ಜಯರಾಮಾಚಾರಿ
ಕೋಟ್ ಗಳಿಗಿದು ಕಾಲವಲ್ಲ
ಕೋಟ್ ಗಳನ್ನು ಕಸದ ಡಬ್ಬವಾಗಿ
ತಮ್ಮ ಗೆಲುವಿಗೆ
ಸೋಲಿಗೆ
ಅವಮಾನಕ್ಕೆ
ದ್ವೇಷ ಕಾರಲಿಕ್ಕೆ
ಹೀಗೆ
ನಿಜ ಭಾವದ ಮುಖವಾಡ ಹಾಕಲಿಕ್ಕೆ
ಅದರ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆ
ಕಿಲ್ ದಿ ಕೋಟ್ಸ್
ಎಲ್ಲದಕ್ಕೂ ಕೋಟ್ಸ್ ಇವೆ
ಪ್ರೀತಿಗೂ ಪ್ರಣಯಕ್ಕೂ
ಸೂತಕ ಸಂಭ್ರಮಕ್ಕೂ
ಮಗು ಹುಟ್ಟಿದರೆ ಅಪ್ಪನಾದ ಖುಷಿಗೂ
ಕೋಟ್ಸ್ ಹುಡುಕುವರು
ಪ್ರೀತಿ ಸತ್ತಾಗ ತನ್ನ ದುಃಖ ತೋಡಲು
ಕೋಟ್ಸ್ ಬೇಕು
ಮದರ್ ಡೇ ದಿನ ಭಯಂಕರ ಕೋಟುಗಳು
ರಾರಾಜಿಸುತ್ತವೆ
ಅಮ್ಮಂದಿರು
ಅಡುಗೆ ಮನೆಯಲ್ಲಿ ಕಳೆದು ಹೋಗಿದ್ದಾರೆ

ಕೆಲವರು
ವಾಟ್ಸಾಪುಗಳಲ್ಲಿ
ಫೇಸ್ಬುಕ್ಕಿನಲ್ಲಿ
ಕೆಲವರಿಗಷ್ಟೇ ತೋರುವಂತೆ
ಕೋಟ್ಸ್ ಹಾಕುವರು
ನೋಡಿದ ಕ್ಷಣ ಆ ಕೋಟು ಕೊಂದು
ಇನ್ನೊಂದ ಹುಡುಕುವರು
ಕೆಲವರಿಗೆ
ತಾನು ಹಾಕಿದ ಕೋಟ್ ಬಗ್ಗೆ
ಇನ್ ಸೆಕ್ಯೂರಿಟಿ
ತಮ್ಮ ಹೆಸರೇ ಬರೆದುಕೊಂಡುಬಿಡುತ್ತಾರೆ
ಕೋಟಿನ ಹಿಂದೆ ಅವರ ಭಾವಚಿತ್ರ
ಸುಮ್ಮನಿದೆ
ಅರೇ !
ಕೋಟ್ಸ್ ಬಿಡಿ
ನಿಮಗನಿದ್ದು ಬರೆದು ಸಾಯಿರಿ
ಎಂದೆ
ಅದಕ್ಕೊಂದು ಕೋಟ್ ಹಾಕಿ
ಶ್ರದ್ಧಾಂಜಲಿ
ಮಾಡಿದರು.






ಮೊನಚಾಗಿದೆ