ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಡಿ ಬಯಸುವ ಒಡನಾಡಿ ತೆವಲು ಬದಲಾದ ಪಾತ್ರಧಾರಿಗಳು ಹಲವು…

ದೇಹಾನುಭಾವ

-ನಾ.ಬಾಲಕೃಷ್ಣ, ಮೈಸೂರು

ಪ್ರೇಮ ನಿನಾದದ ಆರ್ದ್ರ ಸ್ವರಕ್ಕೆ
ಮರುಳಾದ ಭಾವಗಳೊಜ್ಜೆಯಲ್ಲಿ
ನಿರತ ಜೋಡಿಗಳ ಹುಡುಕಹೊರಟೆ:
ರಾಚನಿಕ ಅಂಗಸೌಷ್ಠವದ
ಭಿನ್ನ ದೇಹ ದೇಹದ ಉದ್ದೀಪನದಲ್ಲಿ
ಚುಂಬಕ ಚೋದನಿಕ ಸ್ರವಿಕೆ
ಭಾವುಕತೆಯ ಜಾಡಲ್ಲಿ
ವಿಭಿನ್ನ ಕವಲುದಾರಿ;
ವಾಸ್ತವದ ಆಚೀಚೆ ದಾಟದೆ
ಪ್ರಾಚೀನ ಕವಿಗಳ ವಿಳಾಸ ಹುಡುಕಿದೆ
ಕಾಲದ ಗೋರಿ ಅಗೆದಂತೆ ಕಂಡವೆಷ್ಟೋ
ಹೊಸ ಹುರುಪಿನ ಹದಿಹರೆಯದ ಮೈಥುನ
ಅದರ ಸುತ್ತ ಸುತ್ತುವ ಕವಿಸಮಯ
ದಿನ ದೂಡಿದರೂ ಮತ್ತೆ ಕಾಡಿ
ಜೋಡಿ ಬಯಸುವ ಒಡನಾಡಿ ತೆವಲು ಬದಲಾದ ಪಾತ್ರಧಾರಿಗಳು ಹಲವು
ಹಲುಬುತ್ತ ಎದೆಯೊಡ್ಡಿ ನಿಂತ ಎದೆಗೊದ್ದು
ಧುತ್ತೆಂದು ಕರಗಿದ ಹಸಿಗನಸುಗಳು
ದೇಹ ಮೆದುಳಲ್ಲಿ ಹುದುಗಿ
ತಣಿಯದ ಅತೃಪ್ತ ಭಾವಗಳ ಹಿಂಡು
ದಂಡುಗಟ್ಟಿ ಗುಳೇ ಹೊರಟಿವೆ
ಕಾಣದ ಓಯಸಸ್ಸಿನತ್ತ.
 

‍ಲೇಖಕರು avadhi

28 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading