ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೇತನ್ ಎಸ್ ಪೊನ್ನಾಚಿ ಹೊಸ ಕವಿತೆ- ಕಪ್ಪು ಸುಂದರಿ…

ಚೇತನ್ ಎಸ್ ಪೊನ್ನಾಚಿ

ಅವಳೊಟ್ಟಿಗಿನ ದಿನವು ಬೆದೆಯೊಡೆದು ಎದೆಯೊಳಗೆ;
ದಿನ ಬಿಟ್ಟು ದಿನವು ಚಿಗುರುತ್ತಿಹುದು.
ಕಾರ್ತಿಕದ ಕತ್ತಲಲಿ ಕಾಳಮ್ಮನ ಗುಡಿ ಮುಂದೆ
ಅವಳಚ್ಚಿಟ್ಟ ದೀಪ ಇನ್ನು ಬೆಳಗುತ್ತಿಹುದು.

ಗದ್ದಿಗೆ ಕೊಂಡಿಯ ಉದ್ದಿಗೆ ಮಣೆ ಮೇಲೆ
ನಿಂತವಳ ಹೆಸರನ್ನು ನೂರು ಬಾರಿ.
ಕೂಗಿ ಕರೆವಾಗ ಬಿಸಿಲು ಮಳೆ ಬಂದು
ಮದುವೆ ದಿಟವಾಯ್ತೆಂದು ಕುಣಿದಾಡಿ.

ಸೊಂಪಾಗಿ ಮಳೆ ಊಯ್ದು ಗುಂಪು ರಾಗಿ ಪೈರು;
ಕೆರೆ ಕಟ್ಟೆ ಹೊಳೆ ತುಂಬಿ ಹಸಿರುಕ್ಕಿದೆ.
ಯುಗಾದಿ ಹೊತ್ತಿಗೆ ಗೊತ್ತಾದ ಮದುವೆಯ ಸುದ್ದಿ, ಆಕಾಶದೆತ್ತರಕ್ಕೆ ಏಣಿ ಹಾಕಿದೆ.

ಚಿಗುರೊಡೆಯದ ಮಾವು ದಿನವೊಂದು ಯುಗ ಉರುಳಿ!
ಗಟ್ಟೆ ಹೊಡೆದಂತಾಯ್ತು ಕೋಗಿಲೆಯ ಧ್ವನಿ ಕೇಳಿ.
ಕದ್ದು ನೋಡುವ ಕಡು ಕಷ್ಟ ಜಿದ್ದು ಸಾಧಿಸುತ್ತಿದೆ, ಅಕ್ಕಲು ಮೇಯ್ದ ಹೊಲದಲ್ಲಿ ಸುಂಟರಗಾಳಿ ಸುಳಿದಂತೆ.

ಕಡೆಬೋಳಿ ಬೆಟ್ಟ ಕೆಳಗರಿದು ಬೀಳುವಂತೆ; ಮೂಡುಗಾಳಿ ಮೈಕೊಡವಿ ಬೀಸುತ್ತಿದೆ.
ಇನ್ನೂ ಕಾಯುತ್ತಿದ್ದೇನೆ ಕಪ್ಪು ಸುಂದರಿ ಕದ್ದೊಯ್ದ ನವ ಸಂವತ್ಸರವನ್ನು.

‍ಲೇಖಕರು Avadhi

4 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading