ಗಾಂಧಿಬಜಾರು
– ಸುಖೇಶ್
ಅಸ೦ಗತ
ಮೊನ್ನೆ ಹೀಗೆ
ಗಾಂಧಿಬಜಾರಿನ ನಕ್ಷತ್ರಲೋಕದಲ್ಲಿ
ಪೋಲಿಸಿನವ ರಶೀದಿ ಹರಿವಾಗ
ನಾ ಅಲ್ಲೇ ಇದ್ದೆ
ತಣ್ಣನೆಯದೊಂದು ಮಳೆಗೆ ಕಾದಂತೆ
ಕಾಲೇಜು ಮೇಲ್ಸೇತುವೆಗಳ ಕೆಳಗೆಲ್ಲ
ಸಿಕ್ಕಾಪಟ್ಟೆ ಗಜಿಬಿಜಿ
ಖಾಸಗೀ ರಸ್ತೆಗಳೆಲ್ಲ
ಬೀದಿಪಾಲು ಮತ್ತು ಕಾದುನಿಂತ
ಟ್ರಕ್ಕುಗಳ ಕಣ್ಣಂಚಲ್ಲಿ ಎರಡೇ ಹನಿ ನೀರು
ಹನಿ ಹನಿ ಘನಿಸಿ ಒನ್ ವೇಯಲ್ಲಿ
ನುಗ್ಗಿದ ಮೋಡಗಳೆಲ್ಲ
ನಿನ್ನ ಕಂಗಳ ಮೋಹವಾಗಿ
ನಮ್ ಏರಿಯಾದಲ್ಲಿ ಮಳೆಯಿಲ್ಲ
ಗುಲ್ ಮೊಹರುಗಳಡಿ
ಬಣ್ಣಬಣ್ಣದ ಬರಗಾಲ
ಹಳೆಯದೊಂದು ಪಯಣ
ಹಳೆ ಸ್ಕೂಲು ಹತ್ತಿರ
ರೋಲ್ ನಂಬರ್ ಮರಗಳು
ಹಾಜರಿ ಹೇಳುವಾಗ
ಗಕ್ಕಂತ ಎಚ್ಚರ
ಕಪ್ಪು ಕಪ್ಪು ಆಗಸದ ಮೇಲೆಲ್ಲೋ
ಪ್ರೀತಿಯ ಮರಿಬೆಕ್ಕು
ಮಿಯಾಂವ್ ಮಿಯಾಂವ್ ಸದ್ದು
ಚಿಕ್ಕಿಗಳೇ ಕಾಯಬೇಡಿ ಚಂದ್ರಮನ
ನಾ ಇಲ್ಲೇ ಕೂಲ್ ಕಾರ್ನರಲ್ಲಿ
ಒಂದಿಡೀ ಚಹಾ ಕುಡಿಯುತ್ತೇನೆ
ಉದ್ದನೆಯ ಕಪ್ಪು ರಸ್ತೆ
ಹಟಾತ್ತನೆ ಏಕಾಂಗಿಯಾಗಿಬಿಟ್ಟಿದೆ
]]>




nice……….