ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಪಡಿಗೆ ಬೆಸುಗೆಗೊಂಡ ಚಂದಿರ..

ಗಿರಿಯಪ್ಪ ಆಸಂಗಿ 

ತೂತುಗೊಂಡ ಜೋಪಡಿಯಲಿ ಚುಕ್ಕಿಗಳ ಹಿಂಡು ಕಂಡಾವು ನನ್ನೊಡತಿಯೊಳಗ ಬೆಳದಿಂಗಳ ಹಬ್ಬ ಆಗ್ಯಾವು
ಎದೆ ಕಲರವದಾಗ ನನ್ನೂರ ಚಿತ್ರ ಕೆತ್ಯಾವು ಒಳ ಧಗೆ ಕರಗಿಸಿ ಜನರ ಕಣ್ಣಾಗ ಬೆಳದಿಂಗಳ ಹಬ್ಬ ಆಗ್ಯಾವು

ಒಳ್ಳು ಬೀಸುಕಲ್ಲುಗಳ ಬಾಯೊಳಗೆ ಕರುಳು ತಣಿಸೋ ಬೀಜಗಳು ಕುಣಿದಾವು ಗಟ್ಟಿ ನೆತ್ತಿಗಳ ತಣಿಸ್ಯಾವು
ಗುಡಿಸಲ ಕಿಂಡಿಗೆ ಮೆತ್ತಿದಬೆವರ ನಾಲಿಗೆಯ ಮಿಡಿತದಾಗ ಬೆಳದಿಂಗಳ ಹಬ್ಬ ಆಗ್ಯಾವು

ಕಿಂಡಿಯಲಿ ಬೆಸುಗೆಗೊಂಡ ಚಂದಿರ ಚಾಪೆಯ ಬಿರುಕಿಗೆ ಶತಮಾನದ ನಗೆ ಹೊಕ್ಹಂಗ
ಒಲೆಯ ಕಿಡಿಗಳಲಿ ಬೇಯುವ ಜೋಪಡಿಯ ರೊಟ್ಟಿಯ ಕಸುವಿನ್ಯಾಗ ಬೆಳದಿಂಗಳ ಹಬ್ಬ ಆಗ್ಯಾವು

ಸಗಣಿ ಉಂಡ ಪಡಸಾಲಿ ಮೆತ್ತನೆಯ ಮಣ್ಣ ಮೊಳಕೆಯಂತೆ ಹೃದಯದಲಿ ಅರಳೈತಿ
ಗೋಡೆ ತುಂಬಿದ ನವಿಲು ಕಣ್ಣಿನ ಗರಿಗಳು ಬದುಕ ರಟ್ಯಾಗ ಬೆಳದಿಂಗಳ ಹಬ್ಬ ಆಗ್ಯಾವು

ಗಡಿಗೆ ತುಂಬಿದ ನೀರಾಗ ನಕ್ಕು ನಲಿಸಿದ ಸತ್ವ ಗಟ್ಟಿ ಬೇರಿನ ಗುಟ್ಟು ಮನದಾಗ ಇಳಿದ್ಹಂಗ
ಕುಳ್ಳು ಎಣಿಸುವ ಕೈಗಳಲಿ ಗೆಲುವಿನ ಗೆರೆಗಳು ನೆಲದಾಗ ಬೆಳದಿಂಗಳ ಹಬ್ಬ ಆಗ್ಯಾವು

ತೂತುಗೊಂಡ ಸೆರಗು ಗಾಯಗೊಂಡ ಕೈಬಳೆ ಗುಂಗಲಿ ಮುಗಿಲು ಮಬ್ಬಾಗಿ ಕಾಣ್ತೈತಿ
ಗುಡುಗುವ ಗತ್ತಿಗೆ ಚದುರುವ ಬಾಳಿನೆಲೆಗಳು ಮನದಾಗ ಬೆಳದಿಂಗಳ ಹಬ್ಬ ಆಗ್ಯಾವು

ಹಸಿರು ಹೊತ್ತ ಹೊಸ್ತಿಲು ಮಾತ್ರ ಚಡಪಡಿಸೊ ನಕ್ಷೆ ಹೊತ್ತ ಅಲೆಮಾರಿಯ ಗಿರಿ ಕನಸಿನ್ಹಂಗ
ಹೊಗೆ ಕಿಂಡೀಲಿ ಕಾಮನಬಿಲ್ಲು ಮೈಬಿಚ್ಚಿದ ಆಕಾಶದ ನಗೆ ಆಗಿರುವಾಗ ಬೆಳದಿಂಗಳ ಹಬ್ಬ ಆಗ್ಯಾವು

‍ಲೇಖಕರು avadhi

18 March, 2018

2 Comments

  1. Mmshaik

    ನೈಸ್… ಆಡುಭಾಷೆಯಲಿ ಮೂಡಿದ ಸುಂದರ ಕವಿತೆ ಗಿರಿ..

  2. Shreedevi keremane

    ಚಂದವಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading