ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಲಿಸೊ ಮೋಡವ ತಡೆದು, ನಿನ್ನ ಹೆಸರನು ಬರೆದು..

 

 

 

 

ಆಸೆಗಳು..‌

ವಿಜಯಕುಮಾರ್ ನೆರ್ವೇಕರ್

 

 

 

ಚಂದ್ರಮನ ಮೇಲೊಂದು
ತುಂಡು ಜಾಗವಕೊಂಡು
ಚಂದದಾ ಮನೆಮಾಡಿ
ನಿನ್ನನಿರಿಸುವ ಆಸೆ!

ತಿಳಿ ನೀಲಿ ಆಗಸದಿ
ಹೊಳೆವ ಚುಕ್ಕಿಯ ಹೆಕ್ಕಿ
ಮೂಗುತಿಯನು ಮಾಡಿ
ನಿನಗೆ ತೊಡಿಸುವ ಆಸೆ!

ಚಲಿಸೊ ಮೋಡವ ತಡೆದು
ಒಲಿಸಿ ಕೆಳಗಿಳಿಸಿ
ನಿನ್ನ ಹೆಸರನು ಬರೆದು
ತೇಲಿಬಿಡುವ ಆಸೆ!

ಹಾರೊ ಹಕ್ಕಿಯ ಬೇಡಿ
ರೆಕ್ಕೆ ಬಾಡಿಗೆ ಪಡೆದು
ನಿನ್ನಯ ಜೊತೆಗೂಡಿ
ಹಾರಿ ಹೋಗುವ ಆಸೆ!

ಮಳೆಯ ಬಲೆಯನು ಹೆಣೆದು
ತಂಗಾಳಿ ಸೆರೆ ಹಿಡಿದು
ಮುಂಗುರುಳ ಬಳಿ ತಂದು
ಹರಿ ಬಿಡುವ ಆಸೆ!

ಹಾಲ್ಗಡಲ ಅಲೆ ಕಡೆದು
ಬಿಳಿ ನೊರೆಯ ಕೆನೆ ತೆಗೆದು
ನಿನ ಕೆನ್ನೆ ಗುಳಿಯೊಳಗೆ
ಬಚ್ಚಿಡುವ ಆಸೆ!

‍ಲೇಖಕರು avadhi

28 August, 2017

6 Comments

  1. Sangeeta Kalmane

    ವಾವ್!
    ಚಂದದ ಕಲ್ಪನೆ

    • ವಿಜಯಕುಮಾರ್

      ಧನ್ಯವಾದಗಳು

  2. Dadapeer P Jyman

    ಚೆನ್ನಾಗಿದೆ ವಿಜಯ…

    • ವಿಜಯಕುಮಾರ್

      ಧನ್ಯವಾದಗಳು ದಾದು

  3. Divya borkar

    ಅದ್ಬುತ ಸಾಲುಗಳು ,

    • ವಿಜಯಕುಮಾರ್

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading