈದರಾಬಾದಿನ ಹಕೀಮ್ ಹರಿಗೋವಿಂದಜೀ ಕವಿರಾಜರಿಂದ ಪಡೆದಿದ್ದರು.
ತಾರಾನಾಥರನ್ನು ಆಯುರ್ವೇದ ವಿಶಾರದ ಭೀಷ್ಮಾಚಾರ್ಯರೆಂದೇ ಕರೆಯುತ್ತಿದ್ದರು. ಅವರು ೧೯೩೪ ರಲ್ಲಿ ರಾಯಚೂರಿನಲ್ಲಿ ನಡೆದ ಪ್ರಥಮ ಅಖಿಲ ಕರ್ನಾಟಕ ಆಯುರ್ವೇದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅದರಂತೆಯೇ ಪುಣೆಯಲ್ಲಿ ನಡೆದ ಬೊಂಬಾಯಿ ಪ್ರಾಂತೀಯ ಸಮ್ಮೇಳನದ (೧೯೩೮) ಅಧ್ಯಕ್ಷರಾಗಿದ್ದರು. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಅನುವಂಶಿಕ ವೈದ್ಯರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಹಂತದಲ್ಲಿ ನಾವು ಗಮನಿಸಲೇಬೇಕಾದ ಒಂದು ಪ್ರಮುಖ ಅಂಶವೆಂದರೆ ತಾರಾನಾಥರ ವಿಶಿಷ್ಟ ಚಿಕಿತ್ಸಾಕ್ರಮ. ಸೋಜಿಗದ ಸಂಗತಿ ಎಂದರೆ ತಾರಾನಾಥರು ಮಂತ್ರ, ತಂತ್ರ, ಯೋಗ ವಿದ್ಯೆಯನ್ನು ತಮ್ಮ ಚಿಕಿತ್ಸಾ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದರು. ಇದರಿಂದಾಗಿ ಅವರ ಚಿಕಿತ್ಸಾ ಪದ್ಧತಿಯು ಭಾರತದಾದ್ಯಂತ ಪ್ರಸಿದ್ಧಿ ಪಡೆದು ವಿದೇಶಿಯರನ್ನು ಆಕರ್ಷಿಸಿತು.
ಎಂ. ಧ್ರುವನಾರಾಯಣ


Dear Mr.Druvanarayana,
Thanks for this information. Where can we buy this book. Also I believe. Would appreciate if you can give me the contact information of the publisher (phone no. address)
Thanks in advance