ಜಯರಾಮಚಾರಿ ಕಥೆ- ಪ್ರೀತಿಯಾಯ್ತು, ಪ್ರಣಯವಾಯ್ತು…

ಜಯರಾಮಚಾರಿ


ಭಾಗ 2 

(ಮುಂದೆ ಏನಾಯಿತು ಅಂತ ಹೇಳುವ ಮುನ್ನ, ಈ ಕತೆಗಿರುವ ಇನ್ನೊಂದು ಮಗ್ಗಲನ್ನು ನಿಮಗೆ ಪರಿಚಯಿಸಬೇಕು, ಕತೆಗಾರನಾಗಿ ಕೇವಲ ನವಿರು ನವಿರಾದ ಪ್ರೇಮ ಕತೆ ಹೇಳಿ ನಿಮ್ಮನ್ನು ಬರೀ ರೋಮಾಂಚನಕ್ಕೆ ಹಚ್ಚುವ ಮುನ್ನ ಕತೆಗೆ, ಕತೆಯ ಪಾತ್ರಗಳಿಗೆ ನ್ಯಾಯ ಒದಗಿಸದಿದ್ದರೂ ಕತೆ ಹೀಗಿತ್ತು ಪಾತ್ರಗಳು ಹೀಗೆ ಇತ್ತು ಅಂತ ಹೇಳಲೇಬೇಕಿದೆ)

ನೀವು ಇಲ್ಲಿಯವರೆಗೂ ಕತೆ ಓದಿದ್ದರೆ, ಸುಹಾಸಿನಿ ಪ್ರೀತಮ್ ಸ್ಕೂಟಿಯಲ್ಲಿ ಹೋಗುವಾಗ ಪದೇ ಪದೇ ಕಾಲ್ ಮಾಡಿದ ವರದ, ಮತ್ತೆ ಅವನು ನನ್ ಫ್ರೆಂಡಿನಾ ಫ್ರೆಂಡ್ ಅಂತ ಹೇಳಿದ ನೆನಪಿರುತ್ತದೆ, ಆ ವರದನ ನಿಜವಾದ ಹೆಸರು ವರದ ಅಲ್ಲ, ರಜನೀಶ್. ಅವರಿಬ್ಬರೂ ಹಾಗೆ ಸ್ಕೂಟಿಯಲ್ಲಿ ಹೋಗುವ ನಾಲ್ಕು ವರ್ಷ ಮುಂಚೆ ಸುಹಾಸಿನಿಗೂ ರಜನೀಶ್ ಗೂ ಪ್ರೀತಿಯಾಗಿತ್ತು, ಆದರೆ ಮೇಲೆ ಹೇಳಿದ ಪ್ರೀತಿಯಷ್ಟು ನವಿರು ನವಿರಾಗಿಲ್ಲ, ಆ ಹೊತ್ತಿಗಾಗಲೇ ಪ್ರೀತಿ ಪ್ರೇಮದಲ್ಲಿ ನಂಬಿಕೆ ಕಳಕೊಂಡ ರಜನೀಶ್ ಸುಹಾಸಿನಿ ನೋಡಿ, ನೀವು ನೋಡಕ್ಕೆ ಚೆನ್ನಾಗಿದ್ದೀರಾ.

ಮದ್ವೆಯಾದರೆ ಚೆನ್ನಾಗಿರುತ್ತೆ ಅನ್ಸುತ್ತೆ ಯಾವುದಕ್ಕೂ ಥಿಂಕ್ ಮಾಡಿ ಅಂದಿದ್ದ, ಆಕೆ ಸರಿ ಎಂದಿದ್ದಳು,ಅಲ್ಲಿ ಇಲ್ಲಿ ಸಿಕ್ಕು ಸ್ನೇಹದಿಂದ ಓಡಾಡುತ್ತಿದ್ದರು, ಒಮ್ಮೆ ರಜನೀಶ್ ಬರ್ತ್ ಡೇ ಎಂದು ಹಿಮಾಚಲದಲ್ಲಿದ್ದು ಮೂರು ದಿನವಾದ ಮೇಲೆ ಬಂದಿದ್ದ ಆ ಸಂಜೆ ಸಿಕ್ಕಿದ್ದ, ಎಂದಿನಂತೆ ಮಾತನಾಡುತ್ತಾ, ಐಸ್ ಕ್ರೀಮ್ ತಿಂದು, ಅವಳನ್ನು ಮನೆಗೆ ಡ್ರಾಪ್ ಮಾಡುವ ವೇಳೆ, ಅವಳು ಐ ಲವ್ ಯೂ ಎಂದು ಹೇಳಿ ಇಳಿದು ಹೋದಳು, ಅವನು ಅರೆ ಇಸ್ಕಿ ಎಂದುಕೊಂಡು ಖುಸಿಯಿಂದ ಮನೆಗೆ ಹೋದ, ಅವಳು ಹಾಗೆ ಹೇಳುವ ವರುಷದ ಹಿಂದೆ ಅವನಿಗೆ ತಂದೆ ತಾಯಿ ಯಾವುದೋ ಅಪಘಾತದಲ್ಲಿ ಸತ್ತು ಅಕ್ಕ ಭಾವ ಜೊತೆ ಇದ್ದ ತಾಯಿ ಇಲ್ಲದ ದಿನಗಳಲ್ಲಿ ರೋಸಿ ಹೋಗಿದ್ದ ಖಿನ್ನನಾಗಿದ್ದ ಆಗಲೇ ಇವಳು ಅವನಿಗೆ ಸಿಕ್ಕಿದ್ದು.

ಪ್ರೀತಿಯಾಯ್ತು, ಪ್ರಣಯವಾಯ್ತು, ಮದುವೆಗೆ ಅವಳ ಮನೆಯವರನ್ನು ಅವಳೇ ಒಪ್ಪಿಸಿದಳು ಇವನಿಗೆ ಯಾವ ಅಡೆತಡೆಯಿಲ್ಲ. ಎಲ್ಲವೂ ಸರಾಗ ಸಲೀಸು ಸುಲಭ.

ಆದರೆ, ಸುಲಭವಾಗಿ ದಕ್ಕಿದ್ದು ಜಾಸ್ತಿ ಕಾಲ ಇರದು ನೋಡಿ, ಎಲ್ಲವೂ ಸರಿಯಾಗಿದ್ದ ಅವಳು ಇದ್ದಕ್ಕಿದಂತೆ ಅವನನ್ನು ಇಗ್ನೋರ್ ಮಾ ಡತೊಡಗಿದಳು, ಹೊಸ ಕಂಪನಿಗೆ ಸೇರಿದ ಕೆಲವು ದಿನಗಳಲ್ಲಿ ಮೊಬೈಲ್ ಆಫೀಸಲ್ಲಿ ಅಲ್ಲೋವ್ ಇಲ್ಲ ಎಂದು ಹೇಳಿದಳು ಹಾಗಾಗಿ ದಿನಕ್ಕೆ ಹತ್ತು ಗಂಟೆ ಕಾಲ ಅವಳು ವಾಟ್ಸ್ ಆಪ್ ಗೆ ಕಾಲ್ ಗೆ ಸಿಕ್ತಾ ಇರಲಿಲ್ಲ, ಪಾಪ ಆಫೀಸ್ ಅಂದುಕೊಂಡು ಸುಮ್ಮನಿರುತ್ತಿದ್ದ ದಿನ ಬೆಳಗ್ಗೆ ರಾತ್ರಿ ಗುಡ್ ನೈಟ್ ಚಿನ್ನು, ಗುಡ್ ಮಾರ್ನಿಂಗ್ ಚಿನ್ನು ಅಂತ ತಪ್ಪದೆ ಬರುತಿತ್ತು. 

ಸಾಮಾನ್ಯವಾಗಿ ಅವಳು ಅವನಿಗೆ ಗುಡ್ ನೈಟ್ ಹೇಳಿ ಡಾಟಾ ಆಫ್ ಮಾಡಿ ಮಲಗಿಬಿಡುತ್ತಿದ್ದಳು, ಆದರೆ ಹೊಸ ಕಂಪನಿಗೆ ಸೇರಿದ ಮೇಲೆ ಗುಡ್ ನೈಟ್ ಹೇಳಿದ ಮೇಲೂ ಆನ್ ಲೈನ್ ಲಿ ಇರುತ್ತಿದ್ದಳು, ಫೇಸ್ ಬುಕ್ ಲಿ ಇರುತ್ತಿದಳು, ತೀರಾ ಕಮ್ಮಿ ಬಳಸುತ್ತಿದ್ದ ಫೇಸ್ ಬುಕ್ ಲಿ ಒಂದರ ಮೇಲೊಂದು ಸ್ಟೋರಿಗಳು, ಒಂದು ಸಲ ಸಡನ್ನಾಗಿ ಎಚ್ಚರವಾಗಿ ಮೆಸೆಂಜರ್ ನೋಡಿದ ಬೆಳಗ್ಗೆ ಮೂರಾದರೂ ಆನ್ ಲೈನ್, ಅವತ್ತು ಎನ್ ವಿಷ್ಯ ಇಷ್ಟೋತ್ಟಾದ್ರೂ ಆನ್ ಲೈನ್ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ನ ಅಂತ ಕಿಚಾಯಿಸಿದ ಆಕೆ ಬಿಡ್ತು ಬಿಡ್ತು ಅನ್ನು ಎಂದು ಆಫ್ ಲೈನ್ ಆದಳು, ಆಮೇಲೆ ಪ್ರತಿ ಸಲ ಅವಳು ಆನ್ ಲೈನ್ ಇದ್ದಾಗ ಕೇಳಿದಾಗ ಸಿಟ್ಟಾಗುತ್ತಿದ್ದಳು, ಗುಡ್ ನೈಟ್ ಚಿನ್ನು, ಗುಡ್ ಮಾರ್ನಿಂಗ್ ಚಿನ್ನು ಇದ್ದುದು ಬರೀ ಗುಡ್ ನೈಟ್, ಗುಡ್ ಮಾರ್ನಿಂಗ್, ಈ ಮೋಜಿಗಳು ಕಾಣೆಯಾದವು ಒಮ್ಮೊಮ್ಮೆ ಅವಳ ಡಿಪಿ ಕೂಡ ಕಾಣಿಸುತ್ತಿರಲಿಲ್ಲ ಕೇಳಿದಾಗ ಮೊಬೈಲ್ ಪ್ರಾಬ್ಲಂ ಕಣೋ ಅದಕ್ಕೆ ರಿಸೆಟ್ ಮಾಡಿದೆ ಅನ್ನುತ್ತಿದ್ದಳು. ಬೇಗ ಮದುವೆ ಆಗಬೇಕು ಅನ್ನುತ್ತಿದ್ದವಳು ಮದುವೆ ಮಾತು ಬಂದಾಗ ನೋಡೋಣ ಈ ವರ್ಷ ಬೇಡ ಅನ್ನುವುದಕ್ಕೆ ಶುರು ಮಾಡುತ್ತಿದ್ದಳು, ವಾರಕ್ಕೆ ಎರಡು ಮೂರು ಸಲ ಸಿಗುತ್ತಿದ್ದವಳು, ಹದಿನೈದು ದಿನಕ್ಕೊಮ್ಮೆ ಸಿಗುತ್ತಿದ್ದಳು ಕೇಳಿದರೆ ಕೆಲ್ಸ, ಬರ್ತ್ ಡೇ ಪಾರ್ಟಿ ಅನ್ನುತ್ತಿದ್ದಳು. ಒಂದು ದಿನ ಪ್ರೀತಮ್ ಎಂಬ ಹುಡುಗನ ಫೇಸ್ ಬುಕ್ ರಿಕ್ವೆಸ್ಟ್ ಬಂತು ಅದನ್ನು ಇಗ್ನೋರ್ ಮಾಡಿದ ಆಕೆಯನ್ನು ಕೇಳಲು ಇಲ್ಲ.

ಒಂದು ದಿನ ತಲೆಕೆಟ್ಟು ಯಾಕೆ ಇಷ್ಟೊಂದು ಇಗ್ನೋರ್ ಮಾಡ್ತ ಇದ್ಯಾ? ಯಾವನಾದ್ರೂ ಬಿದ್ದವನ ನಿನಗೆ ಎಂದು ರೇಗಾಡಿದಾಗ ,ನನಗೆ ಸ್ವಲ್ಪ ಸಮಯ ಕೊಡು ಯಾವುದೋ ಪ್ರಾಬ್ಲಂ ಲಿ ಇದ್ದೀನಿ ಎಲ್ಲ ಹೇಳ್ತೀನಿ ಎಂದಿದ್ದಳು, ಪದೇ ಪದೇ ಇದೆ ಕಿತ್ತಾಟ ಶುರುವಾಗಿತ್ತು, ಸಾಕು ಎಣಿಸಿ ಅವನು ಅವಳನ್ನು ಮರೆತು ಸ್ವಲ್ಪ ದಿನವಿದ್ದಾಗ ಮತ್ತೆ ಅವಳೇ ಮೆಸೇಜು ಮಾಡಿ ಸರಿ ಆಯ್ತು.

ಒಂದು ದಿನ ಅವನ ಗೆಳೆಯನ ಮದುವೆಗೆ ಹೋಗಬೇಕಾದರೆ ಸಂಜೆ ಸಿಗು ನೋಡಿಕೊಂಡು ಹೋಗ್ತೀನಿ ಅಂದಿದ್ದ, ಓಕೆ ಸಿಗೋಣ ಲವ್ ಯು ಅಂದಿದ್ದಳು. ಆ ಸಂಜೆ ಐದು ಆರಾಯ್ತು, ಆಕೆ ಎಂದು ಕೊಟ್ಟ ಮಾತಿಗೆ ತಪ್ಪಿರಲಿಲ್ಲ ಆ ಸಂಜೆ ಅವಳನ್ನು ನೋಡಲೇಬೇಕು ಅನಿಸಕ್ಕೆ ಸುರುವಾಯ್ತು, ಕಾಲ್ ಮಾಡಿದ ಒಂದಲ್ಲ ಮೂರು ಸಲ, ನಾಲ್ಕನೇ ಸಲಕ್ಕೆ ಕಾಲ್ ಪಿಕ್ ಮಾಡಿ, ಬರ್ತೀನಿ ಸ್ವಲ್ಪ ಹೊರಗೆ ಇದ್ದೀನಿ ಫ್ರೆಂಡ್ ದು ಬರ್ತ್ ಡೇ ಪಾರ್ಟಿ ಅಂದಳು, ಇವನು ಸರಿ ಅನ್ನುವ ಸಮಯಕ್ಕೆ ಯಾರೋ ಕೆಮ್ಮಿದ ಧ್ವನಿ ಕೇಳಿಸಿತು, ಆ ಕಡೆ ಕಾಲ್ ಇನ್ನೂ ಕಟ್ ಆಗಿರಲಿಲ್ಲ, ಗಾಡಿಯ ಸದ್ದು, ಆನಂತರ ಯಾರೋ ‘ಯಾರು ಅದು’ ಅಂದ, ಅದಕ್ಕೆ ಇವಳು ‘ಯಾರೋ ಫ್ರೆಂಡಿನಾ ಫ್ರೆಂಡ್ ಅಂದಳು’ ರಜನೀಶ ಕುಸಿದ, ಇಷ್ಟು ದಿನ ಸುಳ್ಳಾಗಲಿ ಅವಳಿಗೆ ಹೇಳದ ನನ್ನ ಅನುಮಾನ ಅಂದುಕೊಂಡಿದ್ದ ಅವಳ ಬದುಕಿಗೆ ಇನ್ನೊಬ್ಬ ಬಂದಿದ್ದ.

ವಿಚಿತ್ರ ಆಳ ಗಾಢ ನೋವು ರಪ್ಪಂತ ಬಡೀತು, ಆಲೂ ಬಂತು , ಕೋಪ ಬಂತು ಕಾಲ್ ಮಾಡಿದ ಒಂದಲ್ಲ ನಲವತ್ತು ಸಲ, ಪಿಕ್ ಆಗಲಿಲ್ಲ, ಆ ರಾತ್ರಿ ಭಯಾನಕ ಜಗಳ ಮೆಸೇಜಿನಲ್ಲಿ, ‘ಯಾರೋ ಫ್ರೆಂಡಿನಾ ಫ್ರೆಂಡ್ ಅಂದಳು’. ಧ್ವನಿ ಪದೇ ಪದೇ ನೆನಪು. ಕೊನೆಗೂ ಕೇಳಿದ ನಿನ್ನ ಬದುಕಿಗೆ ಯಾರೋ ಬಂದಿದ್ದಾನೆ ಬಿಡು ಎಂದು ಬಾಯ್ ಹೇಳಿದ , ಆಕೆ ಇಲ್ಲ ಆ ತರ ಏನಿಲ್ಲ ಅವನು ನನ್ನ ಆಫೀಸಿನ ಫ್ರೆಂಡ್, ನೀನಿತರ ಯಾವತ್ತೂ ಜಗಳ ಆಡಿಲ್ಲ, ಪ್ಲೀಸ್ ನೆಗಟಿವ್ ಥಿಂಕ್ ಮಾಡಬೇಡ ಎಂದಳು ಮತ್ತೆ ಸರಿಯಾಯ್ತು ಆದರೆ ‘ಯಾರೋ ಫ್ರೆಂಡಿನಾ ಫ್ರೆಂಡ್’ ವಾಕ್ಯ ಮಾತ್ರ ಮನಸ್ಸಿನಲ್ಲಿ ಆಳವಾಗಿ ಉಳಿದುಕೊಂಡಿತು.

ಮತ್ತೆ ಒಂದಷ್ಟು ವಾರಗಳು ಆದಮೇಲೆ ಸಿಕ್ಕಿದ್ದಳು, ಹೀಗೆ ಮಾತು ಆಡುತ್ತಾ ಸಿನಿಮಾ ನೋಡಲು ಹೋದರು, ಅವನ ಮೊಬೈಲ್ ಲಿ ಸಿನಿಮಾ ಬುಕ್ ಮಾಡಿ ಬ್ಯಾಟರಿ ಕಮ್ಮಿಯಿರಲು ಆ ಟಿಕೇಟುಗಳನ್ನು ಅವಳ ವಾಟ್ಸ್ ಆಪ್ ಗೆ ಕಳಿಸಿದ, ಸಿನಿಮಾ ಥಿಯೇಟರ್ ಗೆ ಹೋದಾಗ ಅವನ ಮೊಬೈಲಿನ ಬ್ಯಾಟರಿ ಸತ್ತಿತ್ತು, ಸರಿ ಅಂದು ಅವಳ ಮೊಬೈಲ್ ಕೊಡು ಅಂದಾಗ ಆಕೆ ಒಂದು ರೀತಿ ಮಾಡುತ್ತಾ ನಾನೇ ತೋರಿಸುವೆ ಎಂದು ಟಿಕೆಟ್ ತೋರಿಸಲು ಅವನು ನೋಡಿಬಿಟ್ಟ ಮೈ ಬಾಯ್ ಅಂತ ಸೇವ್ ಮಾಡಿಕೊಂಡ ಇವನ ನಂಬರ್ ವರದ ಆಗಿತ್ತು, ಇದ್ಯಾರು ವರದ ಎಂದಾಗ, ಮೊಬೈಲ್ ರೀಸೇಟ್ ಮಾಡಿದೆ ಅರ್ಜೆಂಟಲ್ಲಿ ನಿಮ್ಮ ಅಪ್ಪನ ಹೆಸರಲ್ಲಿ ನಂಬರ್ ಸೇವ್ ಮಾಡಿದೆ ಎಂದಳು, ಅವಳ ಕಣ್ಣಲ್ಲಿ ಸುಳ್ಳು ಎದ್ದು ಕಾಣುತ್ತಿತ್ತು, ಜೋರು ಜಗಳವಾಯ್ತು. ಆಮೇಲೆ ಮಾತಿಲ್ಲ ಕತೆಯಿಲ್ಲ ಒಂದು ವಾರ.

ಎಂಟನೇ ದಿನಕ್ಕೆ ಅವನು ಆಫೀಸಿನ ಮೀಟಿಂಗ್ ಲಿ ಇರಬೇಕಾದರೆ ಅವಳಿಂದ ಮೆಸೇಜ್ ಬಂತು ಅದು ಹೀಗಿತ್ತು.

‘ಡಿಯರ್ ಚಿನ್ನು, ಲವ್ ಯೂ ಕಣೋ, ನನ್ನ ಕ್ಷಮಿಸು ನಾನು ನಿನಗೆ ಮೋಸ ಮಾಡ್ಬಿಟ್ಟೆ, ನಂದೇನು ತಪ್ಪಿಲ್ಲ, ಆಫೀಸಲ್ಲಿ ನಾನು ಒಬ್ಬ ಹುಡುಗನಿಗೆ ಆಟ ಆಡಿಸಲು ಹೋಗಿ, ಅವನತ್ತಿರಾ ಸಿಕ್ಕಿ ಹಾಕಿಕೊಂಡಿದ್ದೇನೆ, ಅವನು ಕೂಡ ಒಳ್ಳೆಯವನೇ, ಬೇಡ ನೀನು ಅಂತ ಬಂದೆ ಆದರೆ ಸೂಸೈಡ್ ಮಾಡಿಕೊಂಡ, ಹುಚ್ಚನ ತರ ಪ್ರೀತಿಸ್ತಾನೆ, ಕ್ಷಮಿಸು ಆದ್ರೆ’

ಅದನ್ನು ನೋಡಿದ ಕೂಡಲೇ, ಅವನಿಗೆ ಗವ್ವನೆಸಿತು ಸುತ್ತ ಮುತ್ತ ಏನು ನಡೆಯುತ್ತಿದೆ ಗೊತ್ತಾಗಲಿಲ್ಲ, ಹೃದಯ ವಿಚಿತ್ರ ರೀತಿಲಿ ಬಡಿದುಕೊಂಡಿತು, ಇಡೀ ಜೀವನ ಕಳೆಯಬೇಕು ಅಂದವಳು ಒಂದೇ ಕ್ಷಣದಲ್ಲಿ ಇಲ್ಲವಾಗಿಬಿಟ್ಟಳೂ, ನಾಳೆ ಎಂಬುದು ಏನು ಅನ್ನೋದೇ ಗೊತ್ತಾಗಲಿಲ್ಲ ಅವನಿಗೆ, ತನ್ನ ಗೆಳೆಯರಿಗೆಲ್ಲಾ ಹೇಳಿಕೊಂಡಿದ್ದ ಸಡನ್ನಾಗಿ ಅವಳು ಇನ್ನೂ ಇರಲು ಎಂದು ಕೇಳಿ ಬಿಕ್ಕಿ ಬಿಕ್ಕಿ ಅಳತೊಡಗಿದ, ಅವಳಿಗೆ ಕಾಲ್ ಮಾಡಿ ಉಗಿದ, ಬೇಡಿಕೊಂಡ, ಅವಳು ಜಗ್ಗಲಿಲ್ಲ.

****

ಇದಿಷ್ಟು ನಾನು ನಿಮಗೆ ಹೇಳಿರಲಿಲ್ಲ, ಹೇಳುವ ಅವಶ್ಯ ಇರಲಿಲ್ಲ ಅನಿಸಿತ್ತು ಬರೆಯುವಾಗ ಆದರೆ ಅವರಿಬ್ಬರ ನವಿರಾದ ಕತೆಯಲ್ಲಿ ಇವನಿಗೆ ಆಗಿರಬಹುದಾದ ಆಘಾತ ಹೇಳದಿದ್ದರೆ ಕತೆಗೆ ಪಾತ್ರಕ್ಕೆ ಯಾವ ಸೀಮೆ ನ್ಯಾಯ ಅನಿಸಿ ಹೇಳಿಬಿಟ್ಟೆ, ಕತೆ ಇಲ್ಲಿಗೆ ಮುಗಿಯಿತು.

**

ಕತೆ ಅಷ್ಟೇ ಮುಗಿದಿದೆ, ಪಾತ್ರಗಳು ಬದುಕಿವೆ..

‍ಲೇಖಕರು Admin

January 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: