ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೆಗೆವಾರನ ಅಪ್ಪ ಗುಟ್ಟು ಬಿಟ್ಟುಕೊಟ್ಟಿದ್ದಾರೆ..

ಕ್ಯೂಬಾ ಹುಮ್ಮಸ್ಸು ಜೀವಂತವಾಗಿಡಲು ಫೇಸ್ ಬುಕ್ ಪೇಜ್ ಆರಂಭಿಸಲಾಗಿದೆ.  C for Cuba ಅಂತ ಇಲ್ಲಿ ಕ್ಲಿಕ್ಕಿಸಿ 

ಅದರಿಂದ ಆಯ್ದ ಒಂದು ಬರಹ ನಿಮಗಾಗಿ ಅದರ ರುಚಿ ಹತ್ತಿಸಲು 

cuba map

ಈತ ಚೆಗೆವಾರ . ಈತನೂ ಚೆಗೆವಾರ..
————————————————–
che guevara vr carpenter

ಕವಿ ಕಲಾವಿದ ‘ನವಿಲು’ ಪ್ರಕಾಶನದ ಮುಂದಾಳು ವಿ ಆರ್ ಕಾರ್ಪೆಂಟರ್ ಅವರ ಮಗ ಈತ. ಹೆಸರು ಚೆಗೆವಾರ
ಯುಗಾದಿ ಹಬ್ಬದ ದಿನ ಹುಟ್ಟಿದ ಈತ ಈಗ ಮೂರನೇ ತರಗತಿಯಲ್ಲಿ ಮೊದಲ ಸ್ಥಾನ ಗಳಿಸಿ ನಾಲ್ಕನೇ ಕ್ಲಾಸ್ ಗೆ ಜಿಗಿದಿದ್ದಾನೆ

ಈತನಿಗೆ ಚೆ ಗೆವಾರ ಎನ್ನುವ ಹೆಸರು ಏಕೆ ಇಟ್ಟರು ಎಂದು ಕಾರ್ಪೆಂಟರ್ ಅವರನ್ನೇ ಕೇಳಿ ಮತ್ತೆ ನಿಮ್ಮ ಬಳಿ ಬರುತ್ತೇವೆ.

ಅಲ್ಲಿಯವರೆಗೆ Gracias
ಅಂದ್ರೆ ಥ್ಯಾಂಕ್ಸ್ ಅಂತ

 

ಚೆಗೆವಾರನ ಅಪ್ಪ ಗುಟ್ಟು ಬಿಟ್ಟುಕೊಟ್ಟಿದ್ದಾರೆ..
—————————————————-

carpenter with son cheguevara

ಅವನು ಹುಟ್ಟಿದ ತಕ್ಷಣ ನನಗೆ ನೆನಪಾದದ್ದೇ ಚೆಗೆವಾರನ ಹೆಸರು!
ಯಾಕೆಂದರೆ, ತನ್ನದಲ್ಲದ ದೇಶಕ್ಕಾಗಿ ಹೋರಾಡಿ ಪ್ರಾಣ ತೆತ್ತ ಅವನ ತ್ಯಾಗ-ಬಲಿದಾನದ ಮುಂದೆ, ಅದೆಷ್ಟೋ ಹುಸಿ ಹುತಾತ್ಮರು ಸಪ್ಪೆಯೆನಿಸಿದ್ದರು.
ಅದಕ್ಕಾಗೇ ಗಯ್ಯಾಳಿಯಾದ ಇಂದಿರಾ ಗಾಂಧಿ ಹೆಸರನ್ನೇ ಮಗಳಿಗೆ ಇಟ್ಟಿದ್ದೆ.

ಚೆಗುವಾರ ಎಂಬುದು ಚೆಗುವೀರ ಆಗಿಯೂ ನಮ್ಮ ಮಣ್ಣನ್ನು ಸ್ಪರ್ಷಿಸುತ್ತದೆ. ಅವನ ತಾಯಿಯಿಂತೆ ಸ್ವಲ್ಪ ಕಪ್ಪಗಿದ್ದ, ಮಗಳು ಬೆಳ್ಳಗೆ ಹುಟ್ಟಿದ್ದರಿಂದ ಇಬ್ಬರಿಗೂ ಬ್ಯಾಲೆನ್ಸ್ ಮಾಡಿದ ನೆಮ್ಮದಿ!

ಇವನು ಸಣ್ಣವನಿದ್ದಾಗ ಒಬ್ಬ ಅಜ್ಜ (ಭಿಕ್ಷುಕ) ಬಂದರು. ನನ್ನನ್ನು ಸಹಾಯ ಕೇಳಿದರು, ಯಾವುದೋ ಯೋಚನೆಯಲ್ಲಿದ್ದ ನಾನು ‘ಕಾಸಿಲ್ಲ ಹೋಗ್ ತಾತ’ ಎಂದು ಗದರಿ ಕಳಿಸಿದೆ. ಆದರೆ, ನನ್ನ ಮಗ ಆ ಅಜ್ಜನಿಗೆ ‘ತಾತ, ನನ್ನಪ್ಪನ ಹತ್ರ ಕಾಸೈತೆ, ಜೋರಾಗ್ ಕೇಳು, ರೋಪಾಕು, ಕೊಡ್ತದೆ!’ ಎಂದ.

ಅವನ ಮಾತು ನನ್ನಲ್ಲಿ ಅವನ ಬಗ್ಗೆ ಹೊಸ ಅಭಿಮಾನ ಮೂಡಿಸಿತು. ಆ ಅಜ್ಜ ದಿನವೂ ನಮ್ಮ ಮನೆಗೆ ಬರುತ್ತಿದ್ದರು. ಬರುವಾಗ ಏನಾದರೂ ತಿಂಡಿಯನ್ನು ತಂದು ನನ್ನ ಮಗನಿಗೆ ಕೊಟ್ಟೇ ಹೋಗುತ್ತಿದ್ದರು.
—–
ಥ್ಯಾಂಕ್ಸ್ ಕಾರ್ಪೆಂಟರ್
fantástico
ಅಂದ್ರೆ fantastic ಅಂತ

‍ಲೇಖಕರು admin

21 April, 2016

2 Comments

  1. ಗುಡ್ಡ

    ಗೆಳೆಯರೆ,
    ಕ್ಯೂಬಾದಿಂದ ನಾವು ಕಲಿಯೋದು ಬಹಳಿಷ್ಟಿದೆ, ಆದರೆ ಅದರಲ್ಲಿ ‘ಸ್ಪಾನಿಷ್ ಭಾಷೆ’ ಅಂತೂ ಖಂಡಿತವಾಗಿಯೂ ಇಲ್ಲ.

    • Avadhi

      ನಮಗೂ ಕುತೂಹಲ . ಯಾಕೆ ಎಂದು ಕೇಳಬಹುದೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading