@@ ಸುವರ್ಣ ನ್ಯೂಸ್ ನಲ್ಲಿ ನನ್ನ ಗಮನ ಹೆಚ್ಚು ಹೆಚ್ಚು ಸೆಳೆಯೋದು-ಸೆಳೆದಿರುವುದು ಆ ವಾಹಿನಿಚೀಫ್ ರಂಗನಾಥ್ ಸರ್ ನಡೆಸಿ ಕೊಡುವ ಫೋನ್ ಇನ್ ಕಾರ್ಯಕ್ರಮ.ಇದು ತುಂಬಾ ವಿಶೇಷವಾಗಿದೆ
. ಉನ್ನತ ಸ್ಥಾನದಲ್ಲಿ ಕುಳಿತು ಬಿಟ್ರೆ ಸಾಮಾನ್ಯರ ಕಡೆ ಕಣ್ಣೆತ್ತಿ ನೋಡುವುದಕ್ಕೆ ಇಷ್ಟ ಪಡಲ್ಲ ತುಂಬಾ ಜನರು. ಅಂತಹುದರಲ್ಲಿ ನಿಜಕ್ಕೂ ಒಳ್ಳೆಯ ಕೆಲಸ ಮಾಡ್ತಾ ಇದ್ದಿರಿ ಸರ್.
ಭಾನುವಾರ ರಂಗ ಸರ್ ಅವರು ನಡೆಸಿ ಕೊಟ್ಟ ಫೋನ್ ಇನ್ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸರ್ಕಾರವನ್ನು ಕುರಿತು ಜನರಿಗೆ ಸೀರೆ ಹಂಚುವುದಕ್ಕಿಂತ ಪ್ರವಾಹ ಪೀಡಿತರಿಗೆ ನೆಲೆ ಒದಗಿಸುವುದು ಈಗಿರುವ ಮುಖ್ಯ ಸಂಗತಿ ಎಂದು ಹೇಳಿದ್ರು. ಅದಂತೂ ಸತ್ಯವಾದ ಮಾತು ಎಲ್ಲಾ ಸೌಕರ್ಯಗಳು ಇದ್ರು ನಮಗೆ ಪ್ರಕೃತಿಯಲ್ಲಿ ಸಣ್ಣ ಏರುಪೇರಾದ್ರು ತಡೆದು ಕೊಳ್ಳಲು ಕಷ್ಟ ಆಗುತ್ತದೆ , ಮೊನ್ನೆ ಬಿದ್ದ ಮಳೆಗೆ ಇಡೀ ಬೆಂಗಳೂರೇ ಪತರಿಗುಟ್ಟಿ ಬಿಡ್ತು, ಅಂತಹುದರಲ್ಲಿ ಪ್ರವಾಹ ಪೀಡಿತರು ..ಅಯ್ಯೋ ದೇವ್ರೇ ನೆನಪಿಸಿ ಕೊಳ್ಳುವುದಕ್ಕೂ ಕಷ್ಟ ಆಗುತ್ತೆ ಮನಕ್ಕೆ
ಪೂರ್ಣ ಓದಿಗೆ : ಮೀಡಿಯಾ ಮೈಂಡ್



0 Comments