ಕೋಣಂದೂರು ಲಿಂಗಪ್ಪ ನನ್ನ ಕ್ಲಾಸ್ಮೇಟ್. ಅದಾಗಲೇ ಸಮಾಜವಾದಿ ಚಳುವಳಿ, ಕನ್ನಡ ಚಳುವಳಿಗಳಲ್ಲಿ ಭಾಗವಹಿಸಿದ್ದ ಲಿಂಗಪ್ಪ ಕಾಲೇಜಿನಲ್ಲಿ ಹೋರಾಟಗಾರ ಅಂತ ಗುರುತಿಸಿಕೊಂಡಿದ್ದ. ಒಂದಿನ ತರಗತಿಯಲ್ಲಿ ಭಟ್ರು ಪಾಠ ಮಾಡ್ತಿರಬೇಕಾದ್ರೆ ಏನನ್ನೋ ಕೋಟ್ ಮಾಡ್ತಾ `ಕುವೆಂಪು ಕಾವ್ಯ ಬರೆದ್ರು. ಬೇಂದ್ರೆ ಕಾವ್ಯ ಬರೆದ್ರು. ಬಿ.ಎಂ.ಶ್ರೀಯವ್ರು ಬರೆದಿದ್ದಾರೆ. ಅಷ್ಟೇ ಯಾಕೆ? ನಮ್ಮ ಕೋಣಂದೂರು ಲಿಂಗಪ್ಪನೂ ಒಂದು ಕವಿತೆ ಬರೆದಿದಾನೆ’ ಅಂತ್ಹೇಳಿ ಆ ಎಲ್ಲ ಪ್ರಮುಖ ಕವಿಗಳ ಜೊತೆಗೆ ಕೋಣಂದೂರು ಲಿಂಗಪ್ಪನ ಹೆಸರನ್ನು ಸೇರಿಸಿಬಿಟ್ರು. ಇದನ್ನು ಕೇಳಿ ತರಗತಿಯಲ್ಲಿ ಎಲ್ರೂ ಜೋರಾಗಿ ನಗಕೆ ಶುರುಮಾಡಿದ್ರು. ಎಲ್ಲಿಯ ಕುವೆಂಪು? ಎಲ್ಲಿಯ ಲಿಂಗಪ್ಪ? ಎಂಬಂತೆ. ಇದನ್ನು ಕೇಳಿ ಲಿಂಗಪ್ಪನೂ ಜೋರಾಗಿ ನಗಕ್ಕೆ ಶುರುಮಾಡಿದ. ಎಲ್ರೂ ನಗು ನಿಲ್ಲಿಸಿದ್ರೂ ಲಿಂಗಪ್ಪನಿಗೆ ನಗು ತಡ್ಕಳಕ್ಕಾಗ್ತಿಲ್ಲ. ಅವನ ನಗು ನಿಲ್ದೆ ಭಟ್ರು ಪಾಠ ಮುಂದುವರೆಸೋ ಹಾಗಿರಲಿಲ್ಲ. ಆದರೆ ಲಿಂಗಪ್ಪನ ನಗು ಕೇಳಿ ಭಟ್ರಿಗೆ ಜೋರಾಗಿ ನಗು ಬಂದು ಅವ್ರೆ ನಗಕ್ಕೆ ಶುರುಮಾಡಿದ್ರು. ಆಮೇಲೆ ಎಷ್ಟೋ ಕ್ಷಣದ ನಂತರ `ನಾನೇನು ಸುಮ್ನೆ ಕುವೆಂಪು ಬೇಂದ್ರೆ ಜೊತೆಗೆ ಲಿಂಗಪ್ಪನ ಹೆಸರು ಹೇಳಲಿಲ್ಲ. ಅವನು ಒಂದು ಪದ್ಯ ಬರೆದು ನನಗೆ ಓದಕ್ಕೆ ತಂದುಕೊಟ್ಟಿದ್ದಾನೆ’ ಅಂತ ನಗ್ತಾನೆ ಹೇಳದ್ರು. ಇದನ್ನು ಕೇಳಿ ಮತ್ತೆ ಇಡೀ ತರಗತಿ ನಗೆಗಡಲಲ್ಲಿ ಮುಳುಗಿತು. ಕೊನೆಗೆ ಪೀರಿಯಡ್ ಮುಗಿದಾಗ ಭಟ್ರು ‘ನಗುವಿನಲ್ಲಿ ತರಗತಿ ಮುಕ್ತಾಯ ಕಂಡಿದೆ’ ಅಂತ್ಹೇಳಿ ನಗ್ತಾ ಹೊರಟು ಹೋದ್ರು.
ಪರಮೇಶ್ವರ ಭಟ್ರದ್ದು ಮಹಾ ಹಾಸ್ಯ ಸ್ವಭಾವ. ಅವರು ಏನೇ ಹೇಳಿದ್ರು ಅಲ್ಲೊಂದು ಕೀಟಲೆ, ತುಂಟತನ ಇಣುಕ್ತಿತ್ತು. ಪಾಂಡಿತ್ಯ ಇರೋರು ಮಹಾ ಗಂಭೀರರಾಗಿರ್ತಾರೆ ಅನ್ನೊ ಮಾತಿಗೆ ಅವ್ರು ಅಪವಾದ. ಒಂದು ಸಾರ್ತಿ ಪರಮೇಶ್ವರ ಭಟ್ರ ಹತ್ತಿರ ಪರೀಕ್ಷೆಗೆ ಎಷ್ಟು ಚಾಪ್ಟರ್ ಓದಿಕೊಳ್ಳಬೇಕು. ಯಾವ ಪುಸ್ತಕ ರೆಫರ್ ಮಾಡಬೇಕು ಅಂತ ಕೇಳ್ಕಬರಕೆ ಹೋದೆ ಅವರು ಒಬ್ಬ ಹುಡುಗನ ಜೊತೆ ಏನೋ ಮಾತಾಡ್ತ ನಿಂತಿದ್ರು. ಆ ಹುಡುಗ ಮಾತು ಮುಗಿಸಿ ಎದ್ದು ಹೊರಟ. ಮೇಷ್ಟ್ರು ನಾ ಹೇಳಿದು ನೆನಪಿದೆಯಲ್ಲಾ ಅಂದ್ರು ಅವನು ನಾಚಿಕೆ ಧ್ವನಿಯಲ್ಲಿ ನೆನಪಿದೆ ಸರ್ ಎನ್ನುತ್ತಾ ಹೊರಟು ಹೋದ. ನಂತರ ನನ್ನ ಕಡೆ ತಿರುಗಿ ಮೇಷ್ಟ್ರು `ಏನು ಬಂದಿದ್ದು?’ ಅಂತ ಕೇಳಿದ್ರು ನಾನು `ಪರೀಕ್ಷೆ…’ ಎನ್ನುತ್ತಿದ್ದಂತೆ, ಅವರಿದ್ದೋರು `ಈಗ ಇಲ್ಲಿದ್ನಲ್ಲ, ಅವನಿಗೂ ಅದೇ ಹೇಳಿದಿನಿ. ನಿಂಗೂ ಅದೇ ಹೇಳೋದು ಒಂದಾದ್ರೆ ನಿಂತ್ಕ ಎರಡಾದ್ರೆ ಕೂತ್ಕ’ ಅಂದ್ರು ನಾನು ಬಂದ ನಗುವನ್ನು ತಡ್ಕಂಡು ಏನು ಅರ್ಥವಾದವರ ತರಹ ಕಕಮಕ ನೋಡ್ತಾ ನಿಂತಿದ್ದೆ. ಆಮೇಲೆ ಅವರೇ `ನಿಂಗಲ್ಲ ಅವನಿಗೆ ಹೇಳಿದ್ದು. ಎರಡು ಸಬ್ಜೆಕ್ಟ್ ಹೋಗಿದೆಯಂತೆ. `ಈ ಸರ್ತಿ ಒಂದು ಕಟ್ಟಲಾ ಅಥವಾ ಎರಡು ಸಬ್ಜೆಕ್ಟ್ನ್ನೂ ಒಟ್ಟಿಗೆ ಕಟ್ಟಲಾ’ ಅಂತ ಕೇಳ್ಕಂಬಂದಿದ್ದ ಅದಕ್ಕೆ ಹಂಗೆ ಹೇಳಿ ಕಳಿಸಿದಿನಿ. ನಿಂಗೂ ಅದನ್ನೇ ಹೇಳ ಬೇಕೇನೂ?’ ಅಂದ್ರು. `ಬೇಡ ಸರ್’ ಅಂತ ಹೇಳಿ ನಗ್ತಾ ವಾಪಾಸ್ ಬಂದೆ. ]]>ಟೈಮ್ ಪಾಸ್ ಕಡ್ಲೆಕಾಯಿ : ’ಒ೦ದಾದ್ರೆ ನಿ೦ತ್ಕ, ಎರಡಾದ್ರೆ ಕೂತ್ಕ….’!!
ನಿಮಗೆ ಇವೂ ಇಷ್ಟವಾಗಬಹುದು…

http://youtu.be/k8su6QMCFyc ನೋಡಿ
ಕಾಡು ತೊರೆಯ ಜಾಡು ಪುಸ್ತಕ ಓದಿದ ಮೇಲೆ ಶಮ್ಮನ್ನನವರ ಬಗ್ಗೆ ನಮಗೆ ಹುಟ್ಟುವ ಅಭಿಪ್ರಾಯವೇ ಬೇರೆ.. ತುಂಬಾ ಆಪ್ತರಾಗಿ ಬಿಡುತ್ತಾರೆ.. ಅವರು ನಿಜ ಜೀವನದಲ್ಲಿ ಕೂಡ ಪ್ರತಿಯೊಬ್ಬರ ಜೊತೆ ತುಂಬಾ ಆಪ್ತವಾಗಿ ಮಾತಾಡುತ್ತಾರಂತೆ… ಈ ಪುಸ್ತಕ ಓದುವಾಗ ಕೆಲವೊಮ್ಮೆ ಸುಸ್ತಾಗುವಷ್ಟು ನಗು ಬಂದರೆ ಇನ್ನೂ ಕೆಲವೊಮ್ಮೆ ಅಳು ಬರುತ್ತದೆ… ನಿಜವಾಗಲು ಅವರದು great ವ್ಯಕ್ತಿತ್ವ…