ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಡೆ ಮೇಲಿನ ಚಿತ್ರದಲ್ಲಿ..

ಅಪ್ಪನ ಆತ್ಮ

ಜಗದೀಶ್ ಜೋಡುಬೀಟಿ

 

ಸತ್ತಂತೆ ನಟಿಸುವ ಅಪ್ಪನ ಆತ್ಮಕ್ಕೆ
ಅಮ್ಮ ಮುಡಿಸಿದ ಕೆಂಪು ದಾಸವಾಳ ಮೊಗ್ಗು
ಅಪ್ಪ ಸಾಯುವ ಮೊದಲು
ಅಮ್ಮನ ನೆತ್ತಿ ತುಂಬಾ ಅರಳಿದ ಸೂರ್ಯ ಬಿಂಬ
ಬೇವು ಬೆಲ್ಲದಂತೆ ಬೆರೆತವರು
ಅಪ್ಪನೀಗ ಗೋಡೆ ಮೇಲಿನ ಭಾವಚಿತ್ರ
ಅಮ್ಮ ಸಜೀವ ಏನೋ ವಿಚಿತ್ರ
ದೇವರ ಕೋಣೆಯಲ್ಲಿ ಕುಂಕುಮ ಕರಡಿಗೆ
ತುಂಬಿಕೊಳ್ಳುವುದಿಲ್ಲ, ಗಾಜಿನ ಬಳೆ ಶಬ್ದ ಮೂಡುವುದಿಲ್ಲ
ಅಂದು ಅಮ್ಮನ ಮೊಗ ತುಂಬಾ ನಗುವಿತ್ತು
ಮಲ್ಲಿಗೆ ಮುಡಿದ ಸಂಭ್ರಮವಿತ್ತು
ಅಪ್ಪ ಸತ್ತಿದ್ದಾರೆ ಅನ್ನುತ್ತಿದ್ದಾರೆ
ಅಕ್ಕ ಪಕ್ಕ, ಮನೆಯವರು, ನೆಂಟರಿಷ್ಟರು

ಸತ್ತಿದ್ದು ಅಪ್ಪನಲ್ಲ
ಕೈಬಳೆ, ಕಾಲುಂಗುರ, ಸಿಂಧೂರ, ಬಿಚ್ಚಿಟ್ಟು
ಬಿಳಿಸೀರೆ ಉಟ್ಟು
ಅಪ್ಪನ ಆತ್ಮದೊಡನೆ ಮಾತನಾಡುವ ಅಮ್ಮ
ಅಪ್ಪ ಸತ್ತಂತೆ ನಟಿಸುತ್ತಿದ್ದಾರೆ
ಗೋಡೆ ಮೇಲಿನ ಚಿತ್ರದಲ್ಲಿ
ಅಮ್ಮನ ಸಿಂಧೂರ, ಕೈಬಳೆ, ಕಾಲುಂಗುರ
ಮಲ್ಲಿಗೆ ಮುಡಿದುಕೊಳ್ಳುತ್ತಾ ನಗುತ್ತಿದ್ದಾರೆ
ಅಮ್ಮನ ಸಂಭ್ರಮವೀಗ ಅಪ್ಪನ ಗೋಡೆ ಚಿತ್ರದಲ್ಲಿ

 

‍ಲೇಖಕರು admin

17 July, 2017

1 Comment

  1. Lalitha siddabasavayya

    ವಾಹ್, ಕಡಿಮೆ ಮಾತು ಹೆಚ್ಚು ಅರ್ಥ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading