– ವಿಜಯಕಾಂತ ಪಾಟೀಲ
ಮೊನ್ನೆ 18-06-2014 ಕ್ಕೆ ಎಪ್ಪತ್ತೈದು ವಯೋಮಾನ ಪೂರೈಸಿದ ಬಂಡಾಯದ ಪ್ರೊ.ಚಂದ್ರಶೇಖರ ಪಾಟೀಲ(ಚಂಪಾ) ಅವರನ್ನು ಮನದೊಳಗೆ ಕೆದಕಿಕೊಂಡು ಕುಂತಾಗ ಅವರು `ಕಾವ್ಯಗಿರಿ’ ಯಾಗಿ ಕಂಡಿದ್ದು ಹೀಗೆ…………..
ಚಂಪಾ `ಗಿರಿ’ಯಲ್ಲಿ…

ಬುದ್ಧಿಗೆ ತುಕ್ಕಿಲ್ಲ ಭಾವಕ್ಕೆ ಸುಕ್ಕಿಲ್ಲ
ಈ ಆಸಾಮಿ ಬದಲಾಗಿಲ್ಲ
ಬದಲಾಗುವುದೂ ಇಲ್ಲ
ಟಿಕ್ಕಾ ಬದಲಾಗಿದೆ,ಇದು ಪಕ್ಕಾ!
ಲೆಕ್ಕಗಳಿನ್ನೂ ಚುಕ್ತಾ ಆಗಿಲ್ಲ;
ಎಲ್ಲೇ ಹೋಗಲಿ ಬರಲಿ,
ಬಾರಿಕೋಲು ಮಾತ್ರ ಹೆಗಲ ಮೇಲೆಯೇ;
ಬಾಯ್ಕುಕ್ಕಿ, ಮುಗುದಾಣ,
ಹಂಗಡ ಖಾಯಂ ಸಂಗಡ..!
ನಾಲಗೆ ಮತ್ತು ಮೆದುಳ ಸಂಬಂಧ
ಇನ್ನೂ ಚೊಲೋ ಇದೆ
ತಲೆ ಎಪ್ಪತ್ತೈದು ಕಂಡಿದೆ
ಅನ್ನಲಿಕ್ಕೆ ಜನನ ಪ್ರಮಾಣಪತ್ರವೊಂದೇ ಪುರಾವೆ..!
ಬೇಡಬೇಡವೆಂದರೂ `ಸೋ ಕಾಲ್ಡ್…’
ಪಟ್ಟ ಲಭ್ಯವಾಗಿದೆ,
ಇದಕ್ಕೆ ತೀವ್ರ ವಿಷಾದವೂ ಇದೆ..!
ಜ್ಞಾನಕ್ಕೆ ಪೀಠ ಪ್ರಧಾನವಲ್ಲ-
ಗೊತ್ತಾಗಿ ತುಂಬ ಹೊತ್ತಾಗಿದೆ
ಅವರಿವರು ಅಪಾರ ಪ್ರೀತ್ಯಾದರಗಳಿಂದ ಪ್ರದಾನ ಮಾಡಿದ
`ಅಡ್ಡ ಪ್ರಶಸ್ತಿ’ಗಳೇ ಉದ್ದಕೂ ಹಾಸಿ ಹೊದೆಸುವಷ್ಟಿವೆ;
ಬಿರುದು-ಬಾವಲಿಗಳು ಬಿದಿರಂತೆ ಗಟ್ಟಿಯಲ್ಲ
ಎಂಬುದನ್ನೂ ಕಂಡುಕೊಂಡಾಗಿದೆ
ಮೂಸಿ ಮುಟ್ಟಿ ಹಿಸುಕಿ ಜೊಲ್ಲ ಮಳೆಗರೆವ
ಹಲ್ಲುಗಿಸುಕತನ ಬಿಲ್ಕುಲ್ ನಿಲ್,
ಇಂಥ ಪರಮಾನ್ನ ಸವಿಯೇ
ಪಟ್ಟು ಹಾಕಿ ಕಾದುವ ಕಾಯುವ
ಕಂತ್ರಿ ಖಯಾಲಿಯ ಎಂದೂ ಒಲ್ಲ;
ಅಯ್ಯಾ.. ಎಂದು ಬೇಡದ ಜಂಗಮ,
ಕನ್ನಡಕ್ಕಾಗಿ ಕೈ ಎತ್ತಿದರೆ ಇಳಿಸುವುದೇ ಇಲ್ಲ..!
…. >
ಈ ಹೆಸರಲ್ಲೊಂದು `ಪೀಠ’ ಇದೆ;
ನೋ ರೆಜಿಸ್ಟ್ರೇಷನ್, ಪದಾಧಿಕಾರಿಗಳೇ ಇಲ್ಲ!
ನಸಗುನ್ನಿಯ ಹೆದರಿಕೆ,
ಅತ್ತ ಯಾರೂ ತಲೆ ಹಾಕುವುದಿಲ್ಲ;
ಸುತ್ತ ಮುತ್ತ ಕತ್ತು ಹೊರಳಾಡಿದರೂ
ಬ್ರಹ್ಮಾಂಡವೆಲ್ಲ ಕಡಿತ..!
ನೋಂದಾಗದ ಸದಸ್ಯರ ಬಲಾಬಲ,
ಸುಗಮಾಡಳಿತ ನಡೆಸುವಷ್ಟಿದೆ;
ಈ ಪೀಠಾಡಳಿತ ಬಿದ್ದು ಹೋದದ್ದೇ ಇಲ್ಲ,
ಅಷ್ಟೊಂದು ದಷ್ಟಪುಷ್ಠ..!
ಕಡಕ್ರೊಟ್ಟಿ ಪುಂಡಿಪಲ್ಲೆ ಕರಿಂಡಿ ಕೆಂಪುಚಟ್ನಿ
ಎಣಗಾಯೀ ಮೊಳಕೆಕಾಳ ಒಗ್ಗರಣೆಗಳ
`ಖಾರ’ತನ ನೆತ್ತಿಗೇರಿದರೂ ಕೆನೆಮೊಸರನ್ನದ ಮಜಾ,
ಮೂಲವ್ಯಾಧಿಗೆ ಖಾಯಂ ಸಜಾ!
ಸೋಗಲಾಡಿತನವಲ್ಲದ ಖಾಸಾತನ;
ಅಪ್ಪಟ ಪ್ರೀತಿ,
ದ್ವೇಷದೊಳೂ ಜೀವಂತಿಕೆಯ ಸಾಚಾತನ!
ಪ್ರಾಧಿಕಾರ-ಪರಿಷತ್ತಿನ `ಗೂಟ’ ಎಡತಾಕಿ
ಬಲತಾಕಿ ಬಂದರೂ ಮತ್ತೇರದ ಮೆತ್ತೆ,
ರಂಗಾಗದ ಕಪಾಳ!
`ಚಂಪಾತನ’ವೆಂದೂ `ಚಂಪಾಗಿರಿ’ಯಾಗಲೇ ಇಲ್ಲ,
ಅಂಥ ಮೆಂಟೇನೆನ್ಸು-ಲೆವೆಲ್ ಬ್ಯಾಲೆನ್ಸು!
ಎಲ್ಲದನ್ನು ಬೆಸಗೊಂಡ ಹೊಸಗೊಂಡ
ಒಳಗೊಂಡ ಚಂಪಾ,
`ಗಿರಿ’ಯೇ ಅಂದರೂ ಸರಿಯೇ’,
ಯಾರೂ ಹಲ್ಲು ಮುರಿಯುವುದಿಲ್ಲ..!
*
(ಎಪ್ಪತ್ತೈದಕ್ಕೊಂದು ಕೆದಕು)






tumba chennaagi bandide champaa avra vyaktitva..abhinandanegaLu..haagu champa avarige shubhaashyagaLu..!!!
chennagide sir…ishtavaaytu
gud one patilre….best best best…
“champa’ andarene hemme paduvantha ondu vyakthithva!
very nice real poetry with all the dhwani, khasa bhaashe praasa, upame and roopakas. Champa is really really lucky to have this poem written on him
ಹೆಹೆತ್ತಳೊ ಹೆತ್ತಳು ಈ ಹಳವಂಡವ ಕನ್ನಡಮ್ಮ
ಕಂಡವರನ್ನು ಕಾಣದವರನ್ನು
ಗಿಲ್ಲಲೆಂದೇ ತಳೆದ ಜನ್ಮ
ನಮ್ಮ ಕುರ್ಚಿವಾಲರು
ಲಾಭಕ್ಕಾಗಿ ಹಾರಲು ಸಿದ್ಧ ಯಾವುದಾದರೂ ಬೇಲಿ
ನಮ್ಮ ಈ ಜನನಾಯಕರು ನಮ್ಮ ಚಂಪಾ ಕೈಲಿ
ಹೊಂದುವರು ಭರಪೂರ ವ್ಯಂಗ ಗೇಲಿ
ಸಾಹಿತಿ ಪೋಲಿ
ಅಡಿಗರಿಂದಿಡಿದು
ಮುಡಿಗರಾದ
ರನ್ನ ಪಂಪರು
Run and Pumpರು ಆಗುವರು
ಚಂಪರ ಮಾತು ಛಾಟು
ಸಮಾಜದ ಮಂಪರು
ಕಳೆಯುವ ಮೆಣಸಿನ ಘಾಟು
viji…
kavite bhaalaa chalo aite nodrepaa…
Manikanth
champa avar kampu sayitha, vichara, vyangagalu hriyuthalle irali rajikiya kshethra avrannu unnatha sthanakke karadhoyali samajakke inthavar agathya thurthagi beku