ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ, ಮಂಜುಳಾಗೆ ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ-ಲೇಖಕ ಜೋಗಿ ಮತ್ತು ಲೇಖಕಿ ಮಂಜುಳಾ ಹಿರೇಮಠ ಅವರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.

‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಹಿರಿಯ ಲೇಖಕ, ಪತ್ರಕರ್ತ ಜೋಗಿ ಅವರ ‘108-ನಾಲ್ಕು ದಶಕದ ಕತೆಗಳು’ ಕೃತಿ ಹಾಗೂ ‘ಚಿಗುರು’ ಪ್ರಶಸ್ತಿಗೆ ಮಂಜುಳಾ ಹಿರೇಮಠ್ ಅವರ ‘ಗಾಯಗೊಂಡವರಿಗೆ’ ಕೃತಿ ಆಯ್ಕೆಯಾಗಿದೆ.

ಪ್ರಶಸ್ತಿಯು ತಲಾ ನಗದು ರೂ.೧೦,೦೦೦, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಡಿಸೆಂಬರ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮತ್ತು ಕಾರ್ಯದರ್ಶಿ ಆರ್.ದೊಡ್ಡೇಗೌಡ ಅವರು ತಿಳಿಸಿದ್ದಾರೆ.

‍ಲೇಖಕರು Admin

28 October, 2021

1 Comment

  1. Sumathi

    ಅಭಿನಂದನೆಗಳು ಜೋಗಿ sir ಮತ್ತು ಮಂಜುಳ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading