ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಹಾ ಎಂದರೆ ಬರೀ ಚ ಮತ್ತು ಹಾ ಏನು?

 

 

 

 

 

 

 

 

ಡಾ. ಗೋವಿಂದ ಹೆಗಡೆ

 

 

ಚಹಾ ಎಂದರೆ ಬರೀ ಚ ಮತ್ತು ಹಾ ಏನು ?

ಹಾಲು ನೀರು ಟೀ ಪುಡಿ ಸಕ್ಕರೆ
ಎಲ್ಲ ಹದವಾಗಿ ಬೆರೆತು
ಸೃಜಿಸಿದ ರಸಪಾಕ !

ಇಷ್ಟೇ ಸಾಕೇ ?
ಕುದಿ ಬೇಕು ಕುದಿಯಬೇಕು
ಕುದಿಯಿರದೇ ಎಲ್ಲಿ ರಸ ಸಿದ್ಧಿ ?

ಎಲ್ಲ ಆಗಿಯೂ ಚಹ
ರುಚಿ ಆದೀತೆಂಬ ಭರವಸೆಯಿಲ್ಲ
ಇಲ್ಲ ಸಪ್ಪೆ ಇಲ್ಲವೇ ಕಹಿ ಕಷಾಯ
ಅಥವಾ ಸಕ್ಕರೆ ಹೆಚ್ಚಾಗಿ- ಪಾಯಸ !

ಚಹ ಮಸ್ತ್ ಆಗಲು ಪರಿಕರಗಳಷ್ಟೇ
ಸಾಕೇ- ಬೇಡವೇ ಯೋಗಾಯೋಗ

ಹಾಗೆ ಹದಗೊಂಡ ರುಚಿರ ಪಾನೀಯ
ಚಹಾ-ಚಂದ್ರ
ಗಂಟಲನಾಳದಲಿಳಿದು
ಉದರ ಗಗಗನವ ಸೇರಿ
ಬೆಳಗತೊಡಗಿ

ಎಂಥ ದಿವ್ಯತೆಯ ಉದಯ
ನರ-ನಾಡಿಗಳಲ್ಲಿ !

ಹೌದು-
ಇದು ಬರೀ ಚಹವಲ್ಲೋ ಅಣ್ಣ !

 

‍ಲೇಖಕರು avadhi

9 December, 2017

3 Comments

  1. Sangeeta Kalmane

    ವಾವ್! ಚಾಯ್…….

  2. Rohini

    ಸೂಪರ್

  3. Smita

    ರುಚಿ ರುಚಿ ಚಹಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading