ಗಜಲ್

ಮಳೆ ಹನಿಗೂ ಮಂಕು ಕವಿದಿದೆ ನೀನಿಲ್ಲದ ಈ ದಿನ
ಚಳಿಯೊಂದು ಬಿಸಿ ಉಸಿರು ಬೇಡಿದೆ ನೀನಿಲ್ಲದ ಈ ದಿನ
ಆಷಾಡವೆಂದು ಗೊತ್ತಿದ್ದು ಮುರಿದು ಬಿಡೋಣ ಲೋಕದ ನಿಯಮ
ದಾರಿಯಲಿ ಹಾಕಿದ ಹೆಜ್ಜೆಗಳು ಎಲ್ಲಿಯವಳೆಂದು ಕೇಳಿವೆ ನೀನಿಲ್ಲದ ಈ ದಿನ
ಮಾತು, ನಗು, ಮುನಿಸು ಎಲ್ಲವೂ ಕಣ್ಣೊಳಗೆ ಕುಣಿಯುತ್ತಿವೆ ಪ್ರತಿ ಗಳಿಗೆ
ಹಾದಿ ತುಂಬಿದ ನಮ್ಮಿಬ್ಬರ ಕನಸು ಮತ್ತೆ ಮತ್ತೆ ಗರಿ ಬಿಚ್ಚಿವೆ ನೀನಿಲ್ಲದ ಈ ದಿನ
ಎದೆಯ ಸದ್ದಿಗೆ ಭಯವಾಗುತ್ತಿದೆ ನೀನೆಲ್ಲಿ ಬರುವುದಿಲ್ಲವೊ ಎಂದು
ರೂಪದ ಬಿಂಬವಿಡಿದ ಕಣ್ಣುಗಳು ನಿನ್ನ ನೋಡಲು ಕಾದಿವೆ ನೀನಿಲ್ಲದ ಈ ದಿನ
ಎಲ್ಲ ಎಲ್ಲವುಗಳಲ್ಲೂ ನಿನ್ನ ರೂಪದ ಅಮಲು ಹಿಡಿದಿವೆ `ಪ್ರಕಾಶ’ನಿಗೆ
ಖುದಾ ಕರುಣಿಸಿದ ಸ್ವರ್ಗ ಬಿಟ್ಟೆ ನಿನ್ನಿರುವ ನಂಬುವೆ ನೀನಿಲ್ಲದ ಈ ದಿನ






pritiyinda vanchitavad mansu priyakarannu kanalu paritapisuv abgeyalli gazala mudi bandidide. swrgakkintalu pritaya pari hecchu ennuava nimma gazal salugalu tumba chennagive….
Priyatamegaggi devarllai more iduv nimma prartane bega iderali. imma gazala barvanige chennagide prakash heege nimma gazal barhavannu munduvaresi….
super gazal.
wow nice prakash
ನಿಮ್ಮ ಗಜಲ್ ಚನ್ನಾಗಿದೆ.. ಬರೀತಾ ಇರಿ..
Shubhavagali nimma hejjege geleya
ಗಜಲ್ ಚೆನ್ನಾಗಿದೆ,ಹಾಗೇ ಗಜಲ್ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ. ಕನ್ನಡ ಕಾವ್ಯ ಪ್ರಕಾರಗಳಲ್ಲಿ ಗಜಲ್ ವೈಶಿಷ್ಟ್ಯತೆಯನ್ನು ಹೊಸ ಪ್ರಕಾರದ ವಸ್ತು ವೈವಿಧ್ಯಗಳಲ್ಲಿ ಬರೆಯಲು ಪ್ರಯತ್ನಿಸಿ ಶುಭಾಶಯಗಳು….
chennaagide ..
NICE…!
ಗಜಲ್ ಓದಿ ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು..