ಇಲ್ಲಿದೆ ‘ಅಲೆಮಾರಿ’ ಯ ಹೊಸ ಪ್ರಯೋಗ. ಭೇಟಿ ಕೊಡಿ- ಒಳಗೂ..ಹೊರಗೂ

ಈ ಪದ್ಯ ಹೀಗಿದೆ..
ಚಿತ್ರವಿಲ್ಲ, ಬಣ್ಣವಿಲ್ಲ,
ಕುಂಚದ ಸದ್ದಿಲ್ಲ; ಚೌಕಟ್ಟಿದೆ.
ಮಾತಿದೆ, ಮೌನವಿದೆ,
ಕೇಕೆ, ಕಿಲಕಿಲಗಳಿವೆ,ಚೌಕಟ್ಟಿದೆ.
ಬೇಕುಗಳಿವೆ, ಬೇಡಗಳಿವೆ,
ವೈರುಧ್ಯಗಳ ಸುತ್ತಲೂ ಚೌಕಟ್ಟಿದೆ.
ತಟ್ಟಿದ ಗೂಡು, ಅನಾಥ ಮಾಡು,
ಅವುಗಳ ಜತೆ ಚೌಕಟ್ಟಿದೆ.
ಜಗದ ಚಿತ್ರಗಳು ಹಲವು,
ಬರದವರದ್ದೇ ಒಲವು,
ಅವುಗಳಿಗೆಲ್ಲಾ ಚೌಕಟ್ಟಿದೆ.
ಸಂಗೀತ ನಾದ, ಬಣ್ಣಗಳ ಸ್ವಾದ,
ಅರಿತು , ಕಲೆತರೆ
ಅಲ್ಲೊಂದು ಅರ್ಥದ ಚೌಕಟ್ಟಿದೆ.
ಅಕ್ಷರವಿದೆ, ಬೆವರು ಬಸಿದು,
ಮಸಿ ಬರೆದ ಸಾಲುಗಳಿಗೂ ಚೌಕಟ್ಟಿದೆ.
ನಮ್ಮ ಪ್ರೀತಿಯ ಕೂಸಿಗೆ,
ಚೌಕಟ್ಟಿದೆ.
ಬದುಕು ಬಣ್ಣಿಸುವ ಕಣ್ಣಿಗೆ ಚೌಕಟ್ಟಿದೆ.
ಅವಳ ಕೈ ಹಿಡಿದು ಹೆಜ್ಜೆ ಹಾಕಿದ ಊರಿಗೆ,
ಇಲ್ಲೆಲ್ಲೋ ಬಿತ್ತಿ ಮೊಳೆಯುವ
ಆಸೆ ಹೊತ್ತ ಈ ಕ್ಷಣಕ್ಕೆ ಚೌಕಟ್ಟಿದೆ.
ಇದೆ.. ಇದೆ ಚೌಕಟ್ಟಿದೆ.
ತಡಕಾಡಿ, ತರ್ಕದ ಜತೆ ಗುದ್ದಾಡಿ,
ಪಡೆದ ನಾಲ್ಕು ಗಳಿಗೆ ಉತ್ತರಕ್ಕೆ
ಇಲ್ಲೆಲ್ಲ ಕಾಣುವ ಜಗದ ತುಂಬಾ
ಕಾಣದ ಚೌಕಟ್ಟಿದೆ.
ಮೊದಲಿನದನ್ನು ಪದ್ಯ ಅಂತಾ ಹೇಳಿದರೆ ಯಾರು ಯಾರು ಎಷ್ಟೆಷ್ಟೋ ಕೋಪ ಮಾಡಿಕೊಳ್ಳುತ್ತಾರೋ? ಆದರೂ ಹೇಳುತ್ತೇನೆ, ಇದು ಪದ್ಯ. ಮಾಮೂಲಿ ರೀತಿಯಲ್ಲಿ ಬರೆದರೇ ಪದ್ಯ ಓದುವುದು ಕಷ್ಟ. ಹೀಗೆಲ್ಲಾ ಬರೆದರೆ ಓದುವವರು ಯಾರು ಅಂತೀರೇನೋ. ಆದರೂ ಬರೆದಿದ್ದೇನೆ. ಇದೊಂದು ಪ್ರಯೋಗ.
ಏಳೆಂಟು ವರ್ಷಗಳ ಹಿಂದೆ ಲಂಕೇಶ್ ರೂಪಕ ಕವಿಗಳು ಅಂಕಣದಲ್ಲಿ ಈ ರೀತಿಯ ಪದ್ಯಗಳ ಬಗ್ಗೆ ಬರೆದಿದ್ದರು. ಮೊನ್ನೆ ದಿಢೀರನೆ ನೆನಪಾಗಿ, ಮೈಮೇಲೆ ಬಂದಂತೆ ಈ ‘ಚೌಕಟ್ಟಿನ ಪದ್ಯ’ ಬರೆದು ಬಿಟ್ಟೆ.
ಈ ರೀತಿಯ ಕಾವ್ಯವನ್ನು ಕಾಂಕ್ರೀಟ್ ಪೊಯೆಟ್ರಿ ಅಂತಾರೆ. ಕಾವ್ಯದಲ್ಲಿರುವ ವಸ್ತುವಿನ ರೂಪದಲ್ಲೇ ಪದ್ಯವನ್ನು ಬರೆಯುವುದೇ ಈ ಕಾವ್ಯ ಪ್ರಕಾರದ ವಿಶೇಷ. ಮರ, ಗರಿ,ಬೆಕ್ಕು, ಅಲೆ, ಹಾರುವ ಪಾರಿವಾಳ ಬಗ್ಗೆ ಬರೆದ ಪದ್ಯಗಳೆಲ್ಲಾ ಅದೇ ಆಕಾರದಲ್ಲಿ ಬಂದಿವೆ. ಉದಾಹರಣೆಗೆ ಕೆಳಗಿನ ಚಿತ್ರಕವಿತೆಗಳನ್ನು ನೋಡಿ..
20ನೇ ಶತಮಾನದಲ್ಲಿ ಈ ಕಾಂಕ್ರೀಟ್ ಪೊಯೆಟ್ರಿ (ಶೇಪ್ ಪೊಯೆಟ್ರಿ ಎಂಬ ಹೆಸರೂ ಇದೆ) ಕೆಲ ರಾಷ್ಟ್ರಗಳಲ್ಲಿ ತುಂಬಾ ಜನಪ್ರಿಯವಾಗಿತ್ತಂತೆ.ಬ್ರೆಜಿಲ್, ಜರ್ಮನಿ ಮುಂತಾದವು. ಕಾಂಕ್ರೀಟ್ ಪೊಯೆಟ್ರಿಯಲ್ಲೂ ಮೂರು ವಿಧಗಳನ್ನು ವಿಮರ್ಶಕರು ಗುರುತಿಸುತ್ತಾರೆ. ವಿಶ್ಯುಯಲ್, ಫೊನಟಿಕ್ ಮತ್ತು ಕೈನಟಿಕ್.
ಈ ಮೂರು ವಿಧಗಳನ್ನು ಸರಳವಾಗಿ ನೋಡುವುದಾದರೆ ಒಂದು ರಚನಾತ್ಮಕವಾದದ್ದು. ಇದರಲ್ಲಿ ಕವಿ ಪದ್ಯದಲ್ಲಿ ವಿವಿಧ ವಸ್ತುಗಳನ್ನು (ಕೋಲಾಜ್ ರೀತಿಯಲ್ಲಿ) ಬಳಸುತ್ತಾರೆ, ಪದಗಳು ಇರುತ್ತವೆ. ಮತ್ತೊಂದು ಅಭಿವ್ಯಕ್ತಿಯದ್ದು. ಇಲ್ಲಿ ತನ್ನ ಕವಿತೆಯ ಸಾಲುಗಳನ್ನೇ ಒಂದು ಪದ್ಯದ ಥೀಮ್ಗೆ ತಕ್ಕ ಆಕಾರದಲ್ಲಿ ಬರೆಯುತ್ತಾನೆ (ಶೇಪ್ ಪೊಯೆಟ್ರಿ ಅಂದ್ನಲ್ಲ ಇದಕ್ಕೆ..).
ಮಹಾಯುದ್ಧ ಕಾಲದಲ್ಲಿ ಪರಿಚಯಿಸಲಾದ ಈ ಪ್ರಕಾರ ಕಾವ್ಯಕ್ಕೆ ಹೊಸ ಆಯಾಮ ಕೊಟ್ಟಿತು. ಈ ಕಾವ್ಯ ಪ್ರಕಾರಕ್ಕೆ ಕಾಂಕ್ರೀಟ್ ಎಂಬ ಹೆಸರು ಕೊಟ್ಟವರು ಯುರೋಪಿಯನ್ ಕಲಾವಿದರಾದ ಮ್ಯಾಕ್ಸ್ ಬಿಲ್ ಮತ್ತು ಒವಿಂಗ್ ಫಾಲ್ಸ್ಸ್ಟ್ರಾಮ್ (೧೯೫೦ರಲ್ಲಿ).
ಆದರೆ ಬ್ರೆಜಿಲ್ ಕವಿಗಳು ಈ ಕಾವ್ಯ ಪ್ರಕಾರವನ್ನು ತುಂಬಾ ಹಿಂದೆಯೇ ವಿವರಿಸಿದ್ದರು ಎಂದು ಕೆಲ ಮೂಲಗಳು ಹೇಳುತ್ತವೆ.(ಹಾಂ ಇದೊಂದು ರೀತಿಯ ಎಕ್ಸ್ ಟ್ರೀಮ ಅನ್ನಿಸುವ ಈ ಕಾವ್ಯ ಪ್ರಕಾರಕ್ಕೆ ಸರ್ರಿಯಲಿಸ್ಟ್ ಗಳು ಕಾರಣವಂತೆ. ಅಂದ್ರೆ ಅತಿವಾಸ್ತವವಾದ ಕಲಾವಿದರು. ಡಾಲಿ ನೆನಪಾದರೆ ಎಲ್ಲ ನಿಮಗೆ ಎಲ್ಲ ಹೊಳೆಯುತ್ತದೆ!)
ಅದಿರಲಿ, ಮ್ಯಾಕ್ಸ್ , ಕಾಂಕ್ರೀಟ್ ಪೊಯೆಟ್ರಿ ಎಂಬ ನಾಮಕರಣ ಮಾಡಿದ ಒಂದೇ ದಶಕದಲ್ಲಿ ಈ ಕಾವ್ಯ ಜನಪ್ರಿಯವಾಗ ತೊಡಗಿತು.ಪ್ರಖ್ಯಾತ ಕವಿಗಳಾದ ಅಮೆರಿಕದ ಜಾನ್ ಹಾಲ್ಯಾಂಡರ್, ಎಜ್ರಪೌಂಡ್, ಇ.ಇ. ಕಮ್ಮಿಂಗ್ಸ್, ಆಗಸ್ಟ್ ಡಿ ಕಂಪೋಸ್, ಡೆಸಿಯೋ, ಜೇಮ್ಸ್ ಜಾಯ್ಸ್ ಇಂಥ ಪದ್ಯಗಳನ್ನು ಬರೆದಿದ್ದಾರೆ.
ಪದ್ಯಗಳನ್ನು ಓದಿ.. ಹೇಗಿದೆ ಅಂತ್ ಹೇಳಿ..



ಚಿತ್ರವಿಲ್ಲ, ಬಣ್ಣವಿಲ್ಲ, ಕುಂಚದ ಸದ್ದಿಲ್ಲ
ನಿಮಗೆ ಇವೂ ಇಷ್ಟವಾಗಬಹುದು…





are wah!
idolle chennagide.
geleya Aruna Jolada kUdlige heege ‘shape letter’gaLannu bareetidda. avana bhasheyE kAvyamayavaagiddarinda, idanna nOdi adu nenapAytu.