ರವಿಕುಮಾರ್ ಟೆಲೆಕ್ಸ್
ಬಾಲ್ಕನಿಯಲ್ಲಿ ನಿಂತು
ನನಗೂ ಚಪ್ಪಾಳೆ ತಟ್ಟಬೇಕೆನಿಸುತ್ತಿದೆ…
ಎಲ್ಲರೂ ನನ್ನತ್ತ ನೋಡುವಾಗ
ನಾನು ಬೀಗಬೇಕು ಭಿನ್ನಾಣದಿಂದ
ಎತ್ತರದಲ್ಲಿದ್ದೇನೆ ಎಲ್ಲರಿಗಿಂತಲೂ
ಎಂದೊಮ್ಮೆಯಾದರೂ ….
ಇಲ್ಲೇ ನೆಲಕ್ಕೆ ಹೂತು ಹೋದ ಜಗುಲಿ
ಹುಡುಕುತ್ತಿದ್ದೇನೆ
ಅನಾದಿಕಾಲದಿಂದಲೂ..
ಅದರ ಮೇಲಾದರೂ ನಿಂತು ಇಂದು
ದೊರೆಯ ಕಿವಿಗಳಿಗೆ,
ನನ್ನ ಮುಟ್ಟಲಾರದ ‘ವೈರಸ್’ ಗಳಿಗೆ ತಲುಪುವಂತೆ
ದೇಶಕ್ಕಾಗಿ ಒಂದು ಚಪ್ಪಾಳೆ ತಟ್ಟಬೇಕಿದೆ.

ನಿಮ್ಮ ಆದೇಶ ಪಾಲಿಸಿ
ದೇಶವಾಸಿಯಾಗುತ್ತೇನೆ
ನನ್ನ ನೋವು- ಸಂಕಟಗಳಲ್ಲದಿದ್ದರೂ
ನನ್ನ ಒಂದು ಚಪ್ಪಾಳೆಯಾದರೂ
ನಿಮ್ಮೆಲ್ಲರಿಗೂ ಕೇಳಿಸಲಿ
ಒಂದು ಬಾಲ್ಕನಿ ಕಟ್ಟಿಸಿಕೊಡಿ
ಆ ಒಂದು ಸಂಜೆಯಾದರೂ ಕಣ್ಣ ಕೆಳಗೆ ಕಾಣುವ
ಬಣ್ಣ ಬಣ್ಣದ ಬೆಳಕ ನೋಡಿ
ನಲಿಯುತ್ತೇನೆ.






ಮೋದಿ ಹೇಳಿದ್ದಕ್ಕೆಲ್ಲಾ ವಿರುದ್ಧವಾಗಿ ಬರೆಯಲೇಬೇಕೆಂಬ ಮನಸ್ಥಿತಿ
ವೈರಸ್ ಕಾಟ ಮುಗಿದು ನಿಟ್ಟುಸಿರು ಬಿಡುವ ಕಾಲ ಬಂದಿದೆ ಸಾಕು.. ಇದು ಯಾರು ಯಾರನ್ನು ಅವಹೇಳನ ಮಾಡುತ್ತಾ ಕುಳಿತುಕೊಳ್ಳುವ ಕಾಲವಲ್ಲ… ಅಕ್ಷರಸ್ಥ ಮೂರ್ಖರು, ದುಷ್ಟರು ವೈರಸ್ ಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಲಕಾಲಕ್ಕೆ ಕೆಟ್ಟ ಹಾನಿಯನ್ನೇ ಮಾಡಿದ್ದಾರೆ…..
ಆಡಳಿತಗಾರರು ಸ್ವಲ್ಪ ಎಚ್ಚರಿಕೆಯಿಂದ ನಿರ್ಣಯ ತೆಗೆದುಕೊಳ್ಳಬೇಕು….
ಕವಿತೆ ಚೆನ್ನಾಗಿದೆ….. ಪ್ರಭುತ್ವವನ್ನು ವಿಡಂಬನೆ ಮಾಡುವುದಷ್ಟೇ ಕಾವ್ಯವಲ್ಲ…..