ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಗದೊಡತಿ ಹೇ ಮಾತೆ…

ವಿನತೆ ಶರ್ಮಾ

ಬಂಧಿತ ಒಳಗಿನುಸಿರ ತಲ್ಲಣದ ನಿರ್ವಾತ
ಅಂಟಿರುವ ಖಾಲಿ ಗೋಡೆಗಂಜಿ ಗಡಿಯಾರ
ಬೇಡುವ ನಿರ್ಭೀತಿ, ಸಮಯದ ಚಲನದ
ಸ್ವತಂತ್ರ, ಅತಂತ್ರ ನಿರ್ಧಾರ ಕಿಟಕಿ ಸರಳಿನ
ಗೆರೆಗಳು ಬರೆವ ಪಥ ವಿದೃಶ.

ಹೊಸ ಗಾಳಿಯ ಯುಗಾದಿ ಗರಿಮೆ
ರಾತ್ರಿ ಮಿಣುಕು ಹುಳು ಕಾಲದ ಅಣುಕು
ಕತ್ತಲೆಯೇ ಅದರ ಬೆಳಕು ಬೇಕಿಲ್ಲದಕೆ
ನಮ್ಮ ನಿರ್ಧರಿತ ಸಾವು ಸೂಚಿಸುವ ಸಮಯ
ಬಂಧನವ ಬಿಸಾಡಿದ ಗೆರೆಯಿಲ್ಲದ ವಿದೃಶ ಪಥ.

ಮನಸ್ಸುಗಳ ಪಥಸಂಚಲನ ಮನುಜ ಗಣಕ
ಕೀಲಿಕೊಟ್ಟ ಮುಳ್ಳು ಜೀವಸ್ವರವಾದೀತೇ
ಸರಳುಗಳಾಚೀಚಿನ ಒಳಹೊರಗಿನ ಮರೆಮಾಚಿನ
ಪ್ರಪಂಚಗಳ ದೊಡ್ಡ ಕೈ, ಚಿಕ್ಕ ಕೈ ಬಿಚ್ಚಿಕೊಳ್ಳುವುದೇ
ಗೋಡೆ ಮೇಲಿನ ಗಡಿಯಾರ ಹೇಳುವ ವಿದೃಶ ಕಥೆ.

ಕಪ್ಪು ಬಿಳುಪು, ರಾತ್ರಿ ಹಗಲು ಪಾತ್ರಗಳು
ನಿಡುಸುಯ್ದು ಕ್ಯಾಕರಿಸಿದರೂ ಬತ್ತಲೊಲ್ಲದ ದೀಪ
ಜಗ್ಗಿದರೂ ತಲೆ ತಿರುಗುವುದು ಗಡಿಯಾರದೆಡೆಗೆ
ಪಥಸಂಚಲನದ ವಿದೃಶ ಸೈನಿಕನಲ್ಲವಾದರೂ
ಧೈರ್ಯ-ಅಧೈರ್ಯಗಳ ಕಂದಕವ ದಾಟುವುದಿದೆ.

ಸರಳುಗಳು ಬೀಳಲಿವೆ, ಗೆರೆಗಳ ಅಳಿಸುವುದಿದೆ
ಗೋಡೆ ಮೇಲಿನ ಗಡಿಯಾರವಾಗದೆ
ಕಾಲವೇ ನಾನಾಗಬೇಕಿದೆ
ಜಗದೊಡತಿ ಹೇ ಮಾತೆ
ಕೈಹಿಡಿದು ನಡೆಸೆನ್ನವರ.

‍ಲೇಖಕರು

18 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading