ಯಾಕೋ ಇತ್ತೀಚೆಗೆ ನೀನು ಕಿಕ್ಕಿಂಗ್ ಕಾಲಂ ಕಿಕ್ಕಿಂಗ್ ಮಸಾಲ ಕೊಡೋದೇ ಇಲ್ಲಾ ಎಂದು ನನ್ ಫ್ರೆಂಡ್ ಹೇಳಿದ್ರು. ಕಿಕ್ಕಿಂಗ್ ಅಂದ್ರೆ ಏನು ನಿನ್ನ ಪ್ರಕಾರ ಎಂದು ನಾನು ಪ್ರಶ್ನೆ ಮಾಡಿದೆ. ಹಾಗಂದ್ರೆ ಕಾಲು ಎಳೆಯೋದು ಎಂದು ಅರ್ಥ, ಸರಿಯಾಗಿ ಹೇಳುವುದಾದರೆ ಕೀಟಲೆ ಮಾಡು ರೇಗಿಸು ಎನ್ನುವ ಅರ್ಥವೂ ಬರುತ್ತದೆ ಎಂದು ಹೇಳಿದರು. ಆಗ ನಿಮ್ಮ ಮಾತು ಸರಿ, ಆದರೆ ನಮ್ಮ ಪ್ರಕಾರ ಕಿಕ್ಕಿಂಗ್ ಅಂದ್ರೆ ಕೇವಲ ಕಾಲು, ಎಳೆಯುವುದು,ಇನ್ನೊಬ್ಬರನ್ನು ಆಡಿಕೊಳ್ಳುವುದು ಮಾತ್ರವಲ್ಲ, ಕೆಲವು ಬರಹಗಳ ಮೂಲಕ ಸಂಬಂಧಿತರು ಮಾಡುತ್ತಿರುವ ಕೆಲಸಗಳ ಬಗ್ಗೆ ತಿಳಿಸುವುದು . ಕಿಕ್ಕಿಂಗ್ ಮತ್ತನ್ನು ಏರಿಸ ಬೇಕಿಲ್ಲ, ನೇರವಾಗಿ ಸಂಬಂಧಿತರಿಗೆ ಸೂಚನೆ ನೀಡ್ತೀವಿ. ತಮಾಷೆ ಈ ಕ್ಷಣವೂ ಮಾಡೋಕೆ ಕಷ್ಟ ಏನು ಇಲ್ಲ, ಒಂದು ಕಾರ್ಯಕ್ರಮ ವೀಕ್ಷಿಸಿದಾಗ ನನ್ನ ಗಮನಕ್ಕೆ ಹಲವಾರು ಸಂಗತಿಗಳು ಕಾಣ ಸಿಗುತ್ತದೆ, ಹಾಗೆ ನಾನು ಮಾಡಿದರೆ ಅದು ತೀರ ಸಣ್ಣ ಮಟ್ಟದ ಹಾಸ್ಯ ಎನ್ನುವಂತಾಗುತ್ತದೆ, ಮೂಲ ಉದ್ದೇಶ ಮರೆಮಾಚುತ್ತದೆ ಎಂದು ಹೇಳಿದೆ.
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments