
`ಕಠಿಣ ಕಾನೂನುಗಳಾಗದ ಹೊರತು ನಮ್ಮ ಜನ ಬುದ್ದಿ ಕಲಿಯುವುದಿಲ್ಲ..’
ದಯವಿಟ್ಟು ಪೌರಕಾರ್ಮಿಕರಿಗೆ ಮನೆ ಕೊಡಿಸಿಕೊಡಿ ಸ್ವಾಮಿ: ಸ್ಟೀಫನ್ ಪ್ರಕಾಶ್
`ರೀ ಇಲ್ಲಿ ನಮ್ಮನೆ ಮುಂದೆ ಚರಂಡಿ ತುಂಬಿಕೊಂಡಿದೆ ನಿಮ್ ಕೆಲಸಗಾರರನ್ನ ಕಳಿಸ್ರಿ…, ನಮ್ಮನೆ ಟಾಯ್ಲೆಟ್ ಬ್ಲಾಕ್ ಆಗಿದೆ…, ನಮ್ಮ ಬೀದಿಲಿ ಕಸದ ರಾಶಿಯೇ ತುಂಬಿದೆ ಏನು ಮಾಡ್ತಿದ್ದೀರೀ… ಮಳೆ ಬಂದು ರಸ್ತೆ ಬ್ಲಾಕ್ ಆಗಿದೆ.. ಬೇಗ ಕಳಿಸ್ರಿ.. ಇಂತಹ ನೂರಾರು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವುದು ಆಯಾ ವಾರ್ಡ್ ನ ಸದಸ್ಯರು. ಅವರು ಇದನ್ನು ಪಾರ್ವರ್ಡ್ ಮಾಡಿ ಗದರಿಸುವುದು ಆರೋಗ್ಯ ನಿರೀಕ್ಷಕರನ್ನು.
ಹೌದು ಇಡೀ ಮಹಾಜನತೆ ಏಳುವ ಮುನ್ನವೇ ಪೌರಕಾಮಿಕರು ಎದ್ದರೆ ಅವರೊಂದಿಗೆ ಏಳುವುದು ಈ ಆರೋಗ್ಯ ನಿರೀಕ್ಷಕರು. ಪೌರ ಕಾರ್ಮಿಕರಿಗೆ ಕೆಲಸ ಹಂಚುವ ಈ ಆರೋಗ್ಯ ನಿರೀಕ್ಷಕರದ್ದು ಪೌರಕಾರ್ಮಿಕರಷ್ಟೇ ಜವಬ್ಧಾರಿಯುತ ಕೆಲಸ. ಎಲ್ಲ ಪೌರ ಕಾರ್ಮಿಕರನ್ನು ಒಂದೆಡೆ ಸೇರಿಸಿ ಅವರಿಗೆ ಕೆಲಸ ಹಂಚಿ. ಕರೆ ಸ್ವೀಕರಿಸುತ್ತಲೇ ನಗರವನ್ನು ಬೆಳಗಾಗುವುದರೊಳಗೆ ಸ್ವಚ್ಛಂದ ಮಾಡುವ ಈ ಆರೋಗ್ಯ ನಿರೀಕ್ಷಕರಿಗೆ ಪೌರ ಕಾರ್ಮಿಕರ ಸ್ಥಿತಿಗತಿಗಳು, ನಾಗರೀಕರು, ಸ್ವಚ್ಛತೆ ಬಗ್ಗೆ ನಿಜವಾದ ತಿಳಿವಳಿಕೆ ಇರುತ್ತದೆ.
ಸ್ಟೀಫನ್ ಪ್ರಕಾಶ್ ಹಾಸನ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು. ಪೌರ ಕಾರ್ಮಿಕರು, ಅವರ ಸವಲತ್ತುಗಳು, ಸಮಸ್ಯೆಗಳು, ಒತ್ತಡಗಳು, ನೀತಿ ನಿಯಮಗಳು ಹೀಗೆ ಹತ್ತಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರು ಹೇಳುವಂತೆ ನೀವು ನಂಬುತ್ತಿರೋ ಇಲ್ಲವೋ…!
ಹಾಸನ ನಗರದ ಸಂಖ್ಯೆ ಒಂದೂವರೆ ಲಕ್ಷ. ಇವರ ಎಸೆದ ಕೊಳಕನ್ನು, ಹರಡಿದ ಕಸವನ್ನು ಗುಡಿಸಿ ನಗರವನ್ನು ಸ್ವಚ್ಛಗೊಳಿಸುತ್ತಿರುವುದು ಎಷ್ಟು ಮಂದಿ ಗೊತ್ತೆ ಕೇವಲ 190.
ಅಚ್ಚರಿ ಎನಿಸಿದರೂ ಇದು ಸತ್ಯ. ಇದರಲ್ಲಿ ನಗರಸಭೆಯ 90 ಮಂದಿ ಪರ್ಮನೆಂಟ್ ಪೌರ ಕಾರ್ಮಿಕರಿದ್ದರೆ ಉಳಿದ 100 ಮಂದಿ ಟೆಂಡರ್ ಶಿಪ್ (ಹೊರಗುತ್ತಿಗೆ) ಕಾರ್ಮಿಕರು.
ಕಳೆದ 20 ವರ್ಷಗಳಿಂದ ಇದೇ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟೀಫನ್ ಪ್ರಕಾಶ್ ಪೌರ ಕಾಮರ್ಿಕರ ಸ್ಥಿತಿಗತಿಗಳನ್ನು ತುಂಬ ಹತ್ತಿರದಿಂದ ಕಂಡಿದ್ದಾರೆ. ಅವರ ನೋವು ನಲಿವುಗಳಲ್ಲಿ ಭಾಗಿಯಾಗಿದ್ದಾರೆ. ಅವರೇ ಹೇಳುತ್ತಾರೆ,..
`ಪೌರ ಕಾರ್ಮಿಕರ ಸ್ಥಿತಿ ಹಿಂದೆ ಇದ್ದಂತಿಲ್ಲ, ಬದಲಾಗಿದ್ದಾರೆ. ಅವರ ಮಕ್ಕಳು ವಿದ್ಯೆ ಕಲಿತು, ಲಾಯರ್, ಡಾಕ್ಟರ್ ಆಗಿದ್ದಾರೆ, ಬಿ.ಎ. ಬಿ,ಕಾಂ. ಮಾಡಿಕೊಂಡಿದ್ದಾರೆ. ನನ್ನ ಸರ್ವೆಯಲ್ಲಿ ನೋಡಿದಂತೆ ಪೌರ ಕಾರ್ಮಿಕರಲ್ಲಿ ಕುಡಿತ ಹೆಚ್ಚಾಗಿ ಸಾಕಷ್ಟು ಸಂಖ್ಯೆಯಲ್ಲಿ ಸಾವನಪ್ಪುತ್ತಿದ್ದರು. ಒಬ್ಬ ಮನುಷ್ಯನಾಗಿ ನಾನು ಇದರ ಬಗ್ಗೆ ಕಳವಳದಿಂದ ಯೋಚಿಸಿದೆ. ಹೇಗಾದರೂ ಮಾಡಿ ಈ ಕುಡಿತದಿಂದ ಇವರನ್ನು ಹೊರತರಬೇಕೆಂದು ನಿರ್ಧರಿಸಿದ್ದೆ. ನಾನು ಕೆಲಸ ಮಾಡಿದ ಕಡೆಯಲ್ಲೆ ನಾನು ಮಾಡುವುದಿಷ್ಟೆ. ಕುಡಿತ ಬಿಡಿಸುವುದು. ಮಾನವಂತರನ್ನಾಗಿ ಮಾಡುವುದು. ನನ್ನ ವೈಯಕ್ತಿಕವಾಗಿ ನಾನು ಕುಡಿತವನ್ನು ನಿಲ್ಲಿಸಲು ಶ್ರಮ ಹಾಕಿದ್ದೇನೆ. ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದೇನೆ. ಅದೇನೋ ನನ್ನ ಈ ಕಾರ್ಯದಿಂದ ಸಾಕಷ್ಟು ಮಂದಿ ಕುಡಿತ ಬಿಟ್ಟಿದ್ದಾರೆ. ಈಗ ಯಾವ ಮಟ್ಟಕ್ಕೆ ಬಂದಿದೆ ಎಂದರೆ ನಮ್ಮಲ್ಲೀಗ 4 ರಿಂದ 5 ಕುಡುಕರು ಇರಬಹುದು ಅಷ್ಟೆ. ಇದರ ಕಾಣದಿಂದಲೇ ಅವರು ಕನಿಷ್ಟ ಒಳ್ಳೆ ಜೀವನ, ಹಬ್ಬ ಹರಿದಿನ ಆಚರಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.

ನಮ್ಮ ನಗರಸಭೆಯಿಂದಲೂ ಪೌರ ಕಾರ್ಮಿಕರಿಗೆ ಅವರ ಆರೋಗ್ಯದ ದೃಷ್ಠಿಯಿಂದ ಗೌಸ್, ರೈನ್ ಕೋಟ್, ಮಾಸ್ಕ್ , ಶೂ. ಕೊಡುತಿದ್ದೇವೆ. ಯೂನಿಪಾರ್ಮನ್ನು ಅವರ ಸಂಬಳದಲ್ಲೆ ಕಡಿತ ಮಾಡಲಾಗುತ್ತದೆ. ನನಗೆ ಅನ್ನಿಸುವಂತೆ ಹಾಸನ ನಗರ ಜನಸಂಖ್ಯೆಗೆ ಇಷ್ಟು ಪೌರ ಕಾರ್ಮಿಕರು ಯಾವ ಕಡೆಯಿಂದಲೂ ಸಾಕಾಗುವುದಿಲ್ಲ. ಆದದೂ ಅನುಸರಿಸಿಕೊಂಡು ಹೋಗುತಿದ್ದೇವೆ. ಥಿಯರಿನೇ ಬೇರೇ ಪ್ರಾಕ್ಟಕಲ್ಲೇ ಬೇರೆ ಅಲ್ಲವೇ..? ಎಂದು ಪ್ರಶ್ನಿಸುತ್ತಾರೆ.
ಸ್ಟೀವನ್ ಪ್ರಕಾಶ್ ಹೇಳುವಂತೆ ಹಾಸನದ ಜನತೆಗೆ ಪೌರ ಕಾರ್ಮಿಕರಿಗೆ ಇರುವಷ್ಟು ಕನಿಷ್ಟ ಜ್ಞಾನ ಇಲ್ಲ, ಬುದ್ದಿವಂತಿಕೆ ಇಲ್ಲ ಈ ಬಗ್ಗೆ ಅವರಲ್ಲಿ ಅಪಾರ ಆಕ್ರೋಶವಿದೆ. ಸ್ವಚ್ಛತೆ ಬಗ್ಗೆ ಏನೆಲ್ಲಾ ಪ್ರಚಾರ ಮಾಡಿದರೂ ಬುದ್ದಿ ಕಲಿಯುವುದಿಲ್ಲ. ಮಾಡಬಾರದು ಎಂದಿದ್ದನ್ನೇ ಮಾಡುತ್ತಾರೆ. ಪ್ಲಾಸ್ಟಿಕ್ ಬಳಸಬೇಡಿ ಎಂದರೆ ಅದನ್ನೇ ಬಳಸುತ್ತಾರೆ. ಕಸ ವಿಲೇವಾರಿಯ ಕನಿಷ್ಟ ಜ್ಞಾನ ಇಲ್ಲ. ಒಣ ಕಸ, ಹಸಿ ಕಸ, ಪುನರ್ ಬಳಕೆ ಕಸ ವನ್ನು ವಿಂಗಡಿಸಿ ಹಾಕಿ ಎನ್ನುತ್ತೇವೆ ಯಾರೂ ಮಾಡುವುದಿಲ್ಲ. ತಿಳಿದವರೇ ಹೀಗೆ ಮಾಡಿದರೆ ಉಳಿದವರ ಗತಿ ಏನು…?
ಸ್ವಚ್ಛತೆಗೆಂದು ನಗರಸಭೆಯ ಸೌಲಭ್ಯಗಳು
50 ತಳ್ಳುಗಾಡಿ
60 ಕಂಟೈನರ್
11 ಟ್ರಾಕ್ಟರ್
5 ಡಂಪರ್ ಪ್ಲೇಸರ್
4 ಆಟೋಗಳು
1 ಸಕ್ಕರ್ ಮೆಷಿನ್
1 ಜಟ್ಟರ್ ಮಿಷನ್
1 ಫಾಲ್ ಬಾಲ್
1 ಸ್ಪ್ರೇಯಿಂಗ್ ವಾಟರ್ ಮಿಷನ್
ಇಷ್ಟು ಸೌಲಭ್ಯಯಗಳಿವೆ. ಹಾಸನದ ಜನತೆಗೆ ಇಷ್ಟು ಸಾಲುವುದೇ ಇಲ್ಲ. ಆದರೂ ಸುಧಾರಿಸಿಕೊಂಡು ಹೋಗುತಿದ್ದೇವೆ. ಎಲ್ಲಕ್ಕೂ ಮಿಗಿಲಾಗಿ ಜನ ಬದಲಾಗಭೇಕು, ಬುದ್ದಿ ಕಲಿಯಬೇಕು ಹಾಗಿದ್ದರೆ ಎಲ್ಲವೂ ಸುಗಮವಾಗುತ್ತದೆ.
ನಿತ್ಯ ಸಂಗ್ರಹಣೆಯಾದ ಕಸವನ್ನು ಸಂತೆ ಪೇಟೆ ಒಳಗಿನ ನಗರಸಭೆಯ ಜಾಗದಲ್ಲಿ ಡಂಪ್ ಮಾಡುತ್ತಿದೆ. ಇದೀಗ ಜೀರೋ ವೇಸ್ಟ್ ಮ್ಯಾನೆಜ್ಮೆಂಟ್ ಮೂಲಕ ಗೊಬ್ಬರ ತಯಾರಿಸಿ ಪುನರ್ ಬಳಕೆ ಮಾಡುತ್ತಿದ್ದೇವೆ. ಈ ಕೆಲಸವನ್ನು ನಮ್ಮ ಪೌರ ಕಾರ್ಮಿಕರೇ ಮಾಡುತ್ತಾರೆ. ಈ ಪ್ರಯೋಗವನ್ನು 5 ವಾಡರ್ಿಗೆ ಒಂದರಂತೆ ಮಾಡಲು ಅಳವಡಿಸುವ ಉದ್ದೇಶ ಹೊಂದಿದ್ದೇವೆ ಎನ್ನುತ್ತಾರೆ ಆರೋಗ್ಯ ನಿರೀಕ್ಷಕರು
ಬೇರೆ ಜಾತಿಯವರೂ ಈಗ ಪೌರ ಕಾರ್ಮಿಕರು
ಕುತೂಹಲಕಾರಿ ವಿಷಯ ಎಂದರೆ `ಇತ್ತೀಚೆಗೆ ಪೌರಕಾರ್ಮಿಕರಾಗಿ ಕೆಲಸ ಮಾಡಲು ಎಲ್ಲ ಜಾತಿ ಜನಾಂಗದಿಂದಲೂ ಬೇಡಿಕೆ ಹೆಚ್ಚುತ್ತಿದೆ. ಹಿಂದೆ ಮಾದಿಗ ಸಮುದಾಯ ಮಾಡುತ್ತಿದ್ದ ಜಾಗದಲ್ಲಿ ಈಗ ಮುಸ್ಲಿಂ, ಒಕ್ಕಲಿಗ ಹೀಗೆ ಬೇರೆ ಜಾತಿಯವರು ಬಂದಿದ್ದಾರೆ. ಶೇ 40 ರಷ್ಟು ಮಾದಿಗ ಸಮುದಾಯದಲ್ಲದವರು ಇದ್ದು ಇದೊಂದು ದೊಡ್ಡ ಬದಲಾವಣೆ. ಈ ಮೂಲಕ ಒಬ್ಬ ಸಮಾನ್ಯ ಮನುಷ್ಯನಾಗಿ ನನ್ನ ಮನವಿ ಎಂದರೆ `ಸರ್ಕಾರ ಇವರಿಗೆ ಸರ್ಕಾರಿ ಮನೆ ನಿರ್ಮಿಸಿಕೊಡಲಿ. ಇವರ ಬದುಕು ದುಸ್ಥರವಾಗಿದೆ. ಒಂದೊಂದು ಮನೆಯಲ್ಲಿ 4 ಕುಟುಂಬಗಳು ಜಂಜಾಟದಿಂದ ಬದುಕು ನಡೆಸುತ್ತಿದ್ದಾರೆ. ಸಕಲೇಶಪುರ, ಅರಸೀಕೆರೆ, ಹೀಗೆ ಬೇರೆ ಕೆಲ ತಾಲೂಕುಗಳಲ್ಲಿ ಒಂದಷ್ಟು ಪೌರ ಕಾರ್ಮಿಕರಿಗೆ ಮನೆ ಕೊಟ್ಟಿದ್ದಾರೆ. ಇದು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ನನ್ನ ಪ್ರಕಾರ ಈ ಸಮುದಾಯದಲ್ಲಿ ಈಗ ಕುಡಿತ ಕಡಿಮೆಯಾಗಿದ್ದು ಸಾವಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಇದಕ್ಕೂ ಮಿಗಿಲಾಗಿ ಅವರನ್ನು ಜನಸಾಂಆನ್ಯರು ಮನುಷ್ಯರಂತೆ ನೋಡುವುದನ್ನು ಸಾರ್ವಜನಿಕರು ಕಲಿಯಬೇಕು’ ಇದು ಮಹಾ ಜನತೆಯಲ್ಲಿ ನನ್ನ ವಿನಯಪೂರ್ವಕ ಪ್ರಾರ್ಥನೆ ಎನ್ನುತ್ತಾರೆ ಸ್ಟೀವನ್ ಪ್ರಕಾಶ್.
ನಿಯಮ ಉಲ್ಲಂಘನೆಗೆ ಶಿಕ್ಷೆ ಇದೆ
ಸ್ಚಚ್ಛತೆ ಕಾಪಾಡದ ಬಗ್ಗೆ ನಿಯಮ ಉಲ್ಲಂಘಿಸಿದವರ ಬ್ಗಗೆ ನಿಮ್ಮಲ್ಲಿ ಶಿಕ್ಷೆ ಇಲ್ಲವೇ..? ಎಂಬ ಪ್ರಶ್ನೆ ಕೇಳೀದರೆ ಅವರು ಕೊಡುವ ಉತ್ತರ..
“ಹೌದು ಫಾರಿನ್ನಲ್ಲಿ ಅಂತಹ ಕಾನೂನುಗಳಿವೆ. ನಮ್ಮಲ್ಲಿ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ನಮ್ಮ ವ್ಯವಸ್ಥೆಯಲ್ಲಿ ಯಾವುದೂ ಸಾಧ್ಯವಾಗುತ್ತಿಲ್ಲ. ನಮ್ಮ ಜನ ಏನನ್ನು ಮಾಡಬೇಡಿ ಎನ್ನುತ್ತೇವೋ ಅದನ್ನೇ ಮಾಡುತ್ತಾರೆ. ಟಿ.ವಿ., ಪತ್ರಿಕೆಗಳು, ರೇಡಿಯೋ, ಹೀಗೆ ವಿವಿಧ ಮಾಧ್ಯಯಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಆದರೆ ಜನ ತಿದ್ದಿಕೊಳ್ಳೂತ್ತಿಲ್ಲ.
ಆದರೂ ಮತ್ತೊಮ್ಮೆ ಮನವಿ ಮಾಡುತ್ತೇನೆ. ದಯವಿಟ್ಟು ಪ್ಲಾಸ್ಟಿಕ್ ತೊಡೆದು ಹಾಕಿ, ನಿಮ್ಮ ನಿಮ್ಮ ಮನೆಯ ಕಾಂಪೌಂಡನ್ನು, ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಿ. ಪೌರ ಕಾಮರ್ಿಕರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡು ನಗರವನ್ನು ಸ್ಚ್ಛವಾಗಿಡಲು ಶ್ರಮಿಸಿ ಮನೆಯೂ ಸ್ವಚ್ಛವಾಗಿರುತ್ತದೆ. ನಗರವೂ ಸ್ವಚ್ಛವಾಗುತ್ತದೆ. ಇದಿಷ್ಟೆ ನನ್ನ ಮನವಿ.
ನಾವೆಲ್ಲಾ ಮೊದಲು ಗೌರವ ಕೊಡಬೇಕಿರುವುದು ಪೌರಕಾರ್ಮಿಕನಿಗೆ…
ನಾವೆಲ್ಲಾ ಈ ನೆಲದಲ್ಲಿ ಹುಟಿದ್ದಕ್ಕೆ ದೊಡ್ಡ ಗೌರವ ಕೊಡಬೇಕಿರುವುದು ಮೊದಲು ನಮಗೆ ಅನ್ನ ಕೊಡುವ ರೈತನಿಗೆ, ನಂತರ ನಮ್ಮನ್ನು ಕಾಯುವ ಸೈನಿಕ, ಮೂರನೆಯವನು ನಮ್ಮೆಲ್ಲ ಕೊಳಕನ್ನು ತೊಳೆಯುವ, ಶುದ್ದ ಮಾಡುವ ಪೌರಕಾರ್ಮಿಕನಿಗೆ. ಈ ಮಾತನ್ನು ಸದಾ ಹೇಳುವುದು ಹಿರಿಯ ಹೋರಾಟಗಾರ, ಜನತಾ ಮಾಧ್ಯಮ ಸಂಪಾದಕರಾದ ಆರ್.ಪಿ. ವೆಂಕಟೇಶ ಮೂರ್ತಿ.
ಪೌರ ಕಾರ್ಮಿಕರ ಬಗ್ಗೆ ಅಪಾರ ಕಳಕಳಿ, ಅವರನ್ನು ನೋಡುವ ಸಮಾಜದ ದೃಷ್ಠಿ ಕೋನದ ಬಗ್ಗೆ ಅಸಹನೆ , ಆಕ್ರೋಶ ಎಲ್ಲವನ್ನೂ ಇಟ್ಟುಕೊಂಡಿರುವ ಸಂಪಾದಕರು ನಾವು ಮಾತಿಗೆ ಕುಳಿತಾಗಲೆಲ್ಲಾ ಪೌರ ಕಾರ್ಮಿಕರ ಬಗ್ಗೆ ವಿಚಾರ ಪ್ರಸ್ತಾಪವಾಗುತ್ತಿತ್ತು.
`ಏನು ಮಾರಾಯ ನಾವೆಲ್ಲ ಎಷ್ಟು ಸ್ವಾರ್ಥಿಗಳು, ನಾವು ಎಸೆದ ಅಷ್ಟು ಕೊಳಕನ್ನು ಬರೀ 190 ಜನರಿಂದ ಎತ್ತಿಸುತ್ತಿವಲ್ಲಾ..?’ ಎಂಥೆಂಹ ಅಸಹ್ಯ ಎನಿಸುವ ಕೆಲಸಗಳನ್ನು ಪ್ರೀತಿಯಿಂದ ನಮ್ಮ ಜವಬ್ದಾರಿ ಎನ್ನುವಂತೆ ಮಾಡುತ್ತಾರೆ. ನಮ್ಮ ಜನರಿಗೆ ಅವರ ಬಗ್ಗೆ ಕನಿಷ್ಟ ಗೌರವ ಇಲ್ಲವಲ್ಲ ಮಾರಾಯ..? ಏನು ಮಾಡೋದು ಇದಕ್ಕೆಲ್ಲ..’ ಹೀಗೆ ಮಾತಿಗೆ ಕುಳಿತಾಗಲೆಲ್ಲಾ ಈ ಅಸಹನೆ, ಆಕ್ರೋಶ ಮರುಕಳಿಸುತ್ತಲೇ ಇತ್ತು.
ಹೌದು.. ನಾವೇಕೆ ಇವರ ಬಗ್ಗೆ ಒಂದು ದಿನವೂ ಯೋಚಿಸುವುದಿಲ್ಲ. ಇವರು ನಮ್ಮನ್ನು ನೆನಪಿಸಿಕೊಳ್ಳದ ದಿನ ಇಲ್ಲ. ನಾವು ಏನೆ ತಿಂದು, ಎಸೆದರೂ ಏನಾದರೂ ಒಂದು ರೀತಿಯಲ್ಲಿ ಇವರಿಗೆ ತೊಂದರೆ ಕೊಡುತ್ತಲೇ ಇರುತ್ತೇವೆ. ಆದರೂ ಇವರನ್ನು ನೆನಪಿಸಿಕೊಳ್ಳುವುದಿಲ್ಲ.
ನನ್ನ ಪ್ರಕಾರ ಪ್ರತಿಯೊಬ್ಬರೂ ಈ ಕೆಲಸ ಮಾಡಬೇಕು. ನಾವು ನಮ್ಮೂರ ಸಏವೆ ಆರಂಭಿಸಿದ್ದೇ ಈ ಕಾರಣಕ್ಕೆ. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಲು ನಾವೇಕೆ ಹಿಂಜೆರೆಯಬೇಕು..?
ನಮ್ಮೂರ ಸೇವೆ ಯಾಕೆ ಯಶಸ್ವಿಯಾಯಿತು. ಪ್ರತಿಯೊಬ್ಬರೂ ಪೊರಕೆ ಹಿಡಿದುಕೊಂಡು ಬೀದಿ ಗುಡಿಸಬೇಕು. ಪೌರ ಕಾರ್ಮಿಕರು ಮಾಡುವ ಕೆಲಸವನ್ನು ಒಂದು ದಿನ ಮಾಡಿ ಎಷ್ಟು ತೃಪ್ತಿ ಸಿಕ್ಕುತ್ತದೆ ಎಂದು. ಈ ಕಾರಣದಿಂದಲೇ ನಮ್ಮೂರ ಸೇವೆ ಯಶಸ್ವಿಯಾಗಿ ಇಂದಿಗೂ ಮುನ್ನೆಡೆಯುತ್ತಿದೆ.
ಈಚೆಗೆ ಕೆಜೆಪಿ ಯವರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಿಂದು ತೇಗಿ ಹೋದವರು. ಅವರಿಗೆ ಕನಿಷ್ಠ ತಿಂದಿದ್ದನ್ನು ಒಂದು ಕಡೆ ಹಾಕಬೇಕು ಎಂಬ ಜ್ಞಾನ ಇಲ್ಲ. ಇದನ್ನೆಲ್ಲಾ ಹೇಳಿಕೊಡಬೇಕೆ..?
ಅವರ ಕೈಯ್ಯಿಂದಲೇ ಎತ್ತಿಸಬೇಕು. ಹಾಗಾದಗಲೇ ಬದಲಾವಣೆ ಸಾಧ್ಯ.
ನನ್ನ ಪ್ರಕಾರ ಇದನ್ನು ಅಕ್ಷರಶಃ ಪಾಲಿಸುವುದನ್ನು ನಾನು ಸಿಖ್ ಧರ್ಮದಲ್ಲಿ ಕೇಳಿದ್ದೇನೆ ಮತ್ತು ಓದಿದ್ದೇನೆ. ಇವರ ಧಾರ್ಮಿಕ ಸ್ಥಳ ಗುರುದ್ವಾರಕ್ಕೆ ಪ್ರತಿ ವರ್ಷ ಲಕ್ಷಾಂತರ ಜನ ಹೋಗುತ್ತಾರೆ.
ಸಾವಿರಾರು ಜನ ಒಂದೆಡೆ ಸೇರುತ್ತಾರೆ. ನಾವು ನಂಬಲೇಬೇಕಾದ ಒಂದು ಪದ್ಧತಿ ಇಲ್ಲಿದೆ. ಇಲ್ಲಿಗೆ ಬಂದವರೆಲ್ಲಾ ಮೊದಲು ಪೊರಕೆ ಹಿಡಿದುಕೊಂಡು ಗುರುಧ್ವಾರದ ಸ್ವಚ್ಛತೆಗೆ ನಿಲ್ಲುತ್ತಾರೆ. ಬಡವ-ಶ್ರೀಮಂತ ಯಾವುದೂ ಇಲ್ಲ. ಸ್ವಯಂ ಪ್ರೇರಿತರಾಗಿ ಸ್ವಚ್ಛ ಗೊಳಿಸುತ್ತಾರೆ. ಶ್ರೀಮಂತ ಮಹಿಳೆಯರು ಪಾತ್ರೆ ಉಜ್ಜುತ್ತಾರೆ. ಸಿಖ್ ಜನಾಂಗದಲ್ಲೇ ಇದೊಂದು ಮಾದರಿ ಪದ್ಧತಿ. ನಮ್ಮ ಚಪ್ಪಲಿಗಳನ್ನು ಎತ್ತಿಡುತ್ತಾರಂತೆ ಮಾರಾಯ.. ಇದಕ್ಕಿಂತ ಇನ್ನೇನು ಬೇಕು. ಇದನ್ನು ಯಾಕೆ ಸಮಾಜದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಿಮಗೆ ಗೊತ್ತಿದೆಯೋ ಇಲ್ಲವೋ.. ಸಿಖ್ ಧರ್ಮದಲ್ಲಿ ಭಿಕ್ಷಾಟನೆಗೆ ಅವಕಾಶ ಇಲ್ಲ. ಕೆಲಸ ಇಲ್ಲ ಎಂದರೆ ಗುರುಧ್ವಾರಕ್ಕೆ ಬಂದು ಸೇವೆ ಮಾಡಿಕೊಂಡು ಇರಬಹುದು ಆದರೆ ಭಿಕ್ಷಾಟನೆ ಮಾಡುವಂತಿಲ್ಲ. ಸೇವೆ ಮಾಡು-ಊಟ ಮಾಡಿ ಇದು ಅವರ ನಿಯಮ. ಅವರಿಂದ ನಾವು ತಿಳಿದುಕೊಳ್ಳುವುದು ನಾವು ಸಾಕಷ್ಟಿದೆ. ನಾವೆಲ್ಲಾ ಪೌರ ಕಾರ್ಮಿಕರನ್ನು ನೋಡುವ ದೃಷ್ಠಿಕೋನವೇ ಬದಲಾಗಬೇಕಿದೆ. ಗೌರವದಿಂದ ಕಾಣಬೇಕಿದೆ.
ಜಾಡಮಾಲಿ ನಾ ಮುನಿದರೆ
ಮನುಕುಲವೇ ಸರ್ವನಾಶ
ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಪೌರ ಕಾರ್ಮಿಕರದ್ದು ಗುಲಾಮಗಿರಿಗಿಂತ ಹೀನಾಯ ಬದುಕು
ಪ್ರಪಂಚದ ಎಲ್ಲಾ ನಗರ ಪ್ರದೇಶಗಳನ್ನು ಬೆಳಗಿನ ಜಾವ 4-30 ರಿಂದ ಶುದ್ಧಗೊಳಿಸಿ ಮಾನವ ಕುಲಕ್ಕೆ ಒಳ್ಳೆ ಗಾಳಿ, ಬೆಳಕು, ಪರಿಸರದಲ್ಲಿ ಬದುಕಲು ಅವಕಾಶ ಮಾಡಿಕೊಡುವ ಪೌರ ಕಾರ್ಮಿಕರ ಬದುಕು ಮಾತ್ರ ಹೀನಾಯ.
ಹಾಸನದಲ್ಲಿ ವಾಸ ಮಾಡುತ್ತಿರುವ ಪೌರ ಕಾರ್ಮಿಕರ ಬಗ್ಗೆ ಒಂದೇ ಒಂದು ದಿನ ಜನಪ್ರತಿನಿಧಿಯಾಗಲೀ , ಜಿಲ್ಲಾಡಳಿತವಾಗಲೀ ಪೌರ ಕಾರ್ಮಿಕನ ಮನೆಯಲ್ಲಿ 10 ನಿಮಿಷ ಕುಳಿತು ಬಂದರೆ ಅವರ ಬದುಕಿನ ಸ್ಥಿತಿಗಳ ಬಗ್ಗೆ ಅರ್ಥವಾಗುತ್ತದೆ.
ನಗರ ಕಾರ್ಮಿಕರ ದಿನನಿತ್ಯದ ಕಸ, ಕಕ್ಕಸ್ಸು, ಕಲ್ಮಶಗಳನ್ನು ಕೈಯ್ಯಿಂದ ಬಾಚುವ ಅವರ ಕರುಳು ತುಂಬಿಸುವಷ್ಟು ಕನಿಷ್ಟ ವೇತನ ಕೊಡದೆ ವಂಚಿಸುತ್ತಿರುವ ಖಾಸಗಿ ಗುತ್ತಿಗೆದಾರರ ಶೋಷಣೆ ಒಂದೆಡೆಯಾದರೆ, ಕಕ್ಕಸ್ಸು ಬಾಚುವುದರಲ್ಲಿಯೂ ಸಹ ಹಣ ಲೂಟಿ ಮಾಡುವ ಜನಪ್ರತಿನಿಧಿಗಳು ಒಂದು ಕಡೆ. ಹೀಗಾಗಿ ಪೌರ ಕಾರ್ಮಿಕನ ಬದುಕು ಕಸಕ್ಕಿಂತಲೂ ಕಡೆಯಾಗಿರುವುದಕ್ಕೆ ಸರ್ಕಾರವೇ ಮೂಲ ಕಾರಣ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರ ಶಾಹಿ ವ್ಯವಸ್ಥೆ ಇವರ ಬದುಕಿನ ಹಕ್ಕನ್ನೆ ಕಸಿದುಕೊಂಡು ಅವರಿಗೆ ವಸತಿ, ಶಿಕ್ಷಣ, ಆರ್ಥಿಕ ಅಭಿವೃದ್ಧಿಗಳಿಂದ ದೂರ ಇಟ್ಟು ಪೌರ ಕಾರ್ಮಿಕರನ್ನು ಶೋಷಣೆ ಮಾಡುತ್ತಾ 65 ವರ್ಷಗಳಿಣಂದ ವಂಚಿಸುತ್ತ ಬಂದಿರುವುದು ಖಂಡನೀಯ.
ಪೌರ ಕಾರ್ಮಿಕರು ಒಂದು ತಿಂಗಳು ಮುನಿದರೆ ಮನುಜರು ನಾಶವಾಗುವುದು ಖಂಡಿ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು ಅವರುಗಳ ಕುಟುಂಬಕ್ಕೆ ನಿವೇಶನ ಕಲ್ಪಿಸಲಿ.
ಪೌರ ಕಾರ್ಮಿಕರು ಮತ್ತು ಮಕ್ಕಳ ಬದುಕಿನ ಒಂದು ಹೋರಾಟದ ಗೀತೆ ಪೌರ ಕಾರ್ಮಿಕರಿಗೆ ಸಮರ್ಪಣೆ
ಜಾಡಮಾಲಿ ನೀ ಬೀದಿಯ ಗುಡಿಸದೆ
ಸೂರ್ಯ ಉದಯಿಸಲ್ಲ
ಬೆಳಗಿನ ಕೋಳಿ ಕೂಗದಿಲ್ಲ
ಅರ್ಧ ನಿದ್ದೆಯ ಅವತಾರ ಪುರುಷ
ಕತ್ತಲಲ್ಲ ಮೈ ಕೂ ತುಂಬಾ ಕೆಲಸ
ಹೊತ್ತು ಮೂಡೋ ಮೊದಲೇ
ಬದುಕಿನ ಕಾಯಕ ಬಲುಬಾರ
ಮುದ್ದುಮಕ್ಕಳು ಎದ್ದೇ ಇಲ್ಲ
ತುತ್ತು ಕೂಲಿಗೆ ಜೀವನವೆಲ್ಲಾ
ಒದ್ದೆಯಾಯಿತಲ್ಲಾ ಮಲ ಮೂತ್ರ
ಗದ್ದೆ ಗಟಾರದೊಳಗೆ
ಅರ್ಧ ಚೆಡ್ಡಿ ಅರೆ ಬೆತ್ತಲೆ ಮೈಯ್ಯ
ಗಂಡು ಹೆಣ್ಣು ಮರಿ ಮಕ್ಕಳು ಕೂಡಿ
ಮೆಟ್ಟಿ ನಿಂತರೇನೇ ಜಗದಾಗಾ
ಶುದ್ದ ಗಾಳಿ ಸಲೀಸಾ
ಹೇಸಿ ರೋಗದ ದಾಸನು ನೀನು
ಮಾಸಿ ಹೋಗದ ಮಾನವ ನೀನು
ಸೋಸಿ ನೋಡಿದರೆ
ಶೀಷಿತ ಸಾಕು ಮಗನು ನೀನು
ನಿರ್ಮಲ ಯೋಜನೆ ಮರ್ಮವ ನೋಡು
ಮಂತ್ರಿ ಕಂತ್ರಿಗಳ ಯಂತ್ರದ ಜಾಡು
ಜಾಡ ಮಾಲಿಗೆಲ್ಲ ಹೇಡಿಯ ಪಟ್ಟ ಕಟ್ಯಾರಲ್ಲಾ
ಜಾಡ ಮಾಲಿಯ ಜಾಡು ನಿಂತರೆ
ತೋಟಿ ಅಗೆಯುವ ಮೇಟಿ ಹರಿದರೆ
ಜಾಡ ಮಾಲಿ ಕೆಲಸ
ಮುನಿದರೆ ಮನುಕುಲವೆ ನಾಶ
ಈ ಕವನವನ್ನು ನಮಗೆ ಕಳಿಸಿ ಕೊಟ್ಟವರು ಮರಿಜೋಸೆಫ್ ಬರೆದವರ ಬಗ್ಗೆ ಮಾಹಿತಿ ಇಲ್ಲ.
ಕಲೆ : ಪುಂಡಲೀಕ ಕಲ್ಲಿಗನೂರ
ಜಾಡಮಾಲಿಗಳ ಜಗತ್ತು : ದಯವಿಟ್ಟು ಪೌರಕಾರ್ಮಿಕರಿಗೆ ಮನೆ ಕೊಡಿಸಿಕೊಡಿ ಸ್ವಾಮಿ
ನಿಮಗೆ ಇವೂ ಇಷ್ಟವಾಗಬಹುದು…




Stephen Prakash sandarshana chennaagide.
Thanks sir
ಜಾಡಮಾದಿಗರಿಗೆ ಸರಕಾರದಿಂದ ಮನೆಕೋಡಿಸುವ ಸಲುವಾಗಿ ಆವಿರತವಾಗಿ ದಲಿತ ಪರ ಚಿಂತಕ ಹಾಗೂ ಖ್ಯಾತ ಚಿತ್ರಕಲಾವಿದ ರಾದ ಕೆಟಿಶಿವಪ್ರಸಾದ್ ಹೋರಾಡುತ್ತಿದ್ದು ಸದ್ಯದಲ್ಲಿಯೇ ಆವರಿಗೆ ಮನೆಗಳು ಸಿಗುತ್ತದೆ ಹೆತ್ತೂರುನಾಗರಾಜ್ ಯೋಚನೆ ಬೇಡ
Thanks suvarna
ಜಾಡಮಾದಿಗರಿಗೆ ಕೆ ಟಿ ಅವರೇ ಆಶಾಕಿರಣ. ಜಾಡಮಾದಿಗರಿಗೆ ಮನೆಯಲ್ಲಿ ಕೊರಬಾಡು ತಿನ್ನುವ ಧೀಮಂತಿಕೆ ಹೃದಯವಂತಿಕೆ ಎಷ್ಟು ಜನ ಸವರ್ಣೀಯರಿಗಿದೆ? ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹಳ್ಳಿ ಹಳ್ಳಿಗೆ ಹೋಗಿ ಬಡವರ ಮನೆಯಲ್ಲಿ ಊಟ ನಿದ್ರೆ ಮಾಡಿ ಬರುತ್ತಿದ್ದರು. ಆದರೆ ಅವರು ಒಮ್ಮೆಯೂ ಜಾಡಮಾದಿಗರ ಮನೆಗೆ ಹೋಗಿದ್ದಿಲ್ಲ, ಕೊರಬಾಡು ತಿಂದಂಗಿಲ್ಲ. ಸಿ ಎಂ ಸಿದ್ರಾಮಯ್ಯ ಹ್ಯಾಪಿ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಾವ್ರೆ ಇಂದು, ಅವರೂ ಜಾಡಮಾದಿಗರ ಹತ್ತಿರ ಸುಳಿದಿಲ್ಲ. ಹೆತ್ತೂರ್ ನಾಗರಾಜ್ ಒಳ್ಳೆ ಕೆಲಸ ಮಾಡ್ತಾವ್ರೆ.
Thank u sir …
ಪ್ರಿಯ ಹೆತ್ತೂರ್ ಅವರೇ, ಜಾಡಮಾಲಿಗಳ ಪರವಾಗಿ ನೀವುಗಳು ಕೆ. ಟಿ. ಶಿವಪ್ರಸಾದ್ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಆದರೆ ಜಾಡಮಾಲಿಗಳ ದೈನೇಸಿ ಸ್ಥಿತಿಗೆ ಒಮ್ಮೆ ಜಾತಿ ವ್ಯವಸ್ಥೆಯೇ ಕಾರಣವೆಂದೂ (“ನಮ್ಮ ದೇಶದ ಜನ ಇವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಜಾತಿ ವ್ಯವಸ್ಥೆ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ”) ಮತ್ತೊಮ್ಮೆ ಸರ್ಕಾರವೇ ಕಾರಣವೆಂದೂ (“ಪೌರ ಕಾರ್ಮಿಕನ ಬದುಕು ಕಸಕ್ಕಿಂತಲೂ ಕಡೆಯಾಗಿರುವುದಕ್ಕೆ ಸರ್ಕಾರವೇ ಮೂಲ ಕಾರಣ”) ಹೇಳಿ confuse ಮಾಡಿದ್ದೀರಿ. ನಿಮ್ಮ ಹೋರಾಟ ಜಾತಿವ್ಯವಸ್ಥೆಯ ವಿರುದ್ಧವೋ ಸರಕಾರದ ವಿರುದ್ಧವೋ? ವೈಚಾರಿಕ ಸ್ಪಷ್ಟತೆ ಇಲ್ಲದಿದ್ದರೆ ನಿಮ್ಮ ಹೋರಾಟ ದಿಕ್ಕುಪಾಲು ಆಗುವ ಅಪಾಯ ಇದೆ. ಸರಕಾರವನ್ನೇ ಎದುರು ಹಾಕಿಕೊಂಡರೆ ಜಾತಿವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕುವುದು ಹೇಗೆ? ದೇಶದ ಜನರ ಬೆಂಬಲವಿಲ್ಲದೆ ಸರಕಾರ ಮೇಲೆ ಒತ್ತಡ ಹೇರುವುದು ಹೇಗೆ? ದೇಶದ ಜನರನ್ನೂ ಸರಕಾರವನ್ನೂ ಎದುರು ಹಾಕಿಕೊಂಡು ಜಾಡಮಾಲಿಗಳಿಗೆ ಮನೆ ಕೊಡಿಸಲು ಸಾಧ್ಯವಾಗುತ್ತದೆಯೇ? ಕೆ. ಟಿ. ಶಿವಪ್ರಸಾದ್ ಅವರ ಚಿಂತನೆ ಈ ಸಮಸ್ಯೆಗೆ ಕೊಟ್ಟ ಪರಿಹಾರ ಯಾವುದು?
Namma horatakke nambike illDa kuyukta manSsinavara aGatya illa,,,,,,,
Chaluvaligaararalloo jaativyavasthe asprushyate nodi besaravaaguttide.
ಇದರಲ್ಲಿ ಕನ್ ಫ್ಯೂಷನ್ ಏನಿಲ್ಲ.ಇದು ಏಕಮುಖವಾದ ಹೋರಾಟವಲ್ಲ. ಬಹು ಆಯಾಮಗಳ ಹೋರಾಟ.ಜಾಡಮಾಲಿಗಳ ಜೀವನದ ಅಗತ್ಯಗಳಿಗಾಗಿ ಸರ್ಕಾರದ ವಿರುದ್ಧ ಜಾಡಮಾಲಿಗಳೇ ಒಗ್ಗಟ್ಟಾಗಿ, ಇವರ ಬಗ್ಗೆ ಸಹಾನುಭೂತಿಯಿರುವ ಇತರೆಲ್ಲ ಸಂಘಟನೆಗಳು,ವ್ಯಕ್ತಿಗಳ ಬೆಂಬಲದೊಂದಿಗೆ. ಅಸ್ಪೃಶ್ಯತೆಯ ವಿರುದ್ಧ ಅಸ್ಪೃಶ್ಯರು ಒಟ್ಟಾಗಿ ಅಸ್ಪೃಶ್ಯತೆ ಎಂಬುದೊಂದು ಮಾನವೀಯತೆಗೆ ಹತ್ತಿದ ಕಳಂಕ ಎಂದು ಯಾರೆಲ್ಲ ಭಾವಿಸುತ್ತಾರೋ ಆ ಎಲ್ಲರ ಬೇಂಬಲದೊಂದಿಗೆ. ಜಾತಿವ್ಯವಸ್ಥೆಯ ವಿರುದ್ಧ ಜಾತಿವ್ಯವಸ್ಥೆಯಿಂದ ಬಾಧಿತರಾದವರೆಲ್ಲರೂ-ಮೇಲ್ಜಾತಿಯವರು ಯಾರೆಲ್ಲ ತಾವೂ ಇದರಿಂದ ಬಾಧಿತರೆಂದು ತಿಳಿಯುತ್ತಾರೋ ಅವರೆಲ್ಲರೂ ಜೊತೆಗೂಡಿ. ಈ ಎಲ್ಲ ಹೋರಾಟಗಳೂ ಜೊತೆ ಜೊತೆಗೇ ಒಮ್ಮ ಒಂದು, ಮತ್ತೊಮ್ಮೆ ಮಗುದೊಂದು ಪ್ರಾಮುಖ್ಯತೆ ಪಡೆಯುತ್ತಾ ಸಾಗುತ್ತದೆ.ಎಲ್ಲರ ಬೆಂಬಲಕ್ಕಾಗಿ ವಿನಂತಿ ಮಾಡಲಾಗುತ್ತದೆ, ಮನವರಿಕೆ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ.ಸಾಧ್ಯವಾದಷ್ಟೂ ಹೆಚ್ಚು ಜನರು ‘ಮಾನವರಾಗೋಣ, ನಾವು ಮಾನವರಾಗೋಣ ‘ ಎಂಬ ದೃಢ ಭಾವನೆ ತಳೆಯಬೇಕೆಂಬುದನ್ನು ನಿರೀಕ್ಷಿಸುತ್ತೇವೆ. ಇನ್ನುಳಿದಂತೆ ಬೆಂಬಲ ಕೊಡಬಯಸುವವರ, ಬಯಸದವರ ಇಚ್ಚೆ.
“ಎಲ್ಲರ ಬೆಂಬಲಕ್ಕಾಗಿ ವಿನಂತಿ ಮಾಡಲಾಗುತ್ತದೆ, ಮನವರಿಕೆ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ” this is certainly a more positive attitude than “Namma horatakke nambike illDa kuyukta manSsinavara aGatya illa,,,,,,,”.
Jaadamaaligala baggeyu vyangyate beke,,,,
ಜಾಡಮಾಲಿಗಳ ಬದುಕಿನ ದಾರುಣ ಸ್ಥಿತಿಯನ್ನು ಸಾರ್ವಜನಿಕರ ನಿರ್ಲಕ್ಷ್ಯವನ್ನು,ಸರಕಾರದ ಅವಜ್ನೆಯನ್ನು ಅತ್ಯಂತ ನಿಖರ ಮತ್ತು ಪರಿಣಾಮಕಾರಿ ಚಿತ್ರಣಗಳೊಂದಿಗೆ ನೀಡಿದ ಹೆತ್ತೂರ ಅವರಿಗೆ ಅಭಿನಂದನೆಗಳು. ಇನ್ನಾದರೂ ಈ ಲೇಖಕರ ವಿನಂತಿಗಳಿಗೆ ನಾವೆಲ್ಲರೂ ಧ್ವನಿಗೂಡೀಸೋಣವೆ? ಸರಕಾರ ಇನ್ನಾದರೂ ಕಣ್ತೆರೆದು ಜಾಡಮಾಲಿಗಳ ಬದುಕನ್ನು ಹಸನಗೊಳಿಸುವಲ್ಲಿ ಕಾರ್ಯೋಂಮುಖವಾಗಬಹುದೆಂದು ಆಶಿಸೋಣ.
Thank u sir….
ಹೆತ್ತೂರ ಅವರಿಗೆ ಅಭಿನಂದನೆಗಳು.
samrtha chitranavanne kottiddira. lekhana chennagide. lekhanakke sambanda pattavaroo chennagi aadare nimma baraha saarthaka. Aa nittinalli shubhavaagali.