ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ನಾರಾಯಣ ಬಾಬಾನಗರ ಅವರ ’ಗುಬ್ಬಿ ಗೂಡು’


’ನಿಮ್ಮೆಲ್ಲರ ಮಾನಸ’ ಮಾಸಪತ್ರಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟಗೊಂಡ ನಾರಾಯಣ ಬಾಬಾನಗರ ಅವರ ಗುಬ್ಬಿಗೂಡು ಅಂಕಣ ಬರಹಗಳ ಅಪರೂಪದ ಸಂಕಲನವೇ ‘ಗುಬ್ಬಿಗೂಡು’ ಪುಸ್ತಕ. ಪ್ರಸ್ತುತ ವಿಜ್ಞಾನ ಶಿಕ್ಷಕರಾಗಿ ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾರಾಯಣ ಬಾಬಾನಗರ ಅವರು ತಮ್ಮ ವೃತ್ತಿ ಬದುಕಿನ ಹಲವು ಅಪರೂಪದ ಅನುಭವಗಳನ್ನು ಇಲ್ಲಿ ಬರಹ ರೂಪಕ್ಕಿಳಿಸಿದ್ದಾರೆ. ವಿದ್ಯಾರ್ಥಿಗಳ ಬದುಕಿನ ಕಷ್ಟ, ಬೇಸರ, ಸೋಲು, ಆತಂಕಗಳಿಗೆಲ್ಲ ಶಿಕ್ಷಕನೊಳಗಿನ ಒಬ್ಬ ಸ್ನೇಹಿತನಾಗಿ ಪರಿಹಾರ ಹೇಳಿರುವ ನಾರಾಯಣ ಬಾಬಾನಗರ ಅವರು ತಮ್ಮ ಸಹೋದ್ಯೋಗಿಗಳ ಕೆಲವು ಅನುಭವಗಳ ಬಗ್ಗೆಯೂ ಇಲ್ಲಿ ಬರೆದಿದ್ದಾರೆ. ತಮ್ಮ ವಿದ್ಯಾರ್ಥಿಗಳ ಬದುಕನ್ನು ನೋಡುತ್ತಾ, ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವ ಬಾಬಾನಗರ ಅವರ ಈ ಪುಸ್ತಕದಲ್ಲಿ ಒಟ್ಟು 24 ಅಂಕಣ ಬರಹಗಳಿವೆ.
ಒಟ್ಟು 96 ಪುಟಗಳ ಈ ಪುಸ್ತಕವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಬೆಲೆ 80 ರೂಪಾಯಿ. ಇದು ಬೆನಕ ಬುಕ್ಸ್ ಬ್ಯಾಂಕಿನ 36ನೇ ಪ್ರಕಟಣೆಯಾಗಿದೆ.
 

‍ಲೇಖಕರು G

28 December, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading