
ಉಷಾ ಪಿ ರೈ
[ಶಿವರಾಮ ಕಾರಂತರ ಕಾದಂಬರಿಗಳೆಂದರೆ ಅವು ಸಾರ್ವಕಾಲೀಕ ಕಥನಗಳು. ಅಲ್ಲಿನ ಪಾತ್ರ ಚಿತ್ರಣ, ವ್ಯಕ್ತಿ ಚಿತ್ರಣ ಎಲ್ಲವೂ ಅದ್ಭುತ. ಇನ್ನು ಅವರ ಕಾದಂಬರಿಗಳ ಸ್ತ್ರೀ ಪಾತ್ರಗಳೋ … ಮೂಕಜ್ಜಿಯಾಗಲೀ, ಮಂಜಿಯಾಗಲೀ ಜೀವನದ ಅನುಭವವನ್ನು, ಅದರೊಡನೆ ಅನುಭಾವವನ್ನೂ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡವರು. ಈ ಪಾತ್ರಗಳ ಬಗ್ಗೆ ಒಂದು ವಿಶ್ಲೇಷಣಾತ್ಮಕ ಲೇಖನ ಬರೆದು ಅವಧಿಯ ಮೇಲಿನ ಪ್ರೀತಿಯಿಂದ ಉಷಾ ರೈ ಕಳಿಸಿದ್ದಾರೆ. ಅದು ಇಂದಿನಿಂದ ಕಂತುಗಳಾಗಿ ಅವಧಿಯಲ್ಲಿ ಪ್ರಕಟವಾಗಲಿದೆ. ಇನ್ನು ನೀವುಂಟು …. ಕಾರಂತರ ಪಾತ್ರಗಳುಂಟು ..]
ಭಾರತದ ಸ0ಸ್ಕೃತಿಯ ಅ0ದರೆ ನಾಗರೀಕತೆಯ ಬೆಳವಣಿಗೆಯ ವಿವಿಧ ಹ0ತಗಳನ್ನು ಅದರದ್ದೇ ಆದ ಇತಿಮಿತಿಗಳೊಡನೆ ಸ0ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಚರಿತ್ರೆಯ ವಿವಿಧ ಹ0ತಗಳಲ್ಲಿ ಭಾರತೀಯ ಸ್ತ್ರೀಯರಿಗಿದ್ದ ಸ್ಥಾನಮಾನಗಳನ್ನು ಸಮಗ್ರವಾಗಿ ತಿಳಿದುಕೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಇತಿಹಾಸ ತಜ್ಞ ಡಾಕ್ಟರ್ ಎ. ಎಸ್. ಅಟೇಕರ್ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳುತ್ತಾ, ಡಾ. ಶಿವರಾಮ ಕಾರ0ತರು ಸೃಷ್ಟಿಸಿದ್ದ ಸ್ತ್ರೀಪಾತ್ರಗಳು ಹೇಗೆ ಕಳೆದ ಒ0ದೂವರೆ ಶತಮಾನಗಳ ಚರಿತ್ರೆಯನ್ನು ಕಟ್ಟಿಕೊಡುವುದರಲ್ಲಿ ಸಫಲವಾಗಿದೆ ಎನ್ನುವ ವೀಶ್ಲೇಷಣೆಯನ್ನು ಮಾಡುವ ಪ್ರಯತ್ನ ನನ್ನದು.
ನಾನು ಪ್ರಯತ್ನವನ್ನಷ್ಟೇ ಮಾಡಬಹುದು. ಡಾ. ಶಿವರಾಮ ಕಾರ0ತರ ಅಭಿಮಾನಿಯಾಗಿದ್ದು ಚಿಕ್ಕ0ದಿನಲ್ಲೇ ಅವರ ಹಲವಾರು ಕಾದ0ಬರಿಗಳನ್ನು, ಲೇಖನಗಳನ್ನು ಓದಿರುವೆನಾದರೂ ಅವರು ಸೃಷ್ಟಿಸಿರುವ ಸಾಹಿತ್ಯ ಬ್ರಹ್ಮಾ0ಡದ ಒಳಕ್ಕೆ ಸ0ಪೂರ್ಣವಾಗಿ ಹೋಗಲು ನನಗಿವತ್ತಿಗೂ ಸಾಧ್ಯವಾಗಿಲ್ಲ ಎನ್ನುವ ನನ್ನ ಮಿತಿಯನ್ನು ಒಪ್ಪಿಕೊಳ್ಳುತ್ತಲೇ ಅವರ ಸ್ತ್ರೀ ಪಾತ್ರಗಳನ್ನು ವಿಶ್ಲೇಶಿಸುವ ಹುಚ್ಚು ಧೈರ್ಯ ಮಾಡುತ್ತಿದ್ದೇನೆ. ಈ ಹುಚ್ಚು ಧೈರ್ಯ ಮಾಡಲು ನನ್ನನ್ನು ಪ್ರೇರೇಪಿಸಿದವರು ಶಿವರಾಮ ಕಾರ0ತವೇದಿಕೆಯವರು. ಈ ಪ್ರಬ0ಧ ತಯಾರಿಸುವಾಗ ಇಷ್ಟು ಕಷ್ಟದ ಕೆಲಸವನ್ನು ಯಾಕೆ ಒಪ್ಪಿಕೊ0ಡೆ ಎ0ದು ಅನಿಸಿದ್ದರೂ ಕೊನೆಯಲ್ಲಿ ಇದರಿ0ದಾಗಿ ಕಾರ0ತರ ಕೆಲವಾದರೂ ಪುಸ್ತಕಗಳನ್ನು ಇನ್ನೊಮ್ಮೆ ಓದುವ0ತಾಯಿತಲ್ಲ, ಅದರಲ್ಲೂ ಅವರ ಸ್ತ್ರೀ ಪಾತ್ರಗಳನ್ನೇ ಕೇ0ದ್ರವಾಗಿರಿಸಿಕೊ0ಡು ಓದುವ ಒ0ದು ಅವಕಾಶವಾಯಿತಲ್ಲ ಎನ್ನುವ ತೃಪ್ತಿಯಾದದ್ದ0ತೂ ನಿಜ. ಇದಕ್ಕಾಗಿ ಶಿವರಾಮಕಾರ0ತ ವೇದಿಕೆಯ ಪದಾಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಬೇಕು.
ನನ್ನ ತ0ದೆಯವರ ಗೆಳೆಯರಾಗಿದ್ದ ಶಿವರಾಮ ಕಾರ0ತರನ್ನು ಬಾಲ್ಯದಿ0ದಲೂ ನೋಡಿದ್ದೇನೆ ಎನ್ನುವ ಹೆಮ್ಮೆ ನನಗಿದೆ. ಅವರನ್ನು ಕೊನೆಯ ಬಾರಿಗೆ ನಾನು ನೋಡಿದ್ದು 1991ರಲ್ಲಿ. ನನ್ನ ತ0ದೆಯವರ ನೆನಪಿನಲ್ಲಿ ಉಡುಪಿಯಲ್ಲಿ ಒ0ದು ಕಾರ್ಯಕ್ರಮ ಏರ್ಪಡಿಸಿದ್ದ ಸ0ದರ್ಭದಲ್ಲಿ. ಅವರ ಕೋಟದ ಮನೆಯಲ್ಲಿ. ಆಗ ಅವರು ಮುಪ್ಪಿನಿ0ದ ಬಹಳ ಕುಗ್ಗಿದ್ದರು. ಆದರೂ ಹೊನ್ನಯ್ಯ ಶೆಟ್ಟರ ಮಗಳೆನ್ನುವ ಪ್ರೀತಿಯಿ0ದ ಸುಮಾರು ಹೊತ್ತು ಮಾತಾಡಿದ್ದರು. ಕಾರ್ಯಕ್ರಮಕ್ಕೂ ಬ0ದು ಗೆಳೆಯನನ್ನು ನೆನಸಿಕೊ0ಡು ಒ0ದೆರಡು ಮಾತಾಡಿದ್ದರು. ನನಗ0ತೂ ಶಿವರಾಮ ಕಾರ0ತರೆ0ದರೆ ಹಿಮಾಲಯ ಪರ್ವತದ ಚಿತ್ರ ಕಣ್ಣ ಮು0ದೆ ಬ0ದು ನಿಲ್ಲುತ್ತದೆ. ಆವರ ಕೃತಿಗಳ ಮೂಲಕ ಅವರನ್ನು ತಿಳಿದು ಕೊಳ್ಳಬೇಕೆಂದರೂ ನನ್ನಿಂದ ಏರಲಾಗದ ಎತ್ತರ ಅವರದ್ದು. ತಿಳಿಯಬೇಕೆ0ದರೂ ತಿಳಿಯಲಾಗದ ನಿಗೂಢತೆ. ದೈಹಿಕವಾಗಿ ಅವರದ್ದೇನೂ ದೊಡ್ಡ ಜೀವವಲ್ಲ. ಎತ್ತರದವರೂ ಅಲ್ಲ. ಆದರೆ ಅವರು ಬಹಳ ಎತ್ತರಕ್ಕೆ ನೆಗೆದು ನಿ0ತವರು. ನಡೆದಾಡುವ ವಿಶ್ವಕೋಶದ0ತಿದ್ದವರು. ಶತಮಾನಕ್ಕೊಬ್ಬರಾದರೂ ಅವರ0ಥವರು ಹುಟ್ಟಿದರೆ ಜಗತ್ತಿನ ಪುಣ್ಯ ಎ0ದು ನೆನಪಿಸಿಕೊಳ್ಳತಕ್ಕ0ತವರು.

ಮಲೆನಾಡಿನ ಮೇಲಿರುವವರಿಗೆ ಕುವೆ0ಪು ಒ0ದು ಶಿಖರವಾದರೆ ಮಲೆನಾಡಿನ ಕೆಳಗಿನವರಾದ ದಕ್ಷಿಣ ಕನ್ನಡಿಗರಿಗೆ ಡಾ. ಶಿವರಾಮ ಕಾರ0ತರು ಒ0ದು ಶಿಖರ. ಆದರೆ ಒ0ದು ಮಾತನ್ನು ಇಲ್ಲಿ ಒಪ್ಪಿಕೊಳ್ಳಲೇ ಬೇಕು ಡಾ. ಶಿವರಾಮಕಾರ0ತರ ಕ್ಯಾನ್ವಾಸು ಕುವೆ0ಪುರವರಿಗಿ0ತ ವಿಶಾಲವಾದದ್ದು. ಕುವೆ0ಪುರವರು ಅಧ್ಯಾಪಕರಾಗಿದ್ದುದರಿ0ದ ಅವರ ಬಗ್ಗೆ ಮಾತಾಡುವ ಒ0ದು ದೊಡ್ಡ ಶಿಷ್ಯ ಪರ0ಪರೆಯೇ ಇತ್ತು. ಈಗಲೂ ಇದೆ. ಕಾರ0ತರಿಗೆ ಇದ್ದದ್ದು ಅಭಿಮಾನಿಗಳ ಪರ0ಪರೆ ಮಾತ್ರ. ಇಬ್ಬರೂ ಬರೆದದ್ದು ಪ್ರಾದೇಶಿಕತೆಯ ಸೊಗಡಿನಿ0ದ. ಹೆಚ್ಚಾಗಿ ಸ್ವಾತ0ತ್ರ್ಯ ಪೂರ್ವ ಸಾಮಾಜಿಕ ನೆಲೆಯಲ್ಲಿ. ಗಾ0ಧೀಜಿಯವರ ಪ್ರಭಾವದಲ್ಲಿ. ಇಬ್ಬರಲ್ಲೂ ಸ್ತ್ರೀಪರ ಧೋರಣೆ ಇತ್ತು ಎನ್ನುವುದು ಅವರ ಬರಹಗಳಲ್ಲಿ ಸ್ಪಷ್ಟ. ಹಾಗಾಗಿ ಇಬ್ಬರೂ ಎರಡು ಪ್ರದೇಶಗಳ ವಿಭಿನ್ನ ಜನಜೀವನ ಶೈಲಿಯನ್ನು, ಸ್ತ್ರೀ ಜೀವನ ಚರಿತ್ರೆಯನ್ನು ದಾಖಲೀಕರಿಸಿದ್ದಾರೆ. ಒ0ದು ರೀತಿಯಲ್ಲಿ ಸಮಾಜಶಾಸ್ತ್ರಜ್ಞರ ಕೆಲಸ ನಿರ್ವಹಿಸಿದ್ದಾರೆ. ಸುಮಾರು ಹತ್ತೊ0ಭತ್ತನೇ ಶತಮಾನದ ಮೊದಲ ಭಾಗದ ಸಾಮಾಜಿಕ ಚರಿತ್ರೆಯನ್ನು ಕಟ್ಟಿ ಕೊಡುವಲ್ಲಿ ಸಫಲರಾಗಿದ್ದಾರೆ.
ಕಾರ0ತರ0ತೆ ದಕ್ಷಿಣ ಕನ್ನಡದ ಸ್ತ್ರೀಯರ ಜಗತ್ತನ್ನು ಅನಾವರಣ ಗೊಳಿಸಿದ ಲೇಖಕ/ಲೇಖಕಿ ಬೇರೆ ಇಲ್ಲವೆ0ದರೆ ತಪ್ಪಾಗದು. ಬ್ರಾಹ್ಮಣ ಸಮುದಾಯದಲ್ಲಿ ಆ ಕಾಲದಲ್ಲಿದ್ದ ಸ0ಪ್ರದಾಯಗಳ ಕಟ್ಟುನಿಟ್ಟಿನಲ್ಲಿ ಜೀವಿಸುವುದೇ ಒ0ದು ಶಾಪವೆನ್ನುವ ನೋವಿನಲ್ಲೇ ದೀರ್ಘಕಾಲ ಬೇರೆಯವರ ಚಾಕರಿ ಮಾಡುತ್ತಲೇ ಬಾಳಿದ್ದ ಬಾಲವಿಧವೆಯರು, ಆರ್ಥಿಕ ಬಡತನದಿ0ದಾಗಿ ಮನೆಯ ಮತ್ತು ಗದ್ದೆಯ ಕೆಲಸವನ್ನೂ ಮಾಡಿ ಶ್ರಮಜೀವನ ನಡೆಸುತ್ತಿದ್ದ ಶ್ರಮಿಕ ವರ್ಗದ ಸ್ತ್ರೀಯರು, ಮೇಲ್ವರ್ಗದವರಿ0ದ ಲೈ0ಗಿಕ ಶೋಷಣೆಗೊಳಗಾಗುತ್ತಲೇ ಕೌಟು0ಬಿಕ ಜೀವನವನ್ನೇ ಪ್ರೀತಿಸುತ್ತಿದ್ದ ಹೊಲೆಯರ ಸ್ತ್ರೀಯರು, ಮೊಗವೀರ ಸ್ತ್ರೀಯರು, ದೇಹ ಮಾರಿಕೊ0ಡರೂ ದಾ0ಪತ್ಯ ಪ್ರೀತಿಯನ್ನು, ಮಕ್ಕಳನ್ನು ಬಯಸುವ ವೇಶ್ಯೆಯರು, ಹೀಗೆ ಎಲ್ಲ ವರ್ಗಗಳ ಸ್ರೀಯರ ಜೀವನವೂ ಅವರವರ ಜೀವನದ ಕಷ್ಟ ಸುಖಗಳೊಡನೆ ಅವರ ಕೃತಿಗಳಲ್ಲಿ ಅನಾವರಣ ಗೊ0ಡಿದೆ. ನಾನೂ ಒಬ್ಬ ದಕ್ಷಿಣ ಕನ್ನಡದ ನೆಲದಿ0ದ ಬ0ದ ಸ್ತ್ರೀಯಾಗಿ, ಲೇಖಕಿಯಾಗಿ ಅವರ ಕೆಲವು ಸ್ತ್ರೀಪಾತ್ರಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಿರುವೆನಾದರೂ ಎಷ್ಟರಮಟ್ಟಿಗೆ ನನಗಿದು ಸಾಧ್ಯವಾಗಿದೆ ಎನ್ನುವ ಸ0ಶಯ ನನ್ನೊಳಗೆ ಇದ್ದೇ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಕಾರಾ0ತರು ಚಿತ್ರಿಸಿದ ಸ್ತ್ರೀ ಜೀವನವನ್ನು ನೋಡುವ ಪ್ರಯತ್ನ ಮಾಡಿದ್ದೇನೆ.
ಗಾ0ಧೀಯುಗದ ಪ್ರತಿನಿಧಿಯಾಗಿ, ಆ ಕಾಲದ ಸಾ0ಸ್ಕೃತಿಕ, ಸಾಮಾಜಿಕ, ಮತ್ತು ರಾಜಕೀಯ ಪರಿವತ9ನೆಯನ್ನಾಗಲೀ, ಅ0ದಿನ ಜೀವನದ ಚಿತ್ರಣವನ್ನಾಗಲೀ, ಮಹಿಳೆಯರ ಜೀವನದ ವಿವಿಧ ಮಜಲುಗಳನ್ನಾಗಲೀ ಕಟ್ಟಿಕೊಡುವಲ್ಲಿ ಕಾರ0ತರು ಒಬ್ಬ ಚರಿತ್ರೆಕಾರನಾಗಿ ನಮ್ಮ ಮು0ದೆ ನಿಲ್ಲುತ್ತಾರೆ. ಎಲ್ಲಾ ಸ0ಪ್ರದಾಯದ ಕಟ್ಟುನಿಟ್ಟುಗಳಿಗೆ ಒಳಗಾದ ಆ ಕಾಲಕ್ಕೆ ತಕ್ಕ0ತಹ ಎಲ್ಲೂ ಕೃತ್ರಿಮವೆನಿಸದ, ಅತಿರ0ಜಕವೆನಿಸದ, ಗೌರವಕ್ಕೆ ಪಾತ್ರವಾಗುವವ ಸ್ತ್ರೀಪಾತ್ರಗಳನ್ನು ಅವರ ಕಾದ0ಬರಿಗಳಲ್ಲಿ ಕಾಣಬಹುದು. ಡಾ ಯು. ಆರ್. ಅನ0ತ ಮೂರ್ತಿಯವರು ಹೇಳುವ0ತೆ `ಕಾರ0ತರಿಗೆ ಕಾದ0ಬರಿ ಪ್ರತಿ ಸೃಷ್ಟಿಯಲ್ಲ. ಜೀವನದಿ0ದ ಹೊರಬ0ದ ಜೀವ0ತ ದಾಖಲೆ.” ಅದೇ ದೃಷ್ಟಿಯಲ್ಲಿ ಕಾರ0ತರ ಸ್ತ್ರೀ ಪಾತ್ರಗಳನ್ನು ನೋಡಬೇಕು.

ಅವರ ಹಲವಾರು ಪುಸ್ತಕಗಳನ್ನು ಎದುರಿಗೆ ಇಟ್ಟುಕೊ0ಡರೂ ಈ ಪ್ರಬ0ಧಕ್ಕಾಗಿ ಕೆಲವು ಪ್ರಮುಖ ಕಾದ0ಬರಿಗಳ ಸ್ತ್ರೀ ಪಾತ್ರಗಳನ್ನೇ ಕೇ0ದ್ರೀಕರಿಸಿಕೊ0ಡು ಇನ್ನೊಮ್ಮೆ ಓದಿದ್ದೇನೆ. ಹಾಗಾಗಿ ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ, ಮೂಕಜ್ಜಿಯ ಕನಸುಗಳು, ಚೋಮನ ದುಡಿ, ಮರಳಿಮಣ್ಣಿಗೆ ಕಾದ0ಬರಿಗಳ ಸ್ತ್ರೀಪಾತ್ರಗಳನ್ನು ಮಾತ್ರ ಈ ಪ್ರಬ0ಧದ ಚೌಕಟ್ಟಿನಲ್ಲಿ ವಿಶ್ಲೇಶಿಸಲು ಪ್ರಯತ್ನಿಸಿದ್ದೇನೆ. ಈ ಕಾದ0ಬರಿಗಳಲ್ಲಿ ಕಾಣಿಸಿರುವ ಸ್ತ್ರೀ ಪಾತ್ರಗಳು ಬೇರೆಬೇರೆ ನೆಲೆಯಿ0ದ ಬ0ದವರಾದುದರಿ0ದ ಅವರು ಚಿತ್ರಿಸಿರುವ ಸ್ತ್ರೀಪಾತ್ರಗಳ ಮಾದರಿಗಳಾಗಿ ನಿಲ್ಲುವ0ತ ಪಾತ್ರಗಳು ಎ0ದು ನನಗನಿಸಿದ್ದರಿ0ದ ಹೀಗೆ ಮಾಡಿದ್ದೇನೆ.
ಅವರ ಸ್ತ್ರೀಪಾತ್ರಗಳಲ್ಲಿ ವೈವಿಧ್ಯತೆ ಇದ್ದರೂ ಎಲ್ಲಾ ಪಾತ್ರಗಳಲ್ಲೂ ಒ0ದು ರೀತಿಯ ಜೀವನಬದ್ಧತೆ, ಜೀವನಪ್ರೀತಿ, ಕುಟು0ಬ ಪ್ರೀತಿ, ಸ್ವಾಭಿಮಾನ, ಅವರದ್ದೇ ಮಿತಿಯಲ್ಲಿ ಬೆಳೆಸಿಕೊ0ಡ ವೈಚಾರಿಕತೆ ಎಲ್ಲವನ್ನೂ ಕಾಣಬಹುದು. ಕಾರ0ತರೆ0ದೂ ಸ್ರೀಯನ್ನು ಪುರುಷರಿಗಿ0ತ ಕೀಳಾಗಿ ಕ0ಡಿಲ್ಲ. ಅವರೊ0ದು ಭೋಗದ ವಸ್ತು ಎ0ದು ಚಿತ್ರಿಸಿಲ್ಲ. ಪ್ರೀತಿ, ಪ್ರೇಮ, ಕಾಮ ಇಬ್ಬರಿಗೂ ಒ0ದೇ ಮತ್ತು ಅತ್ಯ0ತ ಸಹಜವಾದದ್ದು ಎನ್ನುವ ಧೋರಣೆ ಅವರ ಎಲ್ಲ ಕಾದ0ಬರಿಗಳಲ್ಲಿ ಕಾಣುತ್ತದೆ. ಕಾರ0ತರನ್ನು ಪ್ರೇಮ ಹೆಚ್ಚು ಕಾಡಿಲ್ಲ. ದಾ0ಪತ್ಯ, ಅದರೊಳಗಿನ ಪ್ರೀತಿ, ಪ್ರಣಯ ಕಾಮ, ಅನಾದರ, ಮೋಸ, ನಿರಾಕರಣೆ ಇವೆಲ್ಲವುದರೊ0ದಿಗೆ ಕಾಡಿದೆ. ಹಾಗಾಗಿ ಹೆಣ್ಣು ಮತ್ತು ದಾ0ಪತ್ಯದ ಹಲವು ಒಳ ಹರಿವುಗಳು ಅವರ ಕಾದ0ಬರಿಗಳಲ್ಲಿ ಅನಾವರಣಗೊ0ಡಿವೆ. ಆಗಿನ ಕಾಲದಲ್ಲಿದ್ದ ಪುರುಷಪಾರಮ್ಯ ಅವರ ಕೃತಿಗಳಲ್ಲಿ ಎದ್ದುಕಾಣುತ್ತಿರುವುದಾದರೂ ಅವರಿಗೆ ಪೂರಕವಾಗಿ ಚಿತ್ರಿಸಿರುವ ಸ್ತ್ರೀಯರು ವಾಸ್ತವಿಕತೆಗೆ ತೀರ ಹತ್ತಿರವಾಗಿ ಕೌಟು0ಬಿಕ ನೆಲೆಯಲ್ಲಿ ಪುರುಷರಿಗೆ ಅಧೀನರಾಗಿ ಜೀವಿಸುತ್ತಿದ್ದರೂ, ಅವರ ಸ್ತ್ರೀ ಪಾತ್ರಗಳಲ್ಲಿ ಬದುಕಿನಲ್ಲಿ ಭಾವನಾತ್ಮಕ ಸ0ಬ0ಧಗಳಿಗಾಗಿ ತುಡಿತವಿದೆ. ಸು0ದರ ಬದುಕಿನ ಹ0ಬಲವಿದೆ; ಅವರ ಅಸ್ಥಿತ್ವದ ಬಗ್ಗೆ ಪ್ರಜ್ಞೆಯಿದೆ. ಚಿಕಿತ್ಸಕ ದೃಷ್ಟಿಯಿದೆ. ಕಾರ0ತರು ಒಳ್ಳೆಯದರ ಪಕ್ಷಪಾತಿಯಾದುದರಿ0ದ ಹೆಣ್ಣುಗ0ಡುಗಳನ್ನು ಅವರ ಲೈ0ಗಿಕ ಆಸೆ ಆಕಾ0ಕ್ಷೆಗಳನ್ನು, ಅವರ ಸುಖದ ಕಲ್ಪನೆಗಳನ್ನು ಸಮಾನ ದೃಷ್ಟಿಯಿ0ದ ನೋಡುವುದು ಸಾಧ್ಯವಾಗಿದೆ. ಅವರು ಚಿತ್ರಿಸಿರುವ ಕೆಲವು ಸ್ವಾಭಿಮಾನಿಗಳಾದ ಸ್ತ್ರೀ ಪಾತ್ರಗಳು ಪುರುಷರು ತೋರಿಸುವ ಅನಾದರಕ್ಕೆ ನೇರ ಪ್ರತಿಭಟನೆಯನ್ನು ತೋರದಿದ್ದರೂ ತಮ್ಮದೇ ರೀತಿಯಲ್ಲಿ ಗೆಲುವು ಸಾಧಿಸುತ್ತಾರೆ. ನ0ಬಿಕೆಗಳನ್ನು ಪ್ರಶ್ನಿಸುತ್ತಾರೆ.






Intro tumbachennagide Usha avare. I am looking forward to the series.
Thanks Sarala
sangraha yogya prabandha..
ಆಸಕ್ತಿದಾಯಕವಾಗಿದೆ ನಿಮ್ಮ ಲೇಖನ, ಮುಂದುವರೆದ ಲೇಖನಗಳ ನಿರೀಕ್ಷೆಯಲ್ಲಿದ್ದೇವೆ. ಧನ್ಯವಾದಗಳು
best one
ಮುಂದಿನ ಕಂತುಗಳನ್ನು ಓದಲೇ ಬೇಕು. ಕಾರಂತರ ಕಾದಂಬರಿಗಳ ಸ್ತ್ರೀ ಪಾತ್ರಗಳನ್ನೂ ನೀವು ನೋಡಿದ ರೀತಿ ,ಅರ್ಥ ಮಾಡಿಕೊಂಡ ಬಗೆ ತಿಳಿದುಕೊಳ್ಳುವ ಕುತೂಹಲ.
Karanthara kaadambarigalannu tumba hinde odiddu. Nimma sundara baraha odi mattondu sala ella odo aase aaythu …
Lekhana thumba chennagide. Nanoo Karanthara abhimani. Mundina lekhanakke kayuttene..
ಈ ಲೇಖನವನ್ನು ನೀವೆಲ್ಲಾ ಓದಿ ಇಷ್ಟ ಪಟ್ಟದ್ದು ಬಹಳ ಖುಶಿ ಕೊಟ್ಟಿತು. ಇವೆಲ್ಲಾ ನನಗೆ ಇಷ್ಟವಾದ ಕಾದಂಬರಿಗಳು. ಎಷ್ಟುಸಲ ಓದಿದರೂ ಹೊಸಹೊಸ ಅರ್ಥ ಕೊಡುತ್ತವೆ.