ಗಜಲ್
ಡಾ. ಗೋವಿಂದ ಹೆಗಡೆ
**
ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ
ಕಳಕೊಂಡ ಕವಿತೆಯಲ್ಲಿ ಹುದುಗಿತ್ತು ಬೆಳಕಿನ ಕರೆ
ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ ಕಂಡಿರಾ
ನೂರೆಂಟು ಕಿಟಕಿಗಳ ತೆರೆದಿತ್ತು ಬೆಳಕಿನ ಕರೆ
ಆಲ ಮತ್ತು ಬಾಲದಲ್ಲಿ ಕಂಡಿತೇ ವಾಸ್ತವ
ನೋವು ಪ್ರೀತಿಯ ಪ್ರಶ್ನೆಯಲ್ಲಿತ್ತು ಬೆಳಕಿನ ಕರೆ
ಹದ್ದು ಪಾರಿನ ಹಿಂದೆ ಮುಂದೆ ವರ್ತಮಾನದ ಕಣ್ಣು
ಬಿನ್ನಹಕೆ ಬಾಯಿಲ್ಲದೆ ತಪಿಸಿತ್ತು ಬೆಳಕಿನ ಕರೆ
ಆ ರೀತಿ ಈ ರೀತಿಯಲ್ಲೂ ಹೊಸಭತ್ತದ ಹಂಬಲ
ಕಣ್ಣೀರ ಕತೆಗಳ ಆಚೆ ಕಾದಿತ್ತು ಬೆಳಕಿನ ಕರೆ
ಸಾವಿನ ಹಾದಿಯಲ್ಲಿ ಉಳಿದ ಪರಿಮಳ ‘ಜಂಗಮ’
ಕಾಲೋಚಿತ ಭಾವದಲ್ಲಿತ್ತು ಬೆಳಕಿನ ಕರೆ
( ನಿನ್ನೆ ನಿಧನರಾದ ಹಿರಿಯ ಲೇಖಕ, ಬಹುಮುಖೀ ಸಾಧಕ ವಿಷ್ಣು ನಾಯ್ಕರಿಗೆ ಅಕ್ಷರಾಂಜಲಿ.
ಅವರ 18 ಕೃತಿಗಳ ಹೆಸರುಗಳನ್ನು ಇಲ್ಲಿ ಸಂಯೋಜಿಸಲಾಗಿದೆ)
0 ಪ್ರತಿಕ್ರಿಯೆಗಳು