ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ ನಾ ತೇಜಶ್ರೀ ಅವರಿಗೆ ಪ್ರತಿಷ್ಠಿತ ಕಸಾಪ ಪ್ರಶಸ್ತಿ

ಈ ಸಾಲಿನ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ಪ್ರಶಸ್ತಿ‘ಗೆ ಯುವ ಕವಯತ್ರಿ ಜ ನಾ ತೇಜಶ್ರೀ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರತೀ ವರ್ಷ 40 ವರ್ಷದೊಳಗಿನ ಯುವ ಲೇಖಕರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡುತ್ತದೆ. 2013 ನೆ ಸಾಲಿನ ಪ್ರಶಸ್ತಿಗೆ ಜ ನಾ ತೇಜಶ್ರೀ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಫ್ಹಲಕ ಹಾಗೂ 1,11,111 ರೂ ನಗದನ್ನು ಒಳಗೊಂಡಿದೆ.

ತೇಜಶ್ರೀ ಅವರ ಸಮಗ್ರ ಸಾಹಿತ್ಯವನ್ನು ಪರಿಗಣಿಸಿ ಒಮ್ಮತದಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಜ ನಾ ತೇಜಶ್ರೀ ಅವರು ಐದು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಉಸ್ರುಬುಂಡೆ  ಹಾಗೂ ನೀಳ್ಗಾವ್ಯ ‘ಅವನರಿವಲ್ಲಿ’ ಇವರ ಕವನ ಸಂಕಲನಗಳು.
‘ತೇಜಶ್ರೀ ಕವನಗಳಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭಾವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ’ ಎಂದು ಯು ಆರ್ ಅನಂತಮೂರ್ತಿ ಬಣ್ಣಿಸುತ್ತಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಎಂ ಎ ಹಾಗೂ ಭಾಷಾಂತರದಲ್ಲಿ ಡಿಪ್ಲೊಮೋ ಪಡೆದ ತೇಜಶ್ರೀ ನೆರೂದಾ ಹಾಗೂ ಅಲಿ ಸರ್ದಾರ್ ಜಾಫ್ರಿ ಅವರ ಕವಿತೆಗಳನ್ನು ‘ಕಡಲ ತಡಿಯ ಗುಡಾರ’ ಹಾಗೂ ‘ಬೆತ್ತಲೆ ಫಕೀರ’ ಸಂಕಲನಗಳ ಮೂಲಕ ಕನ್ನಡಕ್ಕೆ ತಂದಿದ್ದಾರೆ. ಇದಲ್ಲದೆ ನೀನಾಸಂಗಾಗಿ ‘ವೋಲೆ ಶೋಯಿಂಕಾನ ಸಾವು’ ಹಾಗೂ ‘ರಾಜನ ಕುದುರೆಸವಾರ’ ನಾಟಕಗಳನ್ನುಅನುವಾದಿಸಿದ್ದಾರೆ. ‘ಚೀನೀ ತತ್ವಶಾಸ್ತ್ರದ ಕಥೆ’ ಹಾಗೂ ‘ಭಾರತೀಯ ರಾಷ್ಟ್ರೀಯ ಚಳವಳಿ’ ಇತರ ಅನುವಾದಗಳು.
ಕವಿ ರವೀಂದ್ರರನ್ನು ಕುರಿತು ‘ದೇಶಕಾಲ’ಕ್ಕೆ ವಿಶೇಷ ಸಂಚಿಕೆಯನ್ನು ರೂಪಿಸಿಕೊಟ್ಟದ್ದೂ ಅಲ್ಲದೆ, ಅವರ ಕವನಗಳನ್ನು ಸಂಪಾದಿಸಿದ್ದಾರೆ.

‍ಲೇಖಕರು G

5 April, 2013

48 Comments

  1. ರೂಪ ಹಾಸನ

    ಖುಷಿಯಾಯ್ತು ತೇಜಶ್ರೀ. ಅಭಿನಂದನೆಗಳು.

  2. kum.veerabhadrappa

    nimma kathe kavitegalannu allalli odi istapatta sahasra abhimaanigala paiki naanoo obba tejasri avare, nimage nammellara hardika abhinandanegalu
    kumvee

  3. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಜ .ನಾ .ತೇಜಶ್ರೀ ರವರಿಗೆ ಶುಭಾಶಯಗಳು .
    ‘ಕವಯಿತ್ರಿ’-ಎಂಬ ಕಾಗುಣಿತ ಸರಿಯಾದದ್ದು ಅಂತ ಅನಿಸುತ್ತೆ .ಕವಯತ್ರಿ ,ಕವಿಯಿತ್ರಿ ,ಕವಿಯತ್ರಿ ಇತ್ಯಾದಿ ಪ್ರಯೋಗಗಳು ಅಲ್ಲಲ್ಲಿ ಕಂಡುಬರುತ್ತವೆ .
    ಎಲ್ಲವೂ ಸರಿಯೆ ? ಯಾವುದನ್ನು ಒಪ್ಪಿಕೊಳ್ಳೋಣ ? – ತಿಳಿದವರು ದಯವಿಟ್ಟು ತಿಳಿಸಬೇಕು .

  4. arun joladkudligi

    ತೇಜಶ್ರೀ ಯವರಿಗೆ ಅಭಿನಂದನೆ, ನಿನ್ನ ಬರಹದ ಚೈತನ್ಯ ಇಮ್ಮಡಿಯಾಗಲಿ. ಖುಷಿಯಾಯ್ತು

  5. ಶ್ರೀನಿವಾಸ ಡಿ.ಶೆಟ್ಟಿ

    ಅಭಿನಂದನೆಗಳು ಮೇಡಂ.

  6. ವಸುಧೇಂದ್ರ

    ಅಭಿನಂದನೆಗಳು ತೇಜಶ್ರೀ

  7. chalam

    ತುಂಬಾ ಖುಶಿಯಾಯ್ತು….

  8. Gopaal Wajapeyi

    ತೇಜಶ್ರೀ ಮೇಡಂ… ಹೃತ್ಪೂರ್ವಕ ಅಭಿನಂದನೆಗಳು 🙂

  9. Jayalaxmi Patil

    ಅಭಿನಂದನೆ ತೇಜಶ್ರೀ.

  10. ಹನುಮಂತ ಹಾಲಿಗೇರಿ

    ಅಭಿನಂದನೆಗಳು ಮೇಡಂ.

  11. Vithal Dalawai

    Tejashriyavarige abhinandanegalu

  12. D.Ravivarma

    hrudayapurvaka abhinandanegalu…nimma avanarivalli pustike ninne tane odi mugiside avadhi adarabagge abhipraya kuda kalisalu baredittukondiddene…nimma kaavyavannu barahavannu adamyavaagi istapaduttene..nimma saahitya krushi nirantaravaagirali…
    D.Ravivarma.. hosapete

  13. shivashankar

    ನಿನ್ನ ಬರಹದ ಚೈತನ್ಯ ಇಮ್ಮಡಿಯಾಗಲಿ. ಖುಷಿಯಾಯ್ತು

  14. samyuktha

    ಅಭಿನಂದನೆಗಳು ತೇಜಶ್ರೀ

  15. ಚಂದಿನ

    ತೇಜಶ್ರೀ ಅವರಿಗೆ,
    ಅಭಿನಂದನೆಗಳು..!
    ಬಹಳ ಖುಷಿಯಾಯ್ತು.

  16. Nagaraj Vatarey

    ಕಂಗ್ರಾಟ್ಸ್. ಎಷ್ಟು ಖುಷಿಯ ವಿಷಯ!!

  17. ಕೆ.ಎಂ.ವಿಶ್ವನಾಥ

    ಅಭಿನಂದನೆಗಳು
    ನೀವು ಬೆಳಿದ ನಂತರ ನಿಮ್ಮನ್ನು ಹಿಂಬಾಲಿಸುವ ಚಿಕ್ಕ ಯುವ ಕವಿಗಳಿಗೆ ಬೆಳಿಸಿ

  18. Tharakeshwar V.B.

    Congratulations to Tejashree

  19. Sathish Naik

    Congrats Madam.. ಸಾಧನೆ ಹೀಗೆ ಮುಂದುವರೆಯಲಿ 🙂

  20. Prasad DV

    abhinandanegalu Tajashriyavarige 🙂
    – Prasa DV

  21. ವಿದ್ಯಾ.ಕುಂದರಗಿ.

    ತೇಜಶ್ರೀ ಅಭಿನಂದನೆಗಳು.ತಮ್ಮ ಸಾಹಿತ್ಯ ಸಾವಿರವಾಗಲಿ,ಪ್ರಶಸ್ತಿ-ಪುರಸ್ಕಾರಗಳು ಇಮ್ಮಡಿಯಾಗಲಿ.

  22. savitri

    ಅಭಿನಂದನೆಗಳು ಅಕ್ಕಾವ್ರೆ:-)

  23. G Venkatesha

    ABHINANDANEGALU. Nimma Melina nireekshegalu hecchuttive. Olleya,Gattisahityada nirekshaneyallirutteve.

  24. armanikanth

    abhinandanegalu

  25. hbmadangowda

    ಶ್ರೀಮತಿ ಜ.ನಾ.ತೇಜಶ್ರೀ ಡಾ.ರವಿಶಂಕರ್ ಅವರಿಗೆ ಸಂದ ಗೌರವ ಹಾಸನ ಜಿಲ್ಲೆಗೆ ಹೆಮ್ಮೆ ತರುವ ಸಂಗತಿ. ಪುಕ್ಕಟೆ ಪ್ರಚಾರದ ಬೆನ್ನು ಹತ್ತದೆ, ನಾಡಿನ ತುಂಬೆಲ್ಲಾ ನನಗೆ ಸಾಹಿತಿಗಳು ಪರಿಚಯವಿದ್ದಾರೆ ಎಂದು ಕೊಚ್ಚಿಕೊಳ್ಳದೆ, ತಾವಾಯಿತು, ತಮ್ಮ ಬರವಣಿಗೆಯಾಯಿತು ಎನ್ನುವ ಸಾಹಿತ್ಯ ಕಾಯಕದಲ್ಲಿ ತೊಡಗಿರುವ ಜ.ನಾ.ತೇಜಶ್ರೀ ಅವರಿಗೆ ಇಂತಹ ಪುರಸ್ಕಾರಗಳು ಹೆಚ್ಚಾಗಲಿ ಎಂದು ಶುಭ ಕೋರುತ್ತೇನೆ.

  26. rajashekar

    ಮೇಡಂ ನಿಮ್ಮ ಕವಿತೆಗಳ ಅಭಿಮಾನಿ ನಾನು. ನಿಮಗೆ ಅಭಿನಂದನೆಗಳು.

  27. RAGHU RAM G.N.

    best wishes & Congratulations.Let your work continue
    RAGHU RAM G.N
    K.R.PURAM
    BANGALORE

  28. Udayana

    Abhinandanaani 🙂

  29. ಪಂಡಿತಾರಾಧ್ಯ

    ತುಂಬ ಸಂತೋಷವಾಯಿತು. ತೇಜು ಅಕ್ಕ‌! ಹಾರ್ದಿಕ ಅಭಿನಂದನೆಗಳು

  30. ತೇಜಶ್ರೀ ಜ.ನಾ.

    ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞತೆಗಳು…ಜ.ನಾ.ತೇಜಶ್ರೀ

  31. Ambresh nayak

    Nimma baravanigege U.R.Ananthamurthy gurugala abiprayave innondu prashasthi ,allave akka? Shubavagali……

  32. bharathraj (dhwani)

    congrats madam..

  33. anand rugvedi

    Abhinandanegalu Tejashree

  34. ಉದಯಕುಮಾರ್ ಹಬ್ಬು

    congats madam udayakumar habbu

  35. Kavya Kadame

    Congratulations:)

  36. Kumara Raitha

    ಅಭಿನಂದನೆ ತೇಜಶ್ರೀ… ನಿಮ್ಮ ಬರಹದ ಸೊಗಡು ಮತ್ತಷ್ಟೂ ಹೆಚ್ಚಲಿ….

  37. ganesh vd

    ja na tejashree Abhinandanegalu, nimma kavanagalannu odidene tumba chennagede hagu kavyadalli gattitana ede
    suBhashayagalu

  38. prakash konapur

    abhinandanegalu madam

  39. tejashree ja. na

    Thanks to everyone. Tejashree

  40. Usha Rai

    abhinandhanegaLu Thejashree

  41. ಡಾ.ಪ್ರಕಾಶ ಗ.ಖಾಡೆ

    ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾದ ನಿಮಗೆ ನಮ್ಮ ಕುಟುಂಬ ವರ್ಗದ ಪರವಾಗಿ ಅಭಿನಂದನೆಗಳು.

  42. laxmikant mirajakar

    Abhinandanegalu.

  43. ವೀರಣ್ಣ ಮಂಠಾಳಕರ್

    ನಿಮ್ಮ ಕವಿತೆಗಳ ಧ್ಯಾನಕ್ಕೆ ಮತ್ತು ಅದ್ಬುತ ಸಾಧನೆಗೆ ಸಂದ ಗೌರವ ಇದಾಗಿದೆ. ಅಭಿನಂದನೆಗಳು ಮೇಡಂ.

  44. ತೇಜಶ್ರೀ ಜ.ನಾ.

    Thank you…

  45. sunil Rao

    congratulations 🙂 🙂

  46. heena

    congrats madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading