ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿಬುಕ್ : ಜಯಪ್ರಕಾಶ್ ಮಾವಿನಕುಳಿ ಅವರ ’ಜಯಭಾರತಿ’

ಜಯಪ್ರಕಾಶ ಮಾವಿನಕುಳಿಯವರ ಜಯಭಾರತಿ ಏಳು ನಾಟಕಗಳ ಸಂಪುಟವನ್ನು ಓದಿದ ನಂತರ ನಾಡಿನ ಗಣ್ಯರು ನೀಡಿದ ಪ್ರತಿಕ್ರಿಯೆಗಳು ಹೀಗಿವೆ : 

‘ಅಭಿಯಾನ’ ನನಗೆ ಇಷ್ಟವಾಯಿತು. ಇಂಥ ಉತ್ತಮ ನಾಟಕ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.

-ಡಾ ಚಂದ್ರಶೇಖರ ಕಂಬಾರ

‘ರೂಪಾಂತರ’ ಓದಿದ ಮೇಲೆ ಮಾವಿನಕುಳಿ ಒಳ್ಳೆಯ ನಾಟಕಕಾರ ಎನ್ನುವುದನ್ನು ಯಾವ ಮನಸ್ಸಿನ ಕಷ್ಟವಿಲ್ಲದೆ ನಾನು ಹೇಳಿ ಅವರನ್ನುಅಭಿನಂದಿಸುತ್ತೇನೆ.

-ಡಾ ಯು ಆರ್  ಅನಂತಮೂರ್ತಿ

‘ಅಕಬರ’ ನಾಟಕದ ಹರಿತ ಸಂಭಾಷಣೆ, ಪ್ರಗತಿಪರ ಚಿಂತನೆ, ವರ್ತಮಾನದ ಆಶಯಗಳು ಇದನ್ನೊಂದು ಪ್ರಬುದ್ಧ ಕೃತಿಯಾಗಿಸಿದೆ. ‘ಮಹಾಯಾತ್ರೆ’ ಕನ್ನಡ ನಾಟಕ ಸಾಹಿತ್ಯಕ್ಕೆ ಒಂದು ಒಳ್ಳೆಯ ಸೇರ್ಪಡೆ.

ಪ್ರೊ ಲಿಂಗದೇವರು ಹಳೆಮನೆ

ಏಳು ನಾಟಕಗಳ ಈ ಸಂಪುಟ ಏಳು ಭಿನ್ನ ಲೋಕಗಳಾಗಿವೆ.

-ಡಾ. ರಾಜಪ್ಪ ದಳವಾಯಿ

‘ಅಭಿಯಾನ’ವನ್ನು ಹವ್ಯಾಸಿ ಮತ್ತು ಕಾಲೇಜು ರಂಗಭೂಮಿ ಉತ್ಸಾಹದಿಂದ ಬರಮಾಡಿಕೊಳ್ಳುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಪ್ರೊ ಹೆಚ್. ಎಸ್. ಉಮೇಶ್

‘ರೂಪಾಂತರ’ ಕನ್ನಡದ ಶ್ರೇಷ್ಠ ನಾಟಕಗಳ ಸಾಲಿನಲ್ಲಿ ಸೇರುತ್ತದೆ.

-ಉದ್ಯಾವರ ನಾಗೇಶ್ ಕುಮಾರ್


‍ಲೇಖಕರು avadhi

31 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading