ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಗದ ಕೆನ್ನೆ ಬಣ್ಣ ಬಣ್ಣ…!

ರಾಜಕುಮಾರ ಮಡಿವಾಳರ 

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ವಯಸ್ಸಾದ ಭಟ್ಟರೇ ತೀರ ಈ ನಮೋನಿ ಕೆಟ್ಟರೆ
ಹರೆಯದ ಹುಡುಗರು ನಾವು ಕಾಮನ ಸುಡಲು
ತರೋದೆಲ್ಲಿಂದ ಮೂರನೇ ಕಣ್ಣು..?

ಸುಡು ಬೇಸಿಗೆ ಇದು ಗಾಳಿ ಕುಲುಮೆ
ತಿದಿಯಿಂದೆದ್ದ ಬೆಂಕಿಯ ಹಾಗಿದೆ
ಬೆವೆತ ಮೈಯೊಳಗೆ ಒಲಮೆ ಮೆಳ್ಳಗಣ್ಣಲಿ ನೋಡಿದೆ
ಬೆವರ ಕೂಡಿ ಬೆವರು ಜೀವ ಜಿನುಗಲನುವಾಗುತಿದೆ!

ಸುಟ್ಟು ಬಿಡಲಿ ಕಾಮ
ತಬ್ಬಿ ಹಚ್ಚು ಕಿಡಿ ತುಟಿಗೆ ಚಾಚಿ ಕೆನ್ನಾಲಿಗೆ!
ನೋಡಿ ಈ ಮದನ ಮಿಥುನ
ಜಗವೇ ನಾಚಿ ಜಗದ ಕೆನ್ನೆ ಬಣ್ಣ ಬಣ್ಣ…!

ಸುಮಾರು 250 ವರ್ಷ ಇತಿಹಾಸದ ನಮ್ಮ ಭೂಸಪ್ಪ ಚೌಕ ರತಿಕಾಮ

‍ಲೇಖಕರು avadhi

21 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading