ನಾಳೆಯಿಂದ ಮೂರು ದಿನ ಮಡಿಕೇರಿಯಲ್ಲಿ ಸಾಹಿತ್ಯ ಪರಿಷತ್ತು ಸಮ್ಮೇಳನ.
ಹೇಳಿ ಕೇಳಿ ಮಡಿಕೇರಿ ಮಂಜಿನ ಊರು, ಜೊತೆಗೆ ಈಗ ಜನವರಿ, ಛಳಿಗೀಗ ಏರು ಯೌವ್ವನ!
ಸಮ್ಮೇಳನಕ್ಕೆ ಕನ್ನಡ ಪ್ರೀತಿಯ ಜೊತೆ ಸ್ವೆಟರ್, ಶಾಲು, ಬೆಚ್ಚನೆ ಬಟ್ಟೆ ತೆಗೆದುಕೊಂಡು ಹೋಗಿ.
ಜೊತೆಗೆ ನಿಮ್ಮಲ್ಲಿ ಬೆಚ್ಚನೆ ನೆನಪುಗಳಿದ್ದರೆ ಅದು ಬೋನಸ್!
ಮಡಿಕೇರಿ ಬೆಂಗಳೂರಿನಿಂದ ೨೫೨ ಕಿಮೀ ದೂರದಲ್ಲಿದೆ. ಮೈಸೂರಿನಿಂದ ೧೨೦ ಕಿಮೀ, ಮಂಗಳೂರಿನಿಂದ ೧೩೬ ಕಿಮೀ ದೂರ.
ಹಾಲೇರಿ ವಂಶಸ್ಥ ಮುದ್ದುರಾಜ ದೊರೆಯ ನೆನಪಿನಲ್ಲಿ ಮುದ್ದುರಾಜ ಕೇರಿ ಎಂದು ಕರೆಸಿಕೊಳ್ಳುತ್ತಿದ್ದ ಊರು ಇಂದು ಮಡಿಕೇರಿಯಾಗಿದೆ.
ಘಟ್ಟದ ನಡುವಿನ ಈ ಪ್ರಶಾಂತ ಊರಿನಲ್ಲೀಗ ಹಬ್ಬದ ಕಲರವ. ಮೂರು ದಿನಗಳ ನುಡಿಹಬ್ಬದ ಜೊತೆ ಜೊತೆಯಲ್ಲಿ ಇಲ್ಲಿ ನೋಡಬೇಕಾದ ಸ್ಥಳಗಳೆಂದರೆ ಓಂಕಾರೇಶ್ವರ ದೇವಸ್ಥಾನ, ರಾಜಾ ಸೀಟ್ ಮತ್ತು ಮಡಿಕೇರಿ ಕೋಟೆ.



– ಮಡಿಕೇರಿಯ ಸ್ಥೂಲ ಪರಿಚಯ ಆಗಮಿಸಲಿರುವ ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಲಿದೆ.