ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಹೊಸ ಕವಿತೆ: ಮಳೆ ಸಾಲು

ವೈರಾಗ್ಯದ ಹಾಗೆ

ಬಂತು.

ಸಂಗ ಸಂಗಾತಿ ಅನಂಗರಂಗ

ಪಟ್ಟಾಂಗ ಮಾತುಕತೆ ಮುತ್ತು

ಮತ್ತು ಮತ್ತಷ್ಟು ಬೇಕು

ಎನ್ನಿಸುವ ಹೊತ್ತಿಗೆ ನಿಸ್ಸಂಗ

ಒಳಬಂದ ಹಾಗೆ ಬಂತು.

.

ಮರಣದ ಹಾಗೆ

ಬಂತು.

ಕಟ್ಟಿಸಿದ ಮನೆ ಹುಟ್ಟಿಸಿದ ಮಕ್ಕಳು

ತೊಟ್ಟಿಲು ಕಟ್ಟಿ ತೂಗಿ

ಗಟ್ಟಿಸಿದ ಜೋಗುಳ ಹಾಡುವಾಗ

ಪುತ್ರಶೋಕ ಎರಗಿದ

ಹಾಗೆ ಬಂತು.

.

ವಿಷಾದ ಪತ್ರದ ಹಾಗೆ

ಬಂತು.

ಜೀವನ ಹುರಿಗೊಳಿಸಿ ಭಾವಕ್ಕೆ

ಶಾಖ ಕೊಟ್ಟು

ಬೆಚ್ಚಗೆ ಮಾಡಿ ಬರೆದು ಕಳಿಸುವ

ಹೊತ್ತಿಗೆ ನಿರರ್ಥಕತೆ ಕಾಡುವ

ಹಾಗೆ ಬಂತು.

.

ಪ್ರೇಮದ ಹಾಗೆ

ಬಂತು.

ಕಂಡದ್ದು ಕಾಡಿದ್ದು

ಹನಿದದ್ದು ಹಂಬಲಿಸಿದ್ದು

ಎಲ್ಲ ಹರಳುಹರಳಾಗುವ ಕ್ಷಣ

ವಿರಹ ಅಪ್ಪಳಿಸುವ

ಹಾಗೆ ಬಂತು.

.

ನಡುವಯಸ್ಸಿನ ಹಾಗೆ

ಬಂತು.

ತುಂಬುಗೆನ್ನೆ, ಕಪ್ಪು ಕುರುಳು,

ಅಪ್ಪಲೆಂದೇ ಕಾದಿರುವ ದಪ್ಪ

ತೋಳು, ಎದೆಯೊಳಗೆ ಉರಿವಗ್ನಿ

ಕಣ್ಣಲ್ಲಿ ಮಂದಮಾರುತ

ತುಂಬಿದ ಯೌವನಕ್ಕೆ ಎರವಾಗುವ

ಬಿಳಿಕೂದಲ ಹಾಗೆ

ಬಂತು.

.

ಮಳೆ ಬಂತು.

ನಿರ್ಮೋಹಿ ಬೆಂಗಳೂರು

ನಿರ್ವಿಕಾರ ಮಳೆ.

ನಿರುಪಯುಕ್ತ ಧಾರೆ.

ಬೈಗಳು, ಅಸಹನೆ

ಒದ್ದೆ ಒದ್ದೆ ಮುಸ್ಸಂಜೆ

ಕಣ್ಣೀರು ತುಳುಕಿದ

ಹಾಗೆ ಬಂತು.

 

‍ಲೇಖಕರು G

24 April, 2011

5 Comments

  1. ಪ್ರಜ್ಞಾ

    ಮಳೆ ಹಾಗೆಲ್ಲ ಬಂತೆ? ವೈರಾಗ್ಯದ ಹಾಗೆ, ಮರಣದ ಹಾಗೆ, ವಿರಹ ಅಪ್ಪಳಿಸಿದ ಹಾಗೆ…ಇದನ್ನೆಲ್ಲ ಓದಿದ ಮೇಲೂ ಮಳೆಯ ಮೇಲಿನ ಮೋಹ ಒಂದಿನಿತೂ ಕಡಿಮೆಯಾಗಿಲ್ಲ ನನಗೆ ಗಿರೀಶರವರೇ! but..liked your poem 🙂

    • raju hegade

      aadare idu male bagge baredaddalla!-raju hegde

  2. raju hegade

    cha ide han!!

  3. sritri

    ಪಾಪ! ಬಡಪಾಯಿ ಮಳೆ ಮೇಲೆ ಇಷ್ಟೆಲ್ಲಾ ಅರೋಪಗಳೇ!!

  4. bharathi

    adbhutha annodu bittu nannalli bere padagale illa jogi …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading