ಜಯಶ್ರೀ ಬಿ ಕದ್ರಿ
ವಿರಾಮ ಸಮಯದಲಿ
ವಾಟ್ಸಾಪು ಫೇಸ್ ಬುಕ್ಕು
ಸುಮ್ಮನೆಯೆ ನೋಡುವೆನು
ಚಂದಿರೆಯ ಮೇಕಪ್ಪು
ಹದವಾದ ದುಂಡು ಮೊಗ
ತೇವಗೊಳಿಸುತ ಮತ್ತೆ
ಹಚ್ಚುವಳು ಮೇಕಪ್ಪು
ನೈನ್ ಟು ಫೈವ್
ಅಚ್ಚರಿಯ ಕೌತುಕದಿ
ನೋಡುವೆನು ಬೆರಗಾಗಿ

ಬಣ್ನದೊಡತಿಯ ಲೀಲೆ
ಆಡಗಿಸುವ ಛಾತಿ
ಬೇಸರದ ರೇಖೆಗಳ
ಮರೆಯಿಸುವ ಸೊಬಗು
ಕೆನ್ನೆಯಲಿ ಕೆಂಪನ್ನು
ತುಂಬಿಡುವ ಮೆರುಗು
ಕಣ್ಣಲ್ಲಿ ಕಾಂತಿಯನು
ತರುವುದೇ ಚೆಲುವು
ಸಪ್ತ ಪದರಗಳಲ್ಲಿ
ಬಣ್ನ ಹಚ್ಚುವ ಬೆಡಗು
ನಗೆಯಿಲ್ಲ ಚಂದಿರೆಯ
ಮೊಗದಲ್ಲಿ ಇಷ್ಟು
ಉಳಿದಂತೆ ಮೇಕಪ್ಪು
ಎಲ್ಲ ಪರ್ಫೆಕ್ಟು






0 Comments