ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಗವನುದರದಿ ಧರಿಸಿದವಳು..

ಸುಮಾ ಕಂಚೀಪಾಲ್

ಅವನದೊಂದು ಕುಡಿ
ಹೊಟ್ಟೆಯ ಹೊಕ್ಕು
ಇಂಚಿಂಚಾಗಿ ಹಿಗ್ಗುತ್ತಿತ್ತು.

ನಿಂತರೆ ನೆಲಕಾಣದಷ್ಟು
ಹಗಲು ರಾತ್ರಿಗಳು
ಕಳೆಯುತ್ತಿತ್ತು.

ಅವಳ ಗರ್ಭಗೋಳದಲ್ಲಿ
ಅಷ್ಟಷ್ಟೇ ಹೀರಿ

ಪಿಂಡವೊಂದು ರಕ್ತವಾಗಿ
ಕೈ, ಕಾಲು, ಹೃದಯ ಮೂಡಿ

ಜಗದ ಸೃಷ್ಟಿ
ಅವಳ ಮುಷ್ಟಿ
ನವಮಾಸ ಕಳೆದಿತ್ತು
ಹೆಣ್ಣು ಮಗುವೇ ಜನಿಸಿತ್ತು

ಅದೆಷ್ಟೋ ಗರ್ಭಚೀಲದೊಳಗೆ
ಹೊಸ ಹೊಸ ಬೀಜ ಬಿತ್ತಿ

ಜಗವೇ ಸೃಷ್ಟಿಯಾಯ್ತು
ಅವಳೊಳಗೇ ಸೃಷ್ಟಿ ಇತ್ತು

‍ಲೇಖಕರು Avadhi

3 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading