ತಮಿಳ್ ಸೆಲ್ವಿ
ಕರುಳಿಗೆ ಬಿದ್ದ ಬೆಂಕಿಯಲ್ಲಿ ….
‘ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ.
ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು.
ನನ್ನಂತೆಯೇ ಇರುವ ಇತರರ ಒಳಿತುಗಳಿಗಾಗಿಯೂ… !’
ಇದು ಸ್ಲೋಗನ್ ಅಲ್ಲ. ನೊಂದು – ಬೆಂದು ಬಸವಳಿದ ಜೀವದ ಆರ್ತಮೊರೆ. ನಮ್ಮಿಂದಲೇ ಆಯ್ಕೆಯಾದ, ನಮ್ಮನ್ನಾಳುತ್ತಿರುವ ಪ್ರಜಾಪ್ರತಿನಿಧಿಗಳಿಗೆ ಇಟ್ಟಿರುವ ಬೇಡಿಕೆ. ತಮ್ಮ ಹಕ್ಕಿಗಾಗಿ ಹೋರಾಡುತ್ತೇವೆಂಬ ಹಂಬಲದ ನುಡಿಗಳು. ಆ ಎಲ್ಲ ಕನಸುಗಳು ನನಸಾಗಲೆಂದು ಹಾರೈಸುತ್ತಾ …

ಜಗತ್ತಿನ ಜೀವರಾಶಿಗಳೆಲ್ಲದರಲ್ಲೂ ಇದ್ದರೂ ಮನುಷ್ಯ ಪ್ರಾಣಿಯಲ್ಲಿ ಮಾತ್ರ ಗುರುತಿಸಲ್ಪಡುವ ಹೆಣ್ಣು ಅಥವಾ ಗಂಡೆಂದು ಗುರುತಿಸಿಕೊಳ್ಳಲಾರದ ರೂಪ ಎಷ್ಟೊಂದು ಸಮಸ್ಯೆಗಳನ್ನು ಸೃಷ್ಟಿಸುತ್ತದೆ? ಅವಮಾನದ ಪ್ರಸಂಗಗಳು ಅದೆಷ್ಟು? ನಮ್ಮೊಳಗಿರುವ ಇದೊಂದು ಅಮಾನವೀಯ ನಡವಳಿಕೆಯೇ ಸರಿ. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುವುದಿಲ್ಲ ! ಬದುಕು ದುಸ್ತರವಾಗಬಾರದು, ಅಸಹನೀಯವಾಗಬಾರದು. ಎಲ್ಲರಂತೆ ನಾನೂ ಕುಹಕ ಮಾಡುತ್ತಿದ್ದೆ. ವಿದ್ಯಾಲ ಬದುಕಿನ ಚಿತ್ರಗಳನ್ನು ಓದುತ್ತಿದ್ದಂತೆ ನನಗರಿವಿಲ್ಲದಂತೆಯೇ ನನ್ನ ಮನಸ್ಸು ಪರಿವರ್ತನೆಯಾಗುತ್ತಿತ್ತು. ಅವಳ ನೊಂದ ನುಡಿಗಳು ಆಂತರ್ಯದಲ್ಲಿ ಆಲಾಪಗೈಯುತ್ತಿವೆ ಗೊತ್ತಿಲ್ಲದ ರಾಗದಲ್ಲಿ.
(ಎಂ. ಬೈರೇಗೌಡ ಅವರು ಬರೆದ ಮುನ್ನುಡಿಯಿಂದ ಆಯ್ದ ಭಾಗ )
ಪ್ರಕಾಶಕರು : ಪ್ರಗತಿ ಗ್ರಾಫಿಕ್ಸ್
ಬೆಲೆ : ರೂ. ೧೫೦/-



0 Comments