ಛಂದ ಪುಸ್ತಕ ಸ್ಪರ್ಧೆಗೆ ಆಹ್ವಾನ
ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2010ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.
–
ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು ಕಳುಹಿಸಬೇಕು. ಹಸ್ತಪ್ರತಿ ಹಿಂತಿರುಗಿಸಲಾಗುವದಿಲ್ಲ.
–
ಆಯ್ಕೆಯಾದ ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಈ ಪುಸ್ತಕವನ್ನು 2010ರ ನವೆಂಬರ್ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯವ ಸುಂದರ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.
–
ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ. ಕತೆಗಳನ್ನು ಕಳಿಸಬೇಕಾದ
–
ವಿಳಾಸ:
ಛಂದ ಪುಸ್ತಕ, c/o ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76 (ದೂ. 98444 22782)
ಕೊನೆಯ ದಿನಾಂಕ: ಜುಲೈ 10, 2010
ವಿವರಗಳಿಗೆ: vas123u@rocketmail.com
]]>
ನಿಮಗೆ ಇವೂ ಇಷ್ಟವಾಗಬಹುದು…






ಮಾನ್ಯರೆ,
ನೀವು ಕೊಟ್ಟ ಇ ಮೇಲ್ ವಿಳಾಸಕ್ಕೆ ಸ್ಪಷ್ಟನೆ ಕೋರಿ ಕಳಿಸಿದ ಇಮೇಲ್ ವಾಪಸ್ಸು ಬಂತು. ಇಮೇಲ್ ಮೂಲಕವೂ ಕತೆಗಳನ್ನು ಕಳಿಸಬಹುದೆ? ಹೌದಾದರೆ ಜಿಮೇಲ್ಅಥವಾ ತಲುಪಬಹುದಾದ ವಿಳಾಸ ಕೊಡಿ
ವಿ.ಎನ.ಎಲ್
mayflowermh@gmail.com