ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿವಿ ಮಾಧ್ಯಮ ಘನತೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ

k v tirumalesh 3ಕಾವೇರಿ ಗಲಭೆ ಸಂದರ್ಭದಲ್ಲಿ ಮಾಧ್ಯಮದ ಪಾತ್ರ ಕುರಿತು ಕೆ ವಿ ತಿರುಮಲೇಶ್ ಅವರು ಬರೆದ ಪ್ರತಿಕ್ರಿಯೆಗೆ

ಬಂದ ಭಿನ್ನ ನೋಟಗಳು ಇಲ್ಲಿವೆ 

ನೀವೂ ಬರೆಯಿರಿ- 

 

ಆನಂದ ಪ್ರಸಾದ್ 

ಮಾಧ್ಯಮಗಳು ಅದರಲ್ಲೂ ಟಿವಿ ಮಾಧ್ಯಮ ಕಾವೇರಿ ವಿವಾದದ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ, ಸಾಕಷ್ಟು ಪ್ರಚೋದನಕಾರಿಯಾಗಿ ನಡೆದುಕೊಂಡಿವೆ.

ನಮ್ಮದೇ ದೇಶದ ಒಂದು ರಾಜ್ಯವಾದ ತಮಿಳುನಾಡಿಗೆ/ತಮಿಳರಿಗೆ ಸೇರಿದ ಹಲವಾರು ವಾಹನಗಳನ್ನು ಸುಟ್ಟು ಹಾಕುವುದು ದೇಶದ್ರೋಹವಲ್ಲವೇ?

media2ಈ ಬಗ್ಗೆ ಒಂದೇ ಒಂದು ಸುದ್ದಿವಾಹಿನಿ ಚಕಾರ ಎತ್ತಲಿಲ್ಲ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯವರು ನಡೆಸಿದ ಒಂದು ಕಾರ್ಯಕ್ರಮದಲ್ಲಿ ದೇಶದ್ರೋಹದ ಘೋಷಣೆ ಕೂಗಲಾಯಿತು ಎಂದು ಭಾರೀ ಚರ್ಚೆಗಳನ್ನು ನಡೆಸಿದ ಸುದ್ದಿವಾಹಿನಿಗಳು, ಎಬಿವಿಪಿ ಸಂಘಟನೆ ನಮ್ಮ ರಾಷ್ಟ್ರಕ್ಕೆ ಸೇರಿದ ತಮಿಳುನಾಡಿನ ವಾಹನಗಳನ್ನು ಸುಟ್ಟುಹಾಕುವಾಗ ಮಾತಾಡಲಿಲ್ಲ,

ಇದು ರಾಷ್ಟ್ರೀಯತೆಗೆ ವಿರುದ್ಧ ಎಂದು ಆಕಾಶ ಭೂಮಿ ಒಂದು ಮಾಡಲಿಲ್ಲ. ತಮಿಳುನಾಡು ಪಾಕಿಸ್ತಾನಕ್ಕೆ ಸೇರಿಲ್ಲ, ಆದರೂ ಅಲ್ಲಿಗೆ ನೀರು ಬಿಡುವುದನ್ನು ಅದೂ ಸುಪ್ರೀಂಕೋರ್ಟಿನಂತಹ ಒಂದು ಅತ್ಯುನ್ನತ ನ್ಯಾಯವ್ಯವಸ್ಥೆ ಆದೇಶಿಸಿರುವಾಗ ಅದನ್ನು ಪಾಲಿಸಬಾರದು ಎಂದು ಗುಲ್ಲೆಬ್ಬಿಸುವುದು ರಾಷ್ಟ್ರೀಯತೆಗೆ ವಿರುದ್ಧವಲ್ಲವೇ?

ಇದನ್ನು ವಿರೋಧಿಸಿ ಸಾರ್ವಜನಿಕ ಸೊತ್ತನ್ನು ಹಾನಿಮಾಡುವುದು ಗಂಭೀರ ದೇಶದ್ರೋಹವಲ್ಲವೇ?

ಈ ಬಗ್ಗೆ ಯಾವುದೇ ಸುದ್ದಿವಾಹಿನಿಗಳು ಜನರಿಗೆ ವಿವೇಕ ಹೇಳಿದ್ದು ಕಂಡುಬರಲಿಲ್ಲ. ಮೇಲಿಂದ ಮೇಲೆ ಬಂದ್ ಮಾಡಿ ಅಸೋಚಾಮ್ ಅಂದಾಜಿಸಿದಂತೆ ೨೫೦೦೦ ಕೋಟಿ ನಷ್ಟ ಆದ ಬಗ್ಗೆ ಯಾವುದೇ ಸುದ್ದಿ ವಾಹಿನಿಗಳು ಜನರಿಗೆ ವಿವೇಕ ಹೇಳಲಿಲ್ಲ.

ಜನರನ್ನು ನೀರಿನ ಹಾಗೂ ಭಾಷೆಯ ವಿಚಾರದಲ್ಲಿ ಉದ್ರೇಕಿಸುವುದು ತಪ್ಪು ಎಂದು ಯಾವ ಸುದ್ದಿವಾಹಿನಿಯೂ ವಿಶೇಷ ಕಾರ್ಯಕ್ರಮ ಮಾಡಿದ್ದು ಕಾಣಲಿಲ್ಲ.

ಈ ವಿಚಾರದಲ್ಲಿ ಪತ್ರಿಕಾ ಮಾಧ್ಯಮ ಸಾಕಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಪತ್ರಿಕಾಮಾಧ್ಯಮದಿಂದ ಟಿವಿ ಮಾಧ್ಯಮದವರು ಕಲಿಯುವುದು ಬಹಳಷ್ಟಿದೆ. ನೀರು ಬಿಡುವುದನ್ನು ವಿರೋಧಿಸಲು ಹೋಗಿ ನಡೆಸಿದ ದಾಂಧಲೆ, ಬಂದ್  ನಿಂದ ಉಂಟಾದ ಕೋಟಿಗಟ್ಟಲೆ ನಷ್ಟಕ್ಕೆ ಹೋಲಿಸಿದರೆ ನೀರು ಬಿಡುವುದರಿಂದ ಆಗುವ ನಷ್ಟ ಎಷ್ಟೋ ಪಟ್ಟು ಕಡಿಮೆ ಇದ್ದೀತು.

ಇದು ನಮ್ಮ ಮಾಧ್ಯಮಗಳಿಗೆ ಕಾಣಿಸದೆ ಇರುವುದು ಶೋಚನೀಯ. ಮಾಧ್ಯಮಗಳು ಜನರಿಗೆ ವಿವೇಕ ಹೇಳಬೇಕೇ ಹೊರತು ಪ್ರಚೋದಿಸುವುದಲ್ಲ. ಈ ವಿಚಾರದಲ್ಲಿ ಟಿವಿ ಮಾಧ್ಯಮಗಳು ಘನತೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ.

 

ಸರೋಜಿನಿ ಪಡಸಲಗಿ 

ತಿರುಮಲೇಶ್ ಅವರ ಪ್ರತಿಕ್ರಿಯೆ ಸ್ವಾಗತಾರ್ಹ.

ಮಾಧ್ಯಮಗಳನ್ನು ದೂರುವುದು ಅವು ಬೇಡವಾದದ್ದನ್ನು ಅತಿರಂಜಿತ ಸುದ್ದಿಯಾಗಿಸಿ, ಬೇಕಾದದ್ದನ್ನ ಬಿಡುವುದಕ್ಕೆ. ಈ ಪ್ರವೃತ್ತಿ ಕಡಿಮೆಯಾಗಲಿ ಅಂತ ಅಷ್ಟೇ.

ಜ್ಞಾನಾಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಮರೆಯುವಂತಿಲ್ಲ. ಹೊರ ಜಗತ್ತಿನ ಹರಿವಲ್ಲಿ ಬರಲು ಅವುಗಳ ಪಾತ್ರ ಎಲ್ಲರಿಗೂ ಗೊತ್ತಿರುವದೇ. ಸರಿ ದಾರಿ ತೋರಲಿ ಅಂತ ಒಂದು ಆಶಯ ಅಷ್ಟೇ

 

ಭಾರತಿ ಹೆಗಡೆ , ಪತ್ರಕರ್ತರು 

televisionತುಂಬಾ ಸತ್ಯ ಸರ್ ನೀವು ಬರೆದದ್ದು.

ಎಲ್ಲರೂ ಇಂದು ಸಮಾಜದಲ್ಲಿ ಆಗುತ್ತಿರುವ ಎಲ್ಲಾ ಅನಾಹುತಗಳ ತಪ್ಪನ್ನು ಮಾಧ್ಯಮಗಳ ಮೇಲೆ ಸಾರಾಸಗಟಾಗಿ  ಹೊರಿಸಿಬಿಡುತ್ತಾರೆ.

ಹಾಗೆಯೇ ಮಾಧ್ಯಮದ ಕುರಿತು ಇಲ್ಲದ ಆದರ್ಶಗಳನ್ನು ಮಾತನಾಡುತ್ತಾರೆ. ಕೇವಲ ದುಡ್ಡು ಮಾಡುವುದಕ್ಕಾಗಿಯೇ ಇರುವುದು ಎಂದು ಹೇಳುತ್ತಾರೆ. ಆದರೆ ನೀವಂದಂತೆ ಅವುಗಳು  ಅವುಗಳ ಉಳಿವಿಗಾಗಿ ಮಾಡುತ್ತಿರುವ ಹೋರಾಟ. ಅದು ಅಲ್ಲಿದ್ದವರಿಗೆ ಮಾತ್ರ ಗೊತ್ತು.

ಹೀಗಿದ್ದೂ ಮೀಡಿಯಾದಿಂದ ಆಗಿರುವ ಪಾಸಿಟಿವ್ ಅಂಶಗಳನ್ನು ಜನ ಮರೆತು ಬಿಡ್ತಾರೆ.

ನೀವಂದಂತೆ ಈ ಕುರಿತು ಗಂಭೀರವಾದ ಚರ್ಚೆ ಆಗಬೇಕು. ಆದರೆ ಈ ಕುರಿತು ಎಲ್ಲಿಯೂ ಚರ್ಚೆ ಆಗದೆ ಮಾಧ್ಯಮವನ್ನು ಬಯ್ಯುವ ಕೆಲಸ ಮಾತ್ರ ಈಗ ಆಗುತ್ತಿರುವುದು ವಿಷಾದ.

‍ಲೇಖಕರು Admin

15 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading