ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ದೇವರು ದೊಡ್ಡವನು

ಇಂದು ಪತ್ರಿಕೆಗೆ ರಜೆ.

 

ತುಮಕೂರು ರಸ್ತೆಯಲ್ಲಿ ಬಸ್ಸು ಅಪಘಾತ ಆಗುವುದಿಲ್ಲ.

ಮೈಸೂರು ರೋಡಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ

ವೃದ್ಧದಂಪತಿ ಸಾಯುವುದಿಲ್ಲ.

ದರ್ಶನ್ ಥೇಟರಿಗೆ ಹೋದಾಗ

ಅಭಿಮಾನಿಗಳು ಮುತ್ತಿಕೊಂಡು ಕಂಗೆಡಿಸುವುದಿಲ್ಲ.

ಜೈಲಿನಲ್ಲಿರುವ ರಾಜಕೀಯ ನಾಯಕರಿಗೆ

ಹುಟ್ಟೂರ ಮಣ್ಣು ತಂದು ಕೊಡುವವರಿಲ್ಲ

ಇಂದು ಪತ್ರಿಕೆಗೆ ರಜೆ.

ಚಿನ್ನದ ಬೆಲೆ ಏರುವುದಿಲ್ಲ, ಸೆನ್ಸೆಕ್ಸು ಜಾರುವುದಿಲ್ಲ

ಪೂನಮ್ ಪಾಂಡೆ ಬೆತ್ತಲಾಗುವುದಿಲ್ಲ, ಇಂಡಿಯಾ ಸೋಲುವುದಿಲ್ಲ.

ಗೋಡೆ ಹಾರಿ ಹೋದ ಒರಟ ಗಂಡನ

ಸುದ್ದಿಯಿಲ್ಲ. ಕೇಂದ್ರದ ನಾಯಕರ ರಥಯಾತ್ರೆಯಿಲ್ಲ.

ಸುರತಿಯಲ್ಲಿ ತೊಡಗಿಕೊಂಡವರು ಹೊಟೆಲು

ಕೋಣೆಯಲ್ಲಿ ಅರೆಬೆತ್ತಲೆ ಸಿಕ್ಕಿಬೀಳುವುದಿಲ್ಲ.

ಇಂದು ಪತ್ರಿಕೆಗೆ ರಜೆ.

 

ಒಲ್ಲದ ಪ್ರೇಮಿಗೆ ಆಸಿಡ್ಡು ಸುರಿವವರಿಲ್ಲ

ಸದಾ ನಗುವ ಮುಖ್ಯಮಂತ್ರಿ

ಹಾರ ಬೇಡ ಅನ್ನುವುದಿಲ್ಲ. ಆಸ್ಪತ್ರೆಯಲ್ಲಿರುವ

ಹಿರಿಯ ನಟಿ ಆರೋಗ್ಯ ವಿಚಾರಿಸುವವರಿಲ್ಲ.

ಅಲ್ಲಲ್ಲಿ ಚದುರಿದಂತೆ ಮಳೆಯಾಗುವುದಿಲ್ಲ.

ಶಿರಾಡಿ ಘಾಟಿಯಲ್ಲಿ ಸಂಚಾರ ಅಸ್ತವ್ಯಸ್ತ ಇಲ್ಲ.

ಇಂದು ಪತ್ರಿಕೆಗೆ ರಜೆ.

 

ಹೆಂಡತಿ ಮನೆಯೊಳಗೆ, ಪ್ರೇಯಸಿ ಮನದೊಳಗೆ

ಮಗಳಿಗೆ ಶಾಲೆಗೆ ರಜೆ, ಚಿಕ್ಕಪ್ಪನಿಗೆ ಎಣ್ಣೆಸ್ನಾನ.

ಹಳೆಯ ಪ್ರೇಮಗೀತೆ, ಹಲವಾರು ಸಲ ನೋಡಿದ ಸಿನಿಮಾ

ಪಕ್ಕದ ಮನೆ ಅಂಕಲ್ ಜೊತೆ ಲೋಕಾಭಿರಾಮ.

ನಮ್ಮ ಲೋಕದ ಸುದ್ದಿ, ನಮಗೆ ನಮ್ಮದೇ ಬುದ್ಧಿ

ಮನೆ, ಮಗಳು, ನಮ್ಮ ಬೀದಿಯಲ್ಲಾಡುವ ಮಕ್ಕಳು

ಕೆಲಸದವಳ ಮೇಲೊಂದಿಷ್ಟು ಅನುಕಂಪ. ಸುತ್ತಲಿರುವ ಎಲ್ಲರೂ

ಮನುಷ್ಯರೇ. ಯಾರೇನು ಮಾಡಿದರೂ ಅದು

ವರದಿಯಲ್ಲ, ಸಹಜ ನಡವಳಿಕೆ.

ದೇವರು ದೊಡ್ಡವನು

ಇಂದು  ಪತ್ರಿಕೆಗೆ ರಜೆ.

 

‍ಲೇಖಕರು avadhi

27 October, 2011

12 Comments

  1. Vajramuni

    Dear Jogappa,

    I don’t know why I oft get this feeling–that whenever I read your articles, they read as complicated as poems (by ‘poems,’ I meant the meaningless-yet-marketable crap that some people proudly refer to as the “navya”); and whenever I read your poems, they read as shallow as articles. This could remotely be related to the Schrodinger’s cat–in short, a paradoxical situation. This is quite astonishing yet diabolical. There must either be something wrong with the way I read, or the way you write. May be, other readers can help us figure out who’s right and who’s wrong.

    In any case, your efforts with the pen (and ink of course) are much appreciated!

    Cheers!

    the one and only, the greatest ever,
    -Vajramuni 😉

  2. Bharath

    Thumba dina aadmele jogiyavarinda ondu olleya Kavithe!! Chennagide Sir.

  3. raju hegade

    ದೇವರು ಅಸ್ಟೇನು ದೊಡ್ಡವನಲ್ಲ
    ಟಿ ವಿ ಇರುವುದಲ್ಲ
    ಎಲ್ಲ ಬರುವುದಲ್ಲ!

  4. Radhika

    So true!

  5. Yogi

    Patrikege raje iddaroo bareyuva patrakartana mattondu patrika varadiyantide kavite. Respectable jogi, kavyada bagge uddudda mataduva neeve intha kavite baredare nammanta egaste bareyuva kavigala paadenu?

  6. Pramod

    ಪತ್ರಿಕೆ ಮಾತ್ರವಲ್ಲ ಟೀವಿಗೆ ಕೂಡ ರಜಾ ಬೇಕಿತ್ತು 🙂

  7. sandhya

    Super ! pathrikege raja iddidrinda namage nimma kavithe sikkiddu!

    Innu raja beku 😉

  8. madhu

    ಬರೆದದ್ದೆಲ್ಲ ಅದ್ಭುತ ಎಂದುಕೊಂಡು
    ನಾಮ ಬಲದಿಂದ ಪ್ರಕಟಿಸುವಂತೆ ಮಾಡುವ ಬರಹಗಾರರ
    ಉಡಾಫೆಗಳು ಪ್ರಕಟವಾಗುವುದಿಲ್ಲ!
    ದೇವರು ದೊಡ್ಡವನು
    ಇಂದು ಪತ್ರಿಕೆಗೆ ರಜೆ!

  9. Shivanand

    ankana baraha kooda odo hagila!!!

  10. Sharadhi

    Jogi, this is 4th week since you haven’t published anything here!!!. What’s up man?

  11. SowmyaMurthy

    ಜೋಗಿ ಅವರೇ
    ಕವನ ಹೇಗಿದೆ ಎಂದರೆ ಏನು ಹೇಳುವುದು.? ಪತ್ರಿಕೆಯಲ್ಲಿ ಕೆಲಸ ಮಾಡುವವರಿಗೆ ಕಂಡದ್ದೆಲ್ಲ ಸುದ್ದಿಯೇ.. ಕಂಡದ್ದೆಲ್ಲ ವರದಿಯೇ.. ಪತ್ರಿಕೆಗೆ ರಜ ಎಂದರೆ ಅವನೊಳಗಿನ ಪತ್ರಕರ್ತನಿಗೆ ರಜ ಅಂತ ಹೇಳಿದ್ದಿರ. ಇಲ್ಲದಿದ್ದರೆ ಪಕ್ಕದ ಮನೆಯ ಅಂಕಲ್ ಜೊತೆ ಲೋಕಾಭಿರಾಮದ ಮಾತು ಸಹ ವರದಿಯಗೋ ಅಥವಾ ಸುದ್ದಿಯಾಗಿಯೋ ಕಂಡಿರುತ್ತಿತ್ತು. ಎಲ್ಲವನ್ನು ಅಚ್ಚರಿಯಿಂದ ನೋಡುವ ಪತ್ರಕರ್ತನಿಗೆ ಸಹಜತೆ ಅನ್ನುವುದೇ ಗೊತ್ತಿಲ್ಲ. ಸುತ್ತಲಿರುವವರೆಲ್ಲ ಮನುಷ್ಯರೇ ಅಂತ ಅವನಿಗೆ ರಜ ಬಂದಾಗಲೇ ಗೊತ್ತಾಗಬೇಕಿತ್ತೆ? ಹಾಸ್ಯವಾದರೂ ವಿಪರ್ಯಾಸವಲವೇ? ಪತ್ರಿಕೆಗೆ ರಜೆ ಎನ್ನುವ ಮೂಲಕ ಸಾಮಾನ್ಯ ಮನುಷ್ಯನಂತೆ ಅವನಿಗೂ ಹೆಂಡತಿ ಇದ್ದಾರೆ, ಮಕ್ಕಳಿದ್ದಾರೆ, ಹಳೆಯ ಸಿನೆಮಾಗಳಿವೆ, ಪಕ್ಕದ ಮನೆಯ ಹರಟೆ ಇದೆ ಅಂತ ನೆನಪು ಮಾಡಿಕೊಟ್ಟಿದ್ದೀರ. ನಾನೇನು ಪತ್ರಕರ್ತಳಲ್ಲ. ಆದರೆ ನಿಮ್ಮ ಕವನದಿಂದ ಆ ಅನುಭವವನ್ನು ಅನುಭಾವಿಸಿದೆ..

    ನಿಮ್ಮ ಅಭಿಮಾನಿ
    ಸೌಮ್ಯ
    ಮೈಸೂರು

  12. MUDIRAJA

    sir am u r big fan. nimma e kavan tumba ishta aytu sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading