ಬಿಸ್ಮಿಲ್ಲಾ ಮಾಡ್ಕೊಡ್ತೀವಿ ಕೋಳಿ ಕೊಡಿ
ಕುಪ್ಪಳಿಯ ಶೇಷಪ್ಪಗೌಡ್ರ ಮನೆಯಲ್ಲಂತೂ ವಿಚಿತ್ರವೇ ನಡೆದುಹೋಯ್ತು. ತೇಜಸ್ವಿಯ ಆಗಮನದಿಂದ ಖುಷಿಯಾದ ಆ ಮನೆಯವ್ರು ಒತ್ತಾಯದಿಂದ ಊಟಕ್ಕೆ ಕೂರಿಸಿದ್ರು. ಊಟ ಬಡಿಸ್ತಾ ಹಂದಿ ಸಾರು ಎನ್ನುತ್ತಲೇ ಖಾಜಿ ಇದ್ದವರು ಊಟದ ಪಂಕ್ತಿಯಿಂದ ಹೇಳದೆ ಕೇಳದೆ ಪರಾರಿಯಾಗಿಬಿಟ್ರು. ಇದರಿಂದ ಬಹಳ ನೊಂದ್ಕಂಡ ನೆಂಟ್ರು `ಮೊದಲೆ ಹೇಳಬಾರದಿತ್ತ ಈ ವಿಷಯನಾ’ ಅಂತ ನಮ್ಮನ್ನ ಗದರಿದ್ರು.

ತೇಜಸ್ವಿ ಇದ್ದೋರು `ರೀ ಶಾಮಣ್ಣ, ಇನ್ಯಾವ ನೆಂಟರ ಮನಿಗೆ ಹೋದ್ರು ಮೊದಲು ಒಳಗ್ಹೋಗಿ ವೆಜ್ಜಾ ನಾನ್ ವೆಜ್ಜಾ ಅಂತ ಕೇಳ್ಕಂಬನ್ರಿ. ಕೋಳಿ ಕೊಯ್ಯೋದಾದ್ರೆ ಕೊಯ್ಯೋ ಮೊದಲೇ ಕೊಡಲಿಕ್ಕೆ ಹೇಳಿ ಖಾಜಿ ಬಿಸ್ಮಿಲ್ಲಾ ಮಾಡ್ಕೊಡ್ಲಿ. ಇಲ್ಲ ಅಂದ್ರೆ ನಾವು ತಿನ್ನೋದಕ್ಕೂ ಕಲ್ಲು ಹಾಕೊಬೇಕಾಗತ್ತೆ’ ಅಂತ ವಾನರ್ಿಂಗ್ ಕೊಟ್ರು. ಆಮೇಲೆ ನಾನು ಯಾರ ಮನೆಗೇ ಹೋದ್ರು ನೆಂಟ್ರ ಹತ್ರ `ಖಾಜಿಯವರು ಹಂದಿಗಿಂದಿಯೆಲ್ಲ ತಿನ್ನದಿಲ್ಲ ಜೊತೆಗೆ ಕೋಳಿ ಕುರಿ ಮಾಡೋದಿದ್ರೆ ಬಿಸ್ಮಿಲ್ಲಾ ಆಗಲೇಬೇಕು. ಹಂಗೇನಾದ್ರು ನೀವು ಮಾಂಸ ಮಾಡದಿದ್ರೆ ಒಂಚೂರು ಇಲ್ಕೊಡಿ. ಖಾಜಿ ಬಿಸ್ಮಿಲ್ಲಾ ಮಾಡ್ಕೊಡತಾರೆ’ ಅಂತ ನಾಚಿಕೆ ಬಿಟ್ಟು ಕೇಳ್ತಾ ಇದ್ದೆ. ಇದರಿಂದ ನಾವೊಂಚೂರು ಮುಜುಗರಕ್ಕೆ ಒಳಗಾದ್ರು ಎರೆಡೆರಡು ರೀತಿಯ ಲಾಭವೂ ಆಗ್ತಿತ್ತು. ನಾವು ಒಳಗೋಗಿ `ನಾನ್ ವೆಜ್ ಮಾಡ್ತೀರಾ?’ ಅಂತ ಬಾಯಿಬಿಟ್ಟು ಕೇಳೋದ್ರಿಂದ, ಹುಡುಗ್ರು ಸೈಯಲ್ಲ ಪುಳಿಚಾರಲ್ಲೇ ಮುಗಿಸಿ ಬಿಡಾನ ಅಂತ ನಿರ್ಧರಿಸಿದ ನೆಂಟ್ರು ನಾನ್ ವೆಜ್ ಮಾಡೋ ನಿಧರ್ಾರಕ್ಕೆ ಬರೋರು. ಮತ್ತೊಂದು ಸಣ್ಣಪುಟ್ಟ ಕೋಳಿಗಳನ್ನ ಕೊಟ್ರೆ ನೆಂಟ್ರು ಏನೆಂದು ಕೊಂಡಾರೆಂದು ಅವರ ಕೋಳಿ ವಡ್ಡಿಯಲ್ಲಿರುವ ದೊಡ್ಡದಾದ ಹುಂಜ ಅಥವಾ ಮೊಟ್ಟೆ ಇಕ್ಕುತ್ತಿರುವ ಹ್ಯಾಟೆಯನ್ನೇ ಕೊಟ್ಟು ಖಾಜಿಯವರ ಕಡೆಯಿಂದ ಬಿಸ್ಮಿಲ್ಲಾ ಮಾಡಿಸಿ ಸತ್ಕಾರ ಮಾಡುತ್ತಿದ್ದರು.]]>
Like this:
Like Loading...
Related
0 ಪ್ರತಿಕ್ರಿಯೆಗಳು