ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು?

’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಆದರೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಪ್.ಎಮ್ ರೇಡಿಯೊಗಳು ಕೆಲವೇ ಕೆಲವು ವರ್ಷಗಳಲ್ಲಿ ಕನ್ನಡ ಅಪ್ಪಿಕೊಂಡು ಅತಿ ಹೆಚ್ಚು ವ್ಯಾಪಾರ ಮಾಡುವಂತಾದದ್ದು ನಾವೆಲ್ಲರೂ ಕಂಡುಕೊಂಡ ಸತ್ಯ. ಈಗ ಬೆಂಗಳೂರಿನ ಹಿಂದಿ ಹಾಡು ಹಾಕುವ ಏಕೈಕ ಸ್ಟೇಶನ್ ಆದ ರೇಡಿಯೊ ಒನ್ ವಾಹಿನಿಯ ನ್ಯಾಷನಲ್ ಮಾರ್ಕೆಟಿಂಗ್ ಹೆಡ್ ಶೈಜು ಅವರ ಪ್ರಕಾರವೇ ಬೆಂಗಳೂರಿನ ಎಫ್.ಎಮ್ ಮಾರುಕಟ್ಟೆಯಲ್ಲಿ ’ಹಿಂದಿ’ಗಿರುವ ಪಾಲು ಹೆಚ್ಚೆಂದರೆ 14%. ಕನ್ನಡ ವಾಹಿನಿಗಳನ್ನು ಕೇಳುವವರ ಸಂಖ್ಯೆಯ ಮುಂದೆ ಹಿಂದಿ ಕೇಳುಗರ ಸಂಖ್ಯೆ ನಗಣ್ಯ ಅನ್ನುವ ಮಾತನ್ನು ಅವರು ಆಡಿದ್ದಾರೆ. ಕನ್ನಡ ಮನರಂಜನೆ ಅನ್ನುವುದು ಬೆಂಗಳೂರಿನ, ಕನ್ನಡ ಗ್ರಾಹಕರ ಮೊದಲ ಆಯ್ಕೆ ಅನ್ನುವುದು ನಿಜ ಸ್ಥಿತಿಯಾಗಿರುವಾಗ, ಕನ್ನಡ ಮಾಧ್ಯಮಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ನನ್ನ ಮನಸ್ಸಲ್ಲಿ ಏಳುತ್ತಿರುವ ಹಲವು ಪ್ರಶ್ನೆಗಳು ಇಂತಿವೆ. ಪೂರ್ಣ ಓದಿಗೆ :ಮೀಡಿಯಾ ಮೈಂಡ್  ]]>

‍ಲೇಖಕರು G

19 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading