ತಮ್ಮನ್ನು ಈಗಾಗಲೇ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡ ನಿರೂಪಕರನ್ನು ಗಮಸಿದ್ದೇನೆ. ಅದರಲ್ಲಿ ಕೆಲವರು ಬುದ್ಧಿವಂತರು.ಸಮಯ ಸ್ಪೂರ್ತಿಯಿಂದಲೂ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಾರೆ.ಅದೆ ರೀತಿ ಕೆಲವರು ಯಪ್ಪಾ ಬ್ಯಾಡ ಸಿವ್ನೆ 🙂 ತಪ್ಪೋ ನೆಪ್ಪೋ ಅಂತೂ ಕಾರ್ಯಕ್ರಮ ನಡೆಸಿ ಬಿಡ್ತಾರೆ. ಅನು ಪ್ರಭಾಕರ್ ನನಗೆ ಹೆಚ್ಚು ಜ್ಞಾಪಕಕ್ಕೆ ಬರುವ ನಿರೂಪಕಿ. ಆಕೆ ಜೀ ಟೀವಿ ಯಲ್ಲಿ ಬಾಳು ಬಂಗಾರ ಕಾರ್ಯಕ್ರಮ ನಡೆಸಿ ಕೊಡುವಾಗ ಸಿಕ್ಕಾಪಟ್ಟೆ ನಗು ಬರ್ತಾ ಇತ್ತು .ಆಕೆಗೆ ಎಲ್ಲವೂ ವಿಸ್ಮಯ .
ಒಬ್ಬ ಕಲಾವಿದೆ ಇಷ್ಟೆಲ್ಲಾ ..ಬಿಡಿ ಆಕೆಯ ಅಭಿಮಾನಿಗಳು ಹೆಚ್ಚಾಗಿದ್ದಾರೆ 🙂 . ಆದರೂ ಆಕೆಯ ವಿಸ್ಮಯದ ಬಗ್ಗೆ ಒಂದು ಉದಾಹರಣೆ… ಸಾಮಾನ್ಯವಾಗಿ ಕೆಲವು ರಿಯಾಲಿಟಿ ಷೋ ಗಳಲ್ಲಿ ಪ್ರಶ್ನೆಗಳು ಇದ್ದೆ ಇರುತ್ತದೆ .ಅದೇ ರೀತಿ ಅನು ಶೋನಲ್ಲೂ ಇದ್ದೆ ಇತ್ತು .ಉದಾಹರಣೆಗೆ ಆಕೆ ಸ್ಪರ್ಧಿಯ ಬಳಿ ನಮ್ಮ ದೇಶದ ರಾಜಧಾನಿ ಯಾವುದು ? ಅಂತ ಕೇಳ್ತಾ ಇದ್ರು .. ಉತ್ರ ಸಿಕ್ರೆ ತಕ್ಷಣ ಆಶ್ಚರ್ಯದ ಮುಖ ಮಾಡಿ ನಿಮಗೆ ಮೊದಲೇ ಗೊತ್ತಿತ್ತ ಎಂದು ಕೇಳ್ತಾ ಇದ್ರು ಮರೆಯದೆ:-) ಕೊನೆಗೆ ಇಸ್ ಡಿ ರೈಟ್ ಆನ್ಸರ್ :-)ಎಂದು ಸೊಳ್ಳೆ ಓಡಿಸುವ ಹಾಗೆ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತ ಪಡಿಸ್ತಾ ಇದ್ರು 🙂 .




0 Comments