ಸುವರ್ಣ ವಾಹಿನಿಯಲ್ಲಿ ಗುರುಮಹಿಮೆ ಕಾರ್ಯಕ್ರಮ ಸಹ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂದೇ ಹೇಳ ಬಹುದು. ಯಾಕಂದ್ರೆ ಅದರಲ್ಲಿ ಆರಂಭದಲ್ಲಿ ಓರ್ವ ಸೆಲಬಿ ಬಂದು ರಾಘವೇಂದ್ರ ಸ್ವಾಮಿ ಬಗ್ಗೆ ತಿಳಿಸುತ್ತಾರೆ, ಆ ಬಳಿಕ ರಾಯರ ಅಪಾರ ಭಕ್ತಕೋಟಿಯಲ್ಲಿ ಕೆಲವರು ಬಂದು ತಮ್ಮ ಅನುಭವ ಹೇಳಿಕೊಳ್ತಾರೆ.
ರಾಯರು , ಶಿರಡಿ ಬಾಬಾರಂತಹ ವಿಭೂತಿಪುರುಷರು ನಮ್ಮೊಂದಿಗೆ ಬದುಕಿ ಬಾಳಿದವರು, ಅವರ ಮಹಿಮೆಗಳುಅತೀತ.ಅಂತಹ ಅನುಭವಗಳನ್ನು ನಂಬಿದವರೆಲ್ಲರೂ ಹೊಂದಿದ್ದಾರೆ. ಮೂಲಭೂತವಾಗಿ ಇಲ್ಲಿ ಕಂಡು ಬರುವ ಸಂಗತಿ ಅಂದ್ರೆ ನಂಬಿಕೆ ಸಾಕಷ್ಟು ಕಷ್ಟಗಳನ್ನು ದೂರ ಮಾಡುತ್ತದೆ.
ಅದು ಬದುಕಲ್ಲಿ ತುಂಬಾ ಮುಖ್ಯ. ವೈದ್ಯರೇ ಹೇಳ್ತಾರಲ್ಲ, ಮೊದಲು ರೋಗಿಯ ದೇಹ ನಾವು ಕೊಡುವ ಚಿಕಿತ್ಸೆ ಸ್ವೀಕರಿಸ ಬೇಕು ಆಗಷ್ಟೇ ಫಲಿತಾಂಶ ಸಿಗೋದು ಎಂದು! ಎಷ್ಟೇ ಮುಂದುವರೆದ ಔಷಧ ಸಹ ಕೆಲಸ ಮಾಡಬೇಕಾದರೂ ನಂಬಿಕೆ ತುಂಬಾ ಮುಖ್ಯ.ದೇವರು-ಗುರುಗಳ ವಿಷಯದಲ್ಲೂ ಇದೆ ಅಪ್ಲೈ ಆಗುತ್ತದೆ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್



0 Comments