ಡಾ ನಿರ್ಮಲಾ ಬಟ್ಟಲ ಓದಿದ ‘ಕನಸುಗಳೆ ಹೀಗೆ’

ಡಾ ನಿರ್ಮಲಾ ಬಟ್ಟಲ

ಪ್ರತಿಯೊಬ್ಬರಿಗೂ ಒಂದೊ೦ದು ರೀತಿಯ ಕನಸುಗಳಿರುತ್ತವೆ. ಕೆಲವರಿಗೆ ಕನಸುಗಳನ್ನು ಕಾಣುವುದರಲ್ಲಿ ಸುಖವಿದ್ದರೆ, ಇನ್ನು ಕೆಲವರಿಗೆ ಕನಸು ನನಸು ಮಾಡಿಕೊಳ್ಳುವುದರಲ್ಲಿ ಸುಖವಿದೆ. ಸಮಾಜದ ಒಳಿತಿಗಾಗಿ ಮನುಷ್ಯ ಕಾಣುವ ಕನಸುಗಳು ಅವನನ್ನು ಮಹತ್ವಾಕಾಂಕ್ಷಿಯನ್ನಾಗಿ ಮಾಡುತ್ತವೆ.

ಭಾರತದ ಈ ಭೂಮಿಯಲ್ಲಿ ಸಮಸಮಾಜದ ಕನಸುಗಳನ್ನು ಕಂಡವರು ಬುದ್ಧ ಬಸವ, ಅಂಬೇಡ್ಕರ, ಮಹಾತ್ಮಾ ಗಾಂಧಿ, ಜ್ಯೋತಿಬಾ ಪುಲೆ. ಆದರೆ ಅವು ಏಕಕಾಲದಲ್ಲಿ ನನಸಾಗದೆ ಉಳಿದ ಕನಸುಗಳು ಕಾಲಕಾಲಕ್ಕೆ ಬಂದ ವ್ಯಕ್ತಿಗಳು ಅವುಗಳನ್ನು ನನಸು ಮಾಡುವಲ್ಲಿ ಪ್ರಯತ್ನಿಸುತ್ತಾರೆ. ಅಂತ ಮಹತ್ವಾಕಾಂಕ್ಷೆಯ ಕನಸುಗಳು ಇಂದಿನ ಆಧುನಿಕ ಯುಗದಲ್ಲಿ ಕವಿಯ ಬಂಡಾಯದ ಧ್ವನಿಯಾಗಿ ಹೊರ ಹೊಮ್ಮುತ್ತವೆ.

ಕನಸುಗಳೆ ಹೀಗೆ ಎನ್ನುವ ಹೀಗೊಂದು ಸುಂದರ ಶಿರ್ಶಿಕೆಯಲ್ಲಿ ಕವನ ಸಂಕಲನ ಹೊರತಂದಿರುವವರು ಡಾ. ಶಶಿಕಾಂತ ಪಟ್ಟಣ. ವೃತ್ತಿಯಿಂದ ಔಶಧ ವಿಜ್ಞಾನಿಯಾದರು, ಪ್ರವೃತ್ತಿಯಿಂದ ಕವಿಗಳು, ಪ್ರಗತಿಪರ ಚಿಂತಕರು ಆಗಿದ್ದಾರೆ. ಬೆಳಗಾವಿಯಲ್ಲಿ ನಡೆದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಅತಿಥಿಯಾಗಿ ಬಂದಾಗ ತಮ್ಮ ಕವನ ಸಂಕಲನವನ್ನು ನೀಡಿದ್ದರು.

ಶೀರ್ಷಿಕೆಯಿಂದ ಇದೊಂದು ಪ್ರೇಮ ಗೀತೆಗಳ ಸಂಕಲನವಿರಬೇಕೆ೦ದು ಗ್ರಹಿಸಿದ ನನಗೆ ಸ್ವಲ್ಪ ನಿರಾಸೆ ಉಂಟಾಯಿತು. ಕಾರಣ ಕವನ ಸಂಕಲನದ ೮೨ ಕವನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕವನಗಳಲ್ಲಿ ಬಂಡಾಯದ ಧ್ವನಿ ಮೊಳಗುತ್ತಿತ್ತು. ಇನ್ನು ಅರ್ಧದಷ್ಟು ರಮ್ಯ ಕವಿತೆಗಳು. ನನ್ನ ಗ್ರಹಿಕೆ ಪೂರ್ತಿ ಸುಳ್ಳಾಗಲಿಲ್ಲಾ ಎನ್ನುವ ಸಮಾಧಾನವೂ ಕೂಡ.

ಬಸವಣ್ಣ ಮತ್ತು ನಾವು ಎನ್ನುವ ಕವನದಲ್ಲಿ
“ನಿನ್ನ ಹೆಸರಲ್ಲಿ ಬದುಕ ಕಂಡುಕೊ೦ಡಿದ್ದೇವೆ
ಬೇಕಿಲ್ಲ ನಮಗೆ ನ್ಯಾಯ ತತ್ವ ಸಿದ್ಧಾಂತಗಳು”
ಎನ್ನುವ ಸಾಲುಗಳಲ್ಲಿ ಬಸವಣ್ಣನವರ ಯಾವ ಕನಸನ್ನು ನನಸು ಮಾಡದ ನಾವು ಕಾಯಕ ದಾಸೋಹ ಸಿದ್ಧಾಂತವನ್ನು ಗಟ್ಟಿಗೊಳಿಸಲಿಲ್ಲ, ನೊಂದವರಿಗೆ ಸಾಂತ್ವನ ನುಡಿಯಲಿಲ್ಲ, ಶಾಂತಿ ಸಮತೆಯನ್ನು ಕಟ್ಟಲಿಲ್ಲ. ಬಸವಣ್ಣನವರು ಕಂಡ ಸಮಾಜವನ್ನು ಕಟ್ಟದೆ, ಅವರ ಹೆಸರಿನಲ್ಲಿ ಭಾಷಣ ಪ್ರಕಟಣೆಗಳನ್ನು ಮಾಡ ದುಡ್ಡು ಮಾಡುತ್ತದ್ದೇವೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

‘ಬಸವಣ್ಣನಿಗೆ ಕಾಡಿದವರೆ’ ಎನ್ನುವ ಕವನದಲ್ಲಿ
“ಮೆರೆಯುತಿಹರು
ಬಸವ ಉದ್ಯಮಿಗಳು
ಲಿಂಗ ಲಾಂಛನ ಹೊತ್ತು”
ಎನ್ನುವ ಸಾಲುಗಳಲ್ಲಿ ಗುರು. ಲಾಂಛನ, ಸ್ಥಾವರಗಳನ್ನು ದಿಕ್ಕರಿಸಿದ್ದಕ್ಕೆ ಬಸವಣ್ಣನವರಿಗೆ ಕಾಡಿದವರು ಇಂದು ಬಸವಣ್ಣನ ಹೆಸರಿನಲ್ಲಿ ಉದ್ಯಮಿಗಳಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆಂದು ವಿಡಂಬನೆ ಮಾಡುತ್ತಾರೆ.
ಸತ್ಯ ನಿತ್ಯ ಸಾಯುತ್ತದೆ. ಎನ್ನುವ ಕವನವು
ಸತ್ಯ ನಿತ್ಯ ಸಾಯುತ್ತದೆ
ತತ್ವ ಶಿಲುಬೆಗೆರುತ್ತದೆ
ನೆಲ ಕಚ್ಚುತ್ತದೆ ವೈಚಾರಿಕತೆ
ಸೋಲುತ್ತದೆ ಪ್ರಗತಿಪರತೆ
ಸಿದ್ಧಾಂತಗಳ ಸಮಾಧಿ
ಸಮತೆಯ ಉಸಿರುಗಟ್ಟಿದೆ
ಸಂಪ್ರದಾಯಗಳ ಕೇಕೆ
ಎನ್ನುವ ಮಾರ್ಮಿಕ ಸಾಲುಗಳು ಇಂದಿನ ಮೌಲ್ಯರಹಿತ ಸಾಮಾಜಿಕ ಬದುಕಿನ ಚಿತ್ರಣವನ್ನು ನೀಡುತ್ತದೆ.

ವಲಸೆ ಹೋಗುತ್ತವೆ ಎನ್ನುವ ಕವನವು
ಅನ್ನಕ್ಕಾಗಿ ದುಡಿಯುತ್ತೆವೆ
ಮಣ್ಣಿನಲ್ಲಿ ಮುಖವಿಟ್ಟು
ಮುಗಿಲಿನಲ್ಲಿ ಕನಸಿಟ್ಟು
ಎನ್ನುವ ಸಾಲುಗಳು ವಲಸೆ ಹೋಗುವ ಬಡವರ ಜೀವನದ ಅನಿವರ‍್ಯತೆಗಳನ್ನು, ಶ್ರಮಿಕರ ಬವಣೆಯನ್ನು ಬಿಚ್ಚಿಡುತ್ತದೆ. ನಿತ್ಯ ಜಿವನದ ಮೂಲಭೂತ ಬೇಡಿಕೆಗಳದ ಅನ್ನ, ಅರಿವೆಗಾಗಿ ಜಿವನವನ್ನೇ ಪಣಕ್ಕಿಟ್ಟು ಬೆಟ್ಟ ಅಗೆದು ಕಲ್ಲುಸಿಡಿಸಿ, ದೊಡ್ಡವರ ಚಾಕರಿ ಮಾಡಿದರು ನೆಲೆಯಲ್ಲಿ ಅಲೆಮಾರಿಯಾಗಿ ಅಲೆಯುತ್ತಾರೆಎನ್ನುವ ವಾಸ್ತವ ಚಿತ್ರಣ ಕವನದಲ್ಲಿದೆ.

ಮಾಡಿ ಮುಗಿಸಿದ್ದೇವೆ ಎನ್ನುವ ಕವನದಲ್ಲಿ
ಮಾರಿಕೊಂಡೆವು ನಾವು
ಜಾತಿ ಮತ ಧರ್ಮದ ನೆರಳಿನಲ್ಲಿ
ತೂರಿಕೊಂಡೆವು ಹಣ ಹೆಂಡ ಸೀರೆ ಬಟ್ಟೆಗಳಲ್ಲಿ
ಎನ್ನುವ ಸಾಲುಗಳಲ್ಲಿ ಪ್ರಜಾಪ್ರಭುತ್ವದ ಮತದಾನದ ವ್ಯವಸ್ಥೆಯನ್ನು ಯಾವ ರೀತಿಯಾಗಿ ನಾವು ದುರ್ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವ ವ್ಯಂಗ್ಯವಿದೆ.

ಬ೦ಡುಕೋರ ಬಸವಣ್ಣ ಎನ್ನುವ ಕವನದಲ್ಲಿ
ದುಡಿದು ಬದುಕುವ ಧರ್ಮ
ಹಂಚಿ ತಿನ್ನುವ ಮರ್ಮ
ಸುಟ್ಟು ಹಾಕಿದ ಕರ್ಮ
ಸ್ಥಾವರದ ಕೆಳಗಿಳಿಸಿ
ಜಂಗಮಕೆ ನೀರೆರೆದ
ವೈದಿಕ ಧರ್ಮದ ಆಚರಣೆಗಳ ವಿರುದ್ಧ ಬಂಡಾಯವೆದ್ಧ ಬಸವಣ್ಣನವರು ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡಿದರು ಗುಡಿಗುಂಡಾರ ಸಂಸ್ಕೃತಿಯನ್ನು ದಿಕ್ಕರಿಸಿ ದೇಹವನ್ನೇ ದೇಗುಲ ಮಾಡಿ ಸಮಾಜಕ್ಕೆ ಶ್ರಮ ಸಂಸ್ಕೃತಿ ಕಲಿಸಿದ ಬಸವಣ್ಣನು ಕವಿಯ ಕಣ್ಣಿಗೆ ಬಂಡುಕೋರನಾಗಿ ಕಾಣುತ್ತಾನೆ.
ಬದಲಾಗುತ್ತೇವೆ ಎನ್ನುವ ಕವನದಲ್ಲಿ
ಬಣ್ಣ ಬದಲಾಯಿಸುತ್ತೇವೆ
ಉಸರವಳ್ಳಿಯ ಹಾಗೆ
ಬುದ್ಧ ಬಸವ ಅಂಬೇಡ್ಕರ ಎಂದೆನ್ನುತ್ತಾ
ಕೈಹಿಡಿಯುತ್ತೇವೆ ಕೋಮುವಾದಿಗಳ
ಇಂದು ಬುದ್ಧ ಬಸವ ಅಂಬೇಡ್ಕರ ಹೆಸರಿನಲ್ಲಿ ಅವಕಾಶವಾದಿಗಳಾಗಿದ್ದೇವೆ. ಎನ್ನುವ ಆತಂಕವನ್ನು ಕವಿ ವ್ಯಕ್ತಪಡಿಸುತ್ತಾನೆ.

ಕನಸುಗಳೆ ಹಿಗೇ.. ಎನ್ನುವ ಕವನದಲ್ಲಿ
ಗೆಳೆಯರೇ… ಕನಸುಗಳೇ ಹಿಗೆ
ನೋವಿಗೆ ಕರಗುತ್ತವೆ
ಅಳುವಿಗೆ ಮರಯಗುತ್ತವೆ
ರಾತ್ರಿಯಲಿ ಲಾಲಿ ಹಾದುತ್ತವೆ.
ಎನ್ನುವ ಕವಿ ಕನಸುಗಳು ನಮ್ಮ ಜೋತೆಗಾರನಾಗಿ ನಮ್ಮನ್ನು ಮುನ್ನಡೆಸುತ್ತವೆ. ಕನಸುಗಳಿಗೆ ಸೋಲಿಲ್ಲಾ, ಸಾವಿಲ್ಲಾ, ಹಳಸುವುದಿಲ್ಲಾ ಎನ್ನುವ ಕವಿ ಕನಸುಗಳು ಸದಾ ನಮ್ಮನ್ನು ಚೈತನ್ಯಶೀಲವಾಗಿಡುತ್ತವೆ ಎಂದು ಹೇಳುತ್ತಾನೆ.

ಪುಟ್ಟ ಅಂಗಡಿ ಎನ್ನುವ ಕವನದಲ್ಲಿ
ಮತ್ಸರದ ಮಾರುಕಟ್ಟೆ
ದ್ವೇಶ ಕೋಪ ಹಿಂಸೆ
ಕೋಮು ಗಲಭೆ ವಿಲೇವರಿ
ಅಲ್ಲಿ ನನ್ನದೊಂದು ಪುಟ್ಟ ಅಂಗಡಿ
ಎನ್ನುವ ಕವಿ ಆ ಪುಟ್ಟ ಅಂಗಡಿಯಲ್ಲಿ ಬೆಲೆಕಟ್ಟಲಾರದಂತಹ ವಸ್ತುಗಳನ್ನು ಲಾಭ ನಷ್ಟದ ಲೆಕ್ಕಾಚಾರವಿಲ್ಲದೆ ವ್ಯಾಪಾರ ಮಾಡುತ್ತಾನೆ. ದೈರ್ಯ,ಭರವಸೆಯ ಜೋತೆಗೆ ನಗುವನ್ನು ಉಚಿತವಾಗಿ ಹಂಚುತ್ತಾ ಬುದ್ದ ಬಸವರ ಪಥದಲಿ ಹೆಜ್ಜೆ ಹಾಕುವೆನೆಂದು ಹೇಳುತ್ತಾನೆ.

ಹಿಗೆ ಕವನಗಳು ಸಾಮಾಜಿಕ ಕಳಕಳಿಯ ಕೂಗಾಗಿ, ಅನ್ಯಾಯಕ್ಕೆ ಸಿಡಿದೇಳುವ ದ್ವನಿಯಾಗಿ ಮೂಡಿಬಂದಿವೆ. ಕವನಸಂಕಲನವನ್ನು ಓದಿ ಮುಗಿಸಿದಾಗ ನವಿರು ಭಾವದ ಕವಿತೆಯ ಜೊತೆಗೆ ಬಂಡಾಯದ ಕವಿತೆಗಲೂ ಕೂಡ ಓದುಗನ ಅಂತರಾಳವನ್ನು ಕಲಕುತ್ತವೆ.

‍ಲೇಖಕರು Admin

May 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕಮಲಾ ಗಣಾಚಾರಿ.

    ಒಳ್ಳೆಯ ಸಾಹಿತ್ಯದ ಸಂಗ್ರಹದ ಖಜಾನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: