ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟ್ಯಾಗಾಸುರರು ಹಾಗೂ ‘ಸಾಗಾ’ಸುರರು..

ಕೇಳ್ರಪ್ಪೋ ಕೇಳಿ…….
ಟ್ಯಾಗಾಸುರರೇ ಹಾಗೂ ‘ಸಾಗಾ’ಸುರರೇ ಕೇಳಿ….

shree

ಶ್ರೀದೇವಿ ಕೆರೆಮನೆ 

ನಿಮ್ಮ ಸ್ಟೇಟಸ್ ಗಳು, ಫೋಟೋಗಳು ನಿಜಕ್ಕೂ ಅತ್ಯಂತ ಸುಂದರ. ನೀವು ಆಡುವ ‘ಸಾಗಾ’ ಆಟವಂತೂ ಆಹಾ…!! ನಿಜಕ್ಕೂ ಚೈತನ್ಯದಾಯಕ. ಆದರೆ ನಿಮ್ಮ ಟ್ಯಾಗ್ ಗೆ ಹಾಗು ಸಾಗಾಕ್ಕೆ ನಾನು ಅರ್ಹಳಲ್ಲ……

tag1ನಾನು ಪದೇ ಪದೇ ಮನವಿ ಮಾಡಿಕೊಳ್ಳುತ್ತಲೇ ಇರುತ್ತೇನೆ. ಆದರೂ ಈ ಟ್ಯಾಗಾಸುರನ ಹಾವಳಿ ಕಡಿಮೆ ಆಗುತ್ತಲೇ ಇಲ್ಲ. ನಾನೇ ನೇರವಾಗಿ ಒಳಗೊಂಡಂತಹ ಅಥವಾ ಸಾಹಿತ್ಯಕ್ಕೆ ಸಂಬಂಧ ಪಟ್ಟ ವಿಷಯವಾದರೆ ಅದು ಓಕೆ. ಆದರೆ ನಾನು ಟ್ಯಾಗ್ ಆಪ್ಶನ್ ನಿಲ್ಲಿಸಿದ್ದರೂ ಅದರ ನೋಟಿಫಿಕೇಶನ್ ಗಳು ಪದೇ ಪದೇ ಇನ್ ಬಾಕ್ಸ್ ಗೆ ಬಂದು ಕಿರಿಕಿರಿ ಮಾಡುತ್ತವೆ.

ಹೀಗಿರುವಾಗ ಯಾವುದೋ ದೇವರ ಪೂಜೆ, ಮತ್ತಾವುದೋ ಫೋಟೋ, ಹೀಗೆ ಟ್ಯಾಗ್ ಮಾಡಿದರೆ ನಿಜಕ್ಕೂ ಅದು ಅಸಹನೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಅಂತಹ ಟ್ಯಾಗ್ ಮಾಡುವವರನ್ನು ಅನ್ ಫ್ರೆಂಡ್ ಕೂಡ ಮಾಡಿದ್ದೇನೆ. ಆದರೂ ‘ಏನ್ರಿ ನಾನು ಇಷ್ಟು ಫ್ರೆಂಡ್ ಆಗಿದ್ದು ಟ್ಯಾಗ್ ಮಾಡಿದ್ರೂ ಬೇಡ ಅಂತೀರಲ್ಲ’ ಎಂದು ಚಾಟ್ ಗೆ ಬಂದು ಹಕ್ಕಿನಿಂದ ವಿಚಾರಿಸಿಕೊಳ್ಳುವವರೂ ಇದ್ದಾರೆ!!

ಇದರೊಟ್ಟಿಗೆ ಈಗ ಸಾಗಾ ಆಟಕ್ಕೆ ಕರೆವವರ ಗೋಳು.

ನಾನು ಸಾಗಾ ಆಡುವುದಿಲ್ಲಪ್ಪೋ.. ಕೆಲವೊಮ್ಮೆ ಸಾಗಾ ಆಟಕ್ಕೆ ಕರೆದವರ ವಾಲ್ ಗೆ ನೇರವಾಗಿ ಹೋಗಿ dont invite for games ಎಂದು ಬರೆದೂ ಬಂದಿದ್ದೇನೆ. ಆದರೂ ಅದು ನಿಂತಿಲ್ಲ.

ದಯವಿಟ್ಟು ಈ ಟ್ಯಾಗಾಸುರರು ಮತ್ತು ಸಾಗಾಸುರರು ಅರ್ಥ ಮಾಡ್ಕೊಳ್ಳಿ. ಮತ್ತೆ ಮತ್ತೆ ನಿಮ್ಮ ವಾಲ್ ಗೆ ಬಂದು ನಾನು ಬರೆಯುವುದು ಅಷ್ಟು ಚಂದ ಕಾಣುವುದಿಲ್ಲ. ಅಲ್ವಾ? ಹೀಗಾಗಿ ಸಾಗಾ, ಟ್ಯಾಗು ಎನ್ನುವ ಮೊದಲು ನನ್ನ ಸ್ನೇಹಿತರ ಪಟ್ಟಿಯಿಂದ ಕೈಬಿಟ್ಟರೂ ನಡೆದೀತು ಅಂತಾದರೆ ಮಾಡಿ….

(ಇದು ನನ್ನ ಕೊನೆಯ ಮನವಿ. ಜೊತೆಗೆ ಎಚ್ಚರಿಕೆ ಕೂಡ)
………………………ಸಿರಿ.

‍ಲೇಖಕರು admin

6 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading