ಇತ್ತೀಚೆಗೆ ಟೈಮ್ಸ್ ನವ್ ಚಾನೆಲ್ ಕಡೆ ಹೋಗಿದ್ದೆ, ಅಲ್ಲಿ ‘ರಾಜ’ ರಾಜಕೀಯ ಪ್ರಕರಣ ನಡಿತಾ ಇತ್ತು. ಅಲ್ಲಿದ್ದ ಪತ್ರಕರ್ತ -ನಿರೂಪಕ ತಮಿಳುನಾಡು ಸೇರಿದಂತೆ ಇತರ ರಾಜಕೀಯ ನಾಯಕರನ್ನು ಬಾಚಿ ಬಳಿದು ತಂದು ಸ್ಟುಡಿಯೋ ದಲ್ಲಿ ಗುಡ್ಡೆ ಹಾಕಿ ಬಿಟ್ಟಿದ್ರು. ಚರ್ಚೆ ಬಿಡಿ ಚೆನ್ನಾಗಿ ಇದ್ದೆ ಇತ್ತು.
ಆದ್ರೆ ಒಂದು ಸಂಗತಿ ನನಗೆ ಸಿಕ್ಕಾಪಟ್ಟೆ ನಗು ತಂದಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಒಟ್ಟಾಗಿ ತೋರಿಸಲು ಆ ವಾಹಿನಿ ಒಬ್ಬರ ಪಕ್ಕಾ ಮತ್ತೊಬ್ಬರು ಬರುವಂತೆ , ನೇರವಾಗಿ ಹೇಳ ಬೇಕೆಂದರೆ ಒಂದರ ಪಕ್ಕಾ ಮತ್ತೊಂದು ಫೋಟೋ ನೇತು ಹಾಕಿದಂತೆ ಡಿಸೈನರ್ ಅಡ್ಜಸ್ಟ್ ಮಾಡಿದ್ರು. ಬಂದ ಅತಿಥಿಗಳಿಗೇ ಬೇರೆಯವರು ಮುಖದಲ್ಲಿ ಯಾವ ರೀತಿಯ ಭಾವನೆ ತೋರಿಸ್ತಾ ಇದ್ದಾರೆ ಎನ್ನುವುದು ತಿಳಿಯದೆ ಹೋದರು ವೀಕ್ಷಕರಿಗೆ ಅವರೆಲ್ಲರ ವರ್ತನೆ ಸ್ಪಷ್ಟವಾಗಿ ಕಾಣ್ತಾ ಇತ್ತು.
ಒಬ್ಬರು ಆಕಳಿಸ್ತಾ ಇದ್ರೆ, ಮತ್ತೊಬ್ಬರು ಬಿಡಿ ಆ ಕಥೆ ,ಇದರ ಮಧ್ಯೆ ನಿರೂಪಕ ಜಾಣ ಪ್ರಶ್ನೆ ಕೇಳುತ್ತಾ ಕುಳಿತಿದ್ರು
.
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments