ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿಟಿ ಜಿಟಿ ಹಿಡಿದ ಮಳೆ ಹನಿಯಂತೆ ನಿನ್ನ ನೆನಪ ಯಾನ…

ಗಜಲ್

ವೈ.ಬಿ.ಹಾಲಬಾವಿ


ನೀನಿಲ್ಲದೆ ಒಂದೇ ಸಮನೆ ಬಿಡದೆ ಕಾಡುತಿದೆ ಒಂಟಿತನ

ಎದೆ ಭಾರ ನಿಟ್ಟುಸಿರು ಎಡೆಬಿಡದೆ ಚಡಪಡಿಸುತಿದೆ ಒಂಟಿತನ ||ಮತ್ಲಾ||

 

ಜಿಟಿ ಜಿಟಿ ಹಿಡಿದ ಮಳೆ ಹನಿಯಂತೆ ನಿನ್ನ ನೆನಪ ಯಾನ

ಏನೋ ಚಂಚಲತೆ ಬಿಟ್ಟೂ ಬಿಡದೆ ಖಿನ್ನತೆ ಆವರಿಸುತಿದೆ ಒಂಟಿತನ

 

ಅಗಲಿಕೆಯ ಕ್ಷಣ ಕ್ಷಣವೂ ವಿರಹ ವೇದನೆ ರೋಧಿಸುತಿದೆ ಮನ

ಗಳಿಗೆ ಗಳಿಗೆಗೂ ನಿನ್ನ ಬರುವಿಕೆಗಾಗಿ ತವಕಿಸುತಿದೆ ಒಂಟಿತನ

 

ನೀನಿಲ್ಲದೆ ಮನೆ ಮೌನ ಅಸಹನೀಯ ನೂರು ನೋವಿನ ತಾನ

ಏಕೋ ಏನೋ ಭಾರವಾಗಿದೆ ಮನ ಕಳವಳಿಸುತಿದೆ ಒಂಟಿತನ

 

ಇಲ್ಲ ಒಂದಿನಿತು ಸಮಾಧಾನ ಹಗಲಿರಳು ನಿನ್ನದೆ ಧ್ಯಾನ

ಮಾತು ಮುನಿಸು ಬೇಡ ಬಿಗುಮಾನ ಕನವರಿಸುತಿದೆ ಒಂಟಿತನ

 

ನೀನಿಲ್ಲದೆ ರಸ ರುಚಿಯಿಲ್ಲ ಜೀವನ ಮಿಡಿಯುತಿದೆ ಶೃತಿಯಿಲ್ಲದ ಗಾನ

ಬಾ ಮನ ಮಾಡು ಪ್ರೇಮದ ಉನ್ಮಿಲನಕ್ಕೆ ಹಂಬಲಿಸುತಿದೆ ಒಂಟಿತನ

 

ಏನಿತ್ತು ಏನಿಲ್ಲ ಕತ್ತಲೆಗೆ ಮುಖ ಮಾಡಿ ಸಾಗಿತ್ತು ಬದುಕಿನ ಕಾರವಾನ

ಬಾ ಹಚ್ಚು ದೀಪ ಒಳ ಹೊರಗೆ ಓ’ಹಾಲ’ ಕಾತರಿಸುತಿದೆ ಒಂಟಿತನ ||ಮಕ್ತಾ||

*ಇದು ಒಂದು ರದೀಫ್ ಸಹಿತ ‘ಮುಸಲ್ ಸಿಲ್ ಗಜಲ್’ ಆಗಿದೆ. ಇದರಲ್ಲಿ,

ರದೀಫ್: ‘ಒಂಟಿತನ’

ಕಾಫಿಯಾ: ಕಾಡುತಿ’ದೆ’, ಚಡಪಡಿಸುತಿ’ದೆ’, ಆವರಿಸುತಿ’ದೆ’, ತವಕಿಸುತಿ’ದೆ’,

ಕಳವಳಿಸುತಿ’ದೆ’, ಕನವರಿಸುತಿ’ದೆ’, ಹಂಬಲಿಸುತಿ’ದೆ’. ಕಾತರಿಸುತಿ’ದೆ’.

ರವಿ: ‘ದೆ’

ಶಾಯರ್ ನಾಮ್: ‘ಹಾಲ’

ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ.

ಮಕ್ತಾ: ಗಜಲಿನ ಕೊನೆಯ ದ್ವಿಪದಿಗೆ ಮಕ್ತಾ ಎನ್ನುತ್ತಾರೆ.

 

 

‍ಲೇಖಕರು avadhi

16 May, 2013

3 Comments

  1. ಪ್ರಕಾಶ ಬಿ. ಜಾಲಹಳ್ಳಿ

    gazal chennagide

  2. lakshmikanth itnal

    ಲಬಾವಿ ಜಿ, ಗಝಲ್ ಚನ್ನಾಗಿದೆ. ಅದರ ಪ್ರಾರಂಭದ ಪಲ್ಲವಿ ‘ಮತ್ಲಾ’ ಎಂತಲೂ, ತಮ್ಮ ಕಾವ್ಯನಾಮ ಇರುವೆಡೆ, ‘ಮಕ್ತಾ’ಎಂತಲೂ ತಿಳಿಸಿ ನಮ್ಮ ತಿಳುವಳಿಕೆ ಹೆಚ್ಚು ಮಾಡಿದ್ದೀರಿ. ಆದರೂ ಒಂದು ಮಾತು ‘ರದೀಫ್’ ಕ್ಕೆ ‘ಒಂಟಿತನ’ ಸರಿಯಾದರೂ, ‘ದೆ’ ಕಾಫಿಯಾ ಶಬ್ದವಾಗಬೇಕೆಂದು ನಾನು ಅಂದುಕೊಂಡಿದ್ದೇನೆ, ನನ್ನ ಗ್ರಹಿಕೆ ತಪ್ಪಿದ್ದರೂ ಇರಬಹುದು,2) ಇನ್ನೊಂದು ಮಾತು, ಸ್ವಲ್ಪ ಗೇಯತೆ ಬೇಕೇನೋ, ಉರ್ದು, ಪಾರಸಿ ಗಳನ್ನು ಸರಿಗಟ್ಟಲಾರೆವಾದರೂ , ಇನ್ನಷ್ಟು ಧ್ಯಾನಿಸಿ ಗೇಯತೆ ತಂದುಕೊಂಡರೆ, ಹೆಚ್ಚು ಜನರಿಗೆ ಮುಟ್ಟೀತು ಎನಿಸಿತು,. ನಾನು ಸುಮ್ಮನೆ ಆಸಕ್ತಿಯಿಂದ ಗಝಲ್ ಗಳನ್ನು ಓದುತ್ತಿರುತ್ತೇನೆ, ಕೇಳುತ್ತಿರುತ್ತೇನೆ. ಕೆಲವೇ ಕೆಲ ಗಝಲ್ ಕವಿಗಳಿರುವುದರಿಂದ ತಾವು ಈ ಕೃಷಿಯಲ್ಲಿ ಇನ್ನಷ್ಟು ತೊಡಗಬೇಕೆಂದು ಕೋರುತ್ತ, ವಂದನೆಗಳು.

  3. lakshmikanth itnal

    ಹಾಲಬಾವಿ ಜಿ, ಗಝಲ್ ಚನ್ನಾಗಿದೆ. ಅದರ ಪ್ರಾರಂಭದ ಪಲ್ಲವಿ ‘ಮತ್ಲಾ’ ಎಂತಲೂ, ತಮ್ಮ ಕಾವ್ಯನಾಮ ಇರುವೆಡೆ, ‘ಮಕ್ತಾ’ಎಂತಲೂ ತಿಳಿಸಿ ನಮ್ಮ ತಿಳುವಳಿಕೆ ಹೆಚ್ಚು ಮಾಡಿದ್ದೀರಿ. ಆದರೂ ಒಂದು ಮಾತು ‘ರದೀಫ್’ ಕ್ಕೆ ‘ಒಂಟಿತನ’ ಸರಿಯಾದರೂ, ‘ದೆ’ ಕಾಫಿಯಾ ಪೂರ್ಣ ಶಬ್ದವಾಗಬೇಕೆಂದು ನಾನು ಅಂದುಕೊಂಡಿದ್ದೇನೆ, ನನ್ನ ಗ್ರಹಿಕೆ ತಪ್ಪಿದ್ದರೂ ಇರಬಹುದು,2) ಇನ್ನೊಂದು ಮಾತು, ಸ್ವಲ್ಪ ಗೇಯತೆ ಬೇಕೇನೋ, ಉರ್ದು, ಪಾರಸಿ ಗಳನ್ನು ಸರಿಗಟ್ಟಲಾರೆವಾದರೂ , ಇನ್ನಷ್ಟು ಧ್ಯಾನಿಸಿ ಗೇಯತೆ ತಂದುಕೊಂಡರೆ, ಹೆಚ್ಚು ಜನರಿಗೆ ಮುಟ್ಟೀತು ಎನಿಸಿತು,. ನಾನು ಸುಮ್ಮನೆ ಆಸಕ್ತಿಯಿಂದ ಗಝಲ್ ಗಳನ್ನು ಓದುತ್ತಿರುತ್ತೇನೆ, ಕೇಳುತ್ತಿರುತ್ತೇನೆ. ಕೆಲವೇ ಕೆಲ ಗಝಲ್ ಕವಿಗಳಿರುವುದರಿಂದ ತಾವು ಈ ಕೃಷಿಯಲ್ಲಿ ಇನ್ನಷ್ಟು ತೊಡಗಬೇಕೆಂದು ಕೋರುತ್ತ, ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading