ಮುಂಬೈನಲ್ಲಿ ಐದು ದಶಕಗಳಿಗೂ ಹೆಚ್ಚು ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ, ಕನ್ನಡ ಚಲನಚಿತ್ರ ರಂಗದಲ್ಲೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ ನಿರ್ದೇಶಿಸಿದ ಚಿತ್ರ ‘ಕುಬಿ ಮತ್ತು ಇಯಾಲ’ ಲೋಕಸಭಾ ಟಿ ವಿ ಯಲ್ಲಿ ಪ್ರಸಾರವಾಗಲಿದೆ.
ಜನವರಿ ದಿನಾಂಕ 23 ಶನಿವಾರ ರಾತ್ರಿ 9 ಘಂಟೆಗೆ ಮತ್ತು ಜನವರಿ 24ರನ್ದು ಭಾನುವಾರ ಮಧ್ಯಾನ್ಹ 2 ಘಂಟೆಗೆ ಪ್ರಸಾರವಾಗಲಿದೆ.
ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರಕಥೆ ಮತ್ತು ಸಂಭಾಷಣೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರದ್ದು, ಛಾಯಾಗ್ರಹಣ ಜಿ.ಎಸ್ .ಭಾಸ್ಕರ್, ಸಂಗೀತ ಎಲ್. ವೈಧ್ಯನಾಥನ್, ಸಹ ನಿರ್ದೇಶಕರು ನಟೇಶ್ ಮತ್ತು ಸಾವಂತ್.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಮಾಹಿತಿಗಾಗಿ ಧನ್ಯವಾದಗಳು.