ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಹಾ ಪ್ರಿಯರಿಗೆ..

ಗುಟುಕು

ಬೆಳ್ಳಾನ ಬೆಳಿಗ್ಗೆ ಎದ್ದು
ಗ್ಯಾಸ್ ಮೇಲೆ ಚಹಾ
ಮಾಡಲು ಇಟ್ಟು
ನಿಜ ಬೆಳಗಾದಂತೆ

ಸುಡು ಸುಡುವ ಚಹವ
ಸ್ಟೀಲ್ ಗ್ಲಾಸಲ್ಲಿ ಸೋಸಿ
ಹೀರುತ್ತಿದ್ದರೆ ಅದೆಂಥ
ಸ್ವರ್ಗದ ಪಾನೀಯವೋ!!

ಎರಡು, ಮೂರು, ನಾಲ್ಕು
ಅದೆಷ್ಟು ಸಲ ಕುಡಿದರೂ
ಬೇಸರಿಸದ, ಹಬೆ
ಗಾಳಿಯಲ್ಲಿ ಲೀನವಾಗುವದ ನೋಡಿ

ಹತ್ತಿಯಂಥ ಬೆಳಗಿಗೆ
ಕುಡಿಯೆಂದು ಸ್ವಾಗತ
ಕೋರುವ ಚಹಾ
ತಾನೇ ಮಗು ಸ್ನಾನ ಮಾಡಿದಂತೆ

ಅತಿಯಾದರೆ…..
ಎಸಿಡಿಟಿಯೋ, ಹೊಟ್ಟೆ
ಉಬ್ಬರವೋ, ಹಸಿವಿನ ಕಡಿತವೋ
ಲೆಕ್ಕಕ್ಕಿಲ್ಲ, ಚಹಾ ಪ್ರಿಯರಿಗೆ

ನೀರಿನೊಂದಿಗೆ ಸಕ್ಕರೆ
ಚಹಾ ಪುಡಿ ಎರಡೂ ಒಮ್ಮೆಯೇ
ಹಾಕಿ ಗೊತ್ತಿಲ್ಲ , ಮೊದಲು ಸಪ್ಪನೆಯ
ನಂತರ ಸಕ್ಕರೆಯ ಪೇಯ

ಶುಗರ್, ಬಿಪಿ ರೋಗಗಳ
ನರಳಾಟದಲಿ ದಿನ
ಹತೋಟಿಯ ಅನಿವಾರ್ಯ
ಕ್ಷಣ ಕ್ಷಣವೂ ನೆನಪಿಸುವ

ಎಂಥ ರುಚಿಯೋ ಕಾಣೆ
ಆ ಸಪ್ಪನೆಯ ದ್ರವದಲ್ಲಿ
ಅಪ್ಪ ಆನಂದಿಸುವ ಪರಿ
ಮತ್ತೆ ತಯಾರಿಸಲು ಪ್ರೇರಣೆ

ಒಂದೊಂದು ಗುಟುಕು
ಸವಿಯ ಚಣ ಅಪ್ಪ
ಎದುರು ಕುಳಿತು ತನಗೂ
ಬೇಡಿದಂತೆ ಭಾಸ

‍ಲೇಖಕರು Admin

15 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading