ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?

ಸುಧನ್ವಾ  ದೇರಾಜೆ ತಮ್ಮ ಸಿಟಿಯೆಡೆಗಿನ ಕಾವ್ಯ ನೋಟವನ್ನು ಮುಂದುವರೆಸಿದ್ದಾರೆ. ಕಾನನದ ನಡುವಿನಿಂದ ಎದ್ದು ಬಂದ ಹುಡುಗನೊಬ್ಬ ಬೆಂಗಳೂರು ಎಂಬ ನಗರಿಯನ್ನು ಕಂಡ ಬಗೆ ಇಲ್ಲಿದೆ. ಎಕ್ಸ್ಕ್ಯೂಸ್ ಮಿ .. ಇದು ಸಖೀ ಗೀತ ಅಲ್ಲ ಸಿಟಿ ಗೀತ..peteyapadhana-new.jpg

 3

ಗಲಗಲ ಅಲುಗುತ್ತಿದೆ ಈ ನಗರ
ಬೆಳೆದು ಅಗಲಗಲ ಜಗದಗಲ.
ಇವತ್ತು ಬರ್ಲಾ, ನಾಳೆ ಆಗಲ್ಲ
ಪೈನ್‌ಕಿಲ್ಲರ್ ಮಾತ್ರೆ ತರ್ಲಾ, ಸಂಬಳ ಸಾಕಾಗಲ್ಲ
ಆ ಓನರ್ ಸರಿಯಿಲ್ಲ, ನೆಟ್ ಕನೆಕ್ಟ್ ಆ..ಗ್ತಿ..ಲ್ಲಾ..

ಅಮ್ಮ ಫೋನ್ ಮಾಡಿ ಅಂದಳು,
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?

4
ಮೊನ್ನೆ ಬಂದವಳು ಅಂದಳು-
ಹೌದು, ಗದಗುಡುತ್ತಿದೆ ಶಹರ
ನಗ ತುಂಬಿದ ನಗರ
ತುಯ್ಯುತಿರುವ ಸಾಗರ.

ಈ ನಗರಿಗೆ ಹತ್ತಾರು ಕಂಪನಾಂಕ
ಅಂಕ, ಬಿಂಕ, ಎಲ್ಲದಕ್ಕೂ ಸುಂಕ
ಇಲ್ಯಾಕೆ ಊದ್ತೀಯೋ ಶಂಖ?

ನಾನಂದೆ-
ಇದೋ ಮೂಗು ಹಿಡಿದೆ ಅಮ್ಮಾ, ಕಣ್ಮುಚ್ಚು
ಈ ನಗರವ ಕೊಂಚ ಕಲಕಿಸಿದೆ
ಕುಡಿದುಬಿಡು.

‍ಲೇಖಕರು avadhi

12 February, 2008

1 Comment

  1. navada

    ಸುಧನ್ವ,
    ನಿನ್ನ ಸಿಟಿ ಗೀತ ಚೆನ್ನಾಗಿದೆ. ಹೀಗೇ ಬರೀತಾ ಇರು. ನಾವು ಸೀಟಿ ಹಾಕಿ ಸ್ವಾಗತಿಸುತ್ತೇವೆ.
    ನಾವಡ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading